ಚಿಂತೆಗೀಡು ಮಾಡಿದೆ ಮಲೆನಾಡಿನ ಭೂ ಕುಸಿತ!

ಮಲೆನಾಡು ಏನಾಗುತ್ತೋ ಏನೋ ಅನ್ನೋ ಭವಿಷ್ಯ! ಮಲೆನಾಡಿನ ಜನರಲ್ಲಿ ಮನೆಮಾಡಿದ ಆತಂಕ! ಮಲೆನಾಡಿನ ಬೆಟ್ಟ-ಗುಡ್ಡ, ಭೂಕುಸಿತದ ಚಿಂತೆ! ಎಕರೆಗಟ್ಟಲೇ ಕಾಫಿ-ಅಡಿಕೆ ತೋಟ, ಸೇತುವೆ ನಾಶ! ಮಳೆ ನಿಂತ ಬಳಿಕ ಗುಡ್ಡ ಕುಸಿತದ ಭೀತಿ
 

First Published Aug 23, 2018, 3:50 PM IST | Last Updated Sep 9, 2018, 9:10 PM IST

ಚಿಕ್ಕಮಗಳೂರು(ಆ.23): ಮಲೆನಾಡು ಏನಾಗುತ್ತೋ.. ನಮಗೆ ಭವಿಷ್ಯ ಇದೆಯೋ.. ಇಲ್ವೋ ಎಂಬ ಆತಂಕ ಮಲೆನಾಡಿಗರಲ್ಲಿ ದಟ್ಟವಾಗಿದೆ. ಯಾಕಂದ್ರೆ, ಮಡಿಕೇರಿ ಅನಾಹುತದಿಂದ ಜನರು ಹೊರಬರುವ ಮುನ್ನವೇ ಮಲೆನಾಡಿನ ಬೆಟ್ಟ-ಗುಡ್ಡ, ಭೂಕುಸಿತ ಚಿಂತೆಗೀಡು ಮಾಡಿದೆ. ಮಲೆನಾಡಿನಾದ್ಯಂತ ಎಕರೆಗಟ್ಟಲೇ ಕಾಫಿ-ಅಡಿಕೆ ತೋಟ, ಸೇತುವೆಗಳು, ರಸ್ತೆಗಳು ಕುಸಿಯುತ್ತಿರೋದ್ರಿಂದ ಮಲೆನಾಡಿಗರು ಭವಿಷ್ಯದ ಬಗ್ಗೆ ಆತಂಕಕ್ಕೀಡಾಗಿದ್ದಾರೆ.

ಎರಡ್ಮೂರು ದಶಕಗಳ ಬಳಿಕ ಸುರಿದ ಮಹಾಮಳೆಯಿಂದ ಮಲೆನಾಡು ಅಕ್ಷರಶಃ ಜಲಾವೃತಗೊಂಡಿತ್ತು. ಮಳೆ ನಿಂತ ಬಳಿಕ ಶುರುವಾಗಿರೋ ಗಾಳಿಯ ವೇಗಕ್ಕೆ ಮಲೆನಾಡಿಗರು ಮತ್ತಷ್ಟು ಕಂಗಾಲಾಗಿದ್ದಾರೆ. ಮಲೆನಾಡಿನ ಬಹುತೇಕ ಭಾಗಗಳಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗ್ತಿದ್ದು ಜನರಿಗೆ ಒಂದೆಡೆ ಆತಂಕ, ಮತ್ತೊಂದೆಡೆ ಜೀವ-ಜೀವನದ ಬಗ್ಗೆ ಗೊಂದಲ ಉಂಟಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..