Asianet Suvarna News Asianet Suvarna News

ಹುಣಸೂರು: ವಿಶ್ವನಾಥ್ ಸೋತರೆ ಏನೂ ಆಗಲ್ಲ ಎಂದ ಬಿಜೆಪಿ ಸಂಸದ..!

ಹುಣಸೂರು ಉಪಚುನಾವಣೆ ಸೋತರು ಏನು ಪರಿಣಾಮ ಬಿರೋಲ್ಲ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ. ಎಚ್‌. ವಿಶ್ವನಾಥ್ ಬಿಜೆಪಿಗೆ ಬರಲು ಪ್ರಮುಖ ಕಾರಣರಾಗಿದ್ದ ಶ್ರೀನಿವಾಸ್ ಪ್ರಸಾದ್ ಇದೀಗ ಫಲಿತಾಂಶಕ್ಕು ಮುನ್ನ ವಿಶ್ವನಾಥ್ ಸೋತರೆ ಏನು ಆಗೋಲ್ಲ ಎಂಬ ಹೇಳಿಕೆ ನೀಡಿದ್ದಾರೆ.

if vishwanath defeated in hunsur byelection nothing will happen says bjp mp srinivas prasad
Author
Bangalore, First Published Dec 8, 2019, 1:23 PM IST

ಮೈಸೂರು(ಡಿ.08): ಸೋತರೆ ಜಗತ್ತು ಮುಳುಗೋಗುತ್ತಾ../ ಸಿದ್ದರಾಮಯ್ಯ ಎಷ್ಟು ಸಲ ತೋಡೆ ತಟ್ಟಿ ಬಿದ್ದೋಗಿಲ್ಲ ಹೇಳಿ? ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಕೇಳಿದ್ದಾರೆ.

ಹುಣಸೂರು ಫಲಿತಾಂಶದ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಗರಂ ಆದ ಸಂಸದ ಶ್ರೀನಿವಾಸನ್ ಪ್ರಸಾದ್ ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಉಪಚುನಾವಣೆ ಫಲಿತಾಂಶಕ್ಕು ಮುನ್ನ ಸೋಲಿನ ಬಗ್ಗೆ ಭವಿಷ್ಯ ನುಡಿದ ಶ್ರೀನಿವಾಸ್ ಪ್ರಸಾದ್ ಹುಣಸೂರು ಉಪಚುನಾವಣೆ ಸೋತರು ಏನು ಪರಿಣಾಮ ಬಿರೋಲ್ಲ ಎಂದು ಹೇಳಿದ್ದಾರೆ.

ಸಚಿವ ಸ್ಥಾನಕ್ಕೆ ಲಾಬಿ ಮಾಡಲ್ಲ ಎಂದ್ರು ಶಾಸಕ ರಾಮದಾಸ್‌

ಎಚ್‌. ವಿಶ್ವನಾಥ್ ಬಿಜೆಪಿಗೆ ಬರಲು ಪ್ರಮುಖ ಕಾರಣರಾಗಿದ್ದ ಶ್ರೀನಿವಾಸ್ ಪ್ರಸಾದ್ ಇದೀಗ ಫಲಿತಾಂಶಕ್ಕು ಮುನ್ನ ವಿಶ್ವನಾಥ್ ಸೋತರೆ ಏನು ಆಗೋಲ್ಲ ಎಂಬ ಹೇಳಿಕೆ ನೀಡಿದ್ದಾರೆ. ನಾಳೆ ಬರುವ ಫಲಿತಾಂಶಕ್ಕೆ ಎಲ್ಲರು ಕಾಯುತ್ತಿದ್ದಾರೆ. ಇದು ಜನತೆಗೆ ಬಿಟ್ಟ ವಿಚಾರ. ಅನರ್ಹರ ಬಗ್ಗೆ ಜನರ ಮನಸ್ಥಿತಿ ಏನಿದೆ ಅಂತ ನಾಳೆ ಗೊತ್ತಾಗಲಿದೆ ಎಂದಿದ್ದಾರೆ.

ಸರ್ಕಾರ ಸ್ಥಿರವಾಗಿದೆ ನಾಳೆ ಹೆಚ್ಚು ಗೆದ್ದು ಮತ್ತಷ್ಟು ಸ್ಥಿರ ಆಗಲಿದೆ. ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯ ವೈಟ್ ವಾಶ್ ಆಗಲಿದ್ದಾರೆ. ಸೋಲುವವರ ಬಗ್ಗೆ ಈಗ ಮಾತನಾಡೋದು ಬೇಡ. ಗೆದ್ದವರೇಲ್ಲರಿಗು ಮಂತ್ರಿಭಾಗ್ಯ ಅಂತ ಸ್ವತಃ ಸಿಎಂ ಹೇಳಿದ್ದಾರೆ. ಬಿಜೆಪಿ ಅನರ್ಹರಿಗೆ ಕೊಟ್ಟ ಭರವಸೆ ಈಡೇರಿಸಲಿದೆ ಎಂದಿದ್ದಾರೆ.

ಮಧ್ಯಾಹ್ನದೊಳಗೆ ಹೊರ ಬೀಳಿದೆ ಹುಣಸೂರು ಬೈಎಲೆಕ್ಷನ್ ಫಲಿತಾಂಶ

15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಲಿದೆ. ಮುಂದಿನ ಮೂರುವರೆ  ವರ್ಷ ಸರ್ಕಾರ ಸುಭದ್ರವಾಗಿರಲಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದವರು ಯಾವ ಕಾರಣಕ್ಕಾಗಿ ರಾಜೀನಾಮೆ ನೋಡಿದೆವು ಎಂದು ಜನರ ಮುಂದೆ ಹೇಳಿದ್ದೇವೆ. ಪ್ರತಿಪಕ್ಷಗಳು ಕೂಡ ತಮ್ಮ ನಿಲುವನ್ನು ಹೇಳಿವೆ. ಎಲ್ಲವನ್ನೂ ಜನರು ತೀರ್ಮಾನ ಮಾಡಿದ್ದಾರೆ ಎಂದಿದ್ದಾರೆ. ನಾಳೆ ಫಲಿತಾಂಶ ಹೊರ ಬೀಳಲಿದೆ. ನಾಳೆ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಪೊಲೀಸರ ಮೇಲೆ ಕೂಗಾಡಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ವಿರುದ್ಧ FIR

Follow Us:
Download App:
  • android
  • ios