Asianet Suvarna News Asianet Suvarna News

'ಕೆ.ಆರ್. ಪೇಟೆಯಲ್ಲಿ JDS ಸೋತಿದ್ದು ಹೊಟ್ಟೆ ಉರಿಯುತ್ತಿದೆ'..!

ಜೆಡಿಎಸ್ ಭದ್ರಕೋಟೆ ಎಂದೇ ಕರೆಯಲಾಗುವ ಕೆ.ಆರ್. ಪೇಟೆಯಲ್ಲಿ ಜೆಡಿಎಸ್‌ ಬಿಜೆಪಿ ಗೆಲುವು ಸಾಧಿಸಿ ಮೊದಲಬಾರಿ ಖಾತೆ ತೆರೆದಿದ್ದು, ಜೆಡಿಎಸ್‌ಗೆ ದೊಡ್ಡ ಸೋಲು ಎಂದೇ ಹೇಳಲಾಗುತ್ತಿದೆ. ಮಂಡ್ಯದಲ್ಲಿ ಜೆಡಿಎಸ್ ಕೃತಜ್ಞತಾ ಸಭೆ ನಡೆದಿದ್ದು, ಪಕ್ಷದ ನಾಯಕರು ಏನು ಹೇಳಿದ್ದಾರೆ..? ಇಲ್ಲಿ ಓದಿ.

jds thanks giving meeting in kr pet
Author
Bangalore, First Published Dec 14, 2019, 2:50 PM IST

ಮಂಡ್ಯ(ಡಿ.14): ಜೆಡಿಎಸ್ ಭದ್ರಕೋಟೆ ಎಂದೇ ಕರೆಯಲಾಗುವ ಕೆ.ಆರ್. ಪೇಟೆಯಲ್ಲಿ ಜೆಡಿಎಸ್‌ ಬಿಜೆಪಿ ಗೆಲುವು ಸಾಧಿಸಿ ಮೊದಲಬಾರಿ ಖಾತೆ ತೆರೆದಿದ್ದು, ಜೆಡಿಎಸ್‌ಗೆ ದೊಡ್ಡ ಸೋಲು ಎಂದೇ ಹೇಳಲಾಗುತ್ತಿದೆ.

ಮಂಡ್ಯ ಕೆ. ಆರ್. ಪೇಟೆಯ ನಂಜಮ್ಮ ಮುದ್ದೇಗೌಡ ಸಮುದಾಯದ ಭವನದಲ್ಲಿ ಜೆಡಿಎಸ್‌ ಕೃತಜ್ಞತಾ ಸಭೆ ನಡೆದಿದ್ದು, ಸಭೆ ಆರಂಭದಲ್ಲೇ ಪಕ್ಷದ ನಾಯಕರ ವಿರುದ್ಧ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆ. ಆರ್. ಪೇಟೆಯಂತಹ ಕ್ಷೇತ್ರದಲ್ಲೇ ನಾವು ಸೋತಿದ್ದು ಹೊಟ್ಟೆ ಉರಿಯುತ್ತಿದೆ. ನೀವು ಜವಾಬ್ದಾರಿಯಿಂದ ಚುನಾವಣೆ ಮಾಡಲಿಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಜಾರಕಿಹೊಳಿ ಅಥವಾ ಶ್ರೀರಾಮುಲುಗೆ ಡಿಸಿಎಂ ಪಟ್ಟ ಕೊಡುವ ಚಿಂತನೆ'..!

ಮಾಜಿ ಸಚಿವ ರೇವಣ್ಣ ಹಾಗೂ ಪುಟ್ಟರಾಜು ಅಸಮಾಧಾನಿತ ಕಾರ್ಯಕರ್ತರನ್ನು ಸಮಾಧಾನಪಡಿಸಿದ್ದಾರೆ. ನಾವು ಚುನಾವಣೆಯಲ್ಲಿ ಯಾಮಾರಿದ್ದೇವೆ. ನಾವು ಸೋಲ‌ಲು ಕಾರಣವಾದ ತಪ್ಪುಗಳ ಬಗ್ಗೆ ಚರ್ಚಿಸಲು ಇಂದು ಸಭೆ ಕರೆದಿದ್ದೇವೆ. ಚರ್ಚೆ ಜೊತೆಗೆ ಜೆಡಿಎಸ್‌‌ಗೆ ಮತ ನೀಡಿದ ಮತದಾರರಿಗೆ ಕೃತಜ್ಞತೆ ಹೇಳಲು ಈ ಸಭೆ ಕರೆದಿದ್ದೇವೆ. ದಯಮಾಡಿ ಈ ಸಭೆಯಲ್ಲಿ ಸೋಲಿಗೆ ಕಾರಣವಾದ ಅಂಶಗಳನ್ನಷ್ಟೇ ಚರ್ಚೆ ಮಾಡೋಣ. ಅನಾವಶ್ಯಕ ಚರ್ಚೆ ಬೇಡ ಎಂದು ಕಾರ್ಯಕರ್ತರನ್ನು ಸಮಾಧಾನಪಡಿಸಿದ್ದಾರೆ.

'ಇವರೆಂತ ಕಳ್ಳನ್ ಮಕ್ಳು'..? ದೇವೇಗೌಡ ಕುಟುಂಬದ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ

ಈ ಬಾರಿ ಮಾಡಿದ ತಪ್ಪು ಮುಂದೆ ಮಾಡದೆ ಮತ್ತೊಮ್ಮೆ ಜೆಡಿಎಸ್‌ ಬಾವುಟ ಹಾರಿಸುತ್ತೇವೆ ಎಂದು ರೇವಣ್ಣ ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ. ಮಾಧ್ಯಮದವರನ್ನು ಹೊರಗಿಟ್ಟು ಸಭೆ ನಡೆಸುವಂತೆ ಹೇಳಿದ ಪರಾಜಿತ ಅಭ್ಯರ್ಥಿ ದೇವರಾಜು ಅವರ ವಿರುದ್ಧ ಸಿ. ಎಸ್‌. ಪುಟ್ಟ ರಾಜು ಗದರಿದ್ದಾರೆ

ಮಾಧ್ಯಮವನ್ನು ಹೊರಗಿಟ್ಟು ಸಭೆ ಮಾಡೋದೇನಿದೆ..? ಅವರ ಕೆಲಸ ಅವರು ಮಾಡ್ತಾರೆ ನಮ್ಮ ಕೆಲಸ ನಾವು ಮಾಡೋಣ ಎಂದು ಗದರಿದ ಸಿ. ಎಸ್. ಪುಟ್ಟರಾಜು ದೇವರಾಜುಗೆ ಗದರಿದ್ದಾರೆ. ಸಭೆಯಲ್ಲಿ ಮಾಜಿ ಸಚಿವ ರೇವಣ್ಣ, ಪುಟ್ಟರಾಜು, ಶಾಸಕ ಬಾಲಕೃಷ್ಣ, ಅಭ್ಯರ್ಥಿ ದೇವರಾಜು ಭಾಗಿಯಾಗಿದ್ದರು.

Follow Us:
Download App:
  • android
  • ios