ಮಂಡ್ಯ(ಡಿ.09): ಇಂತಹ ಚುನಾವಣೆಯನ್ನು ನಾನು ನೋಡಿರಲಿಲ್ಲ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕೆ.ಆರ್. ಪೇಟೆಯಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ ಚಂದ್ರಶೇಖರ್ ಹೇಳಿದ್ದಾರೆ.

ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಜೆಡಿಎಸ್ ಭದ್ರಕೋಟೆ ಎನಿಸಿದ ಕೆ.ಆರ್. ಪೇಟೆಯಲ್ಲಿಯೇ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಕೆ. ಬಿ. ಚಂದ್ರಶೇಖರ್ ಹೀನಾಯ ಸೋಲನುಭವಿಸಿದ್ದಾರೆ.

RSSನವರು ಬಂದು ಹಣ ಹಂಚಿದ್ದಾರೆ, ಸೋಲು ನೋವು ತಂದಿದೆ ಎಂದ JDS ಅಭ್ಯರ್ಥಿ

ಕಾಂಗ್ರೆಸ್ ಕಾರ್ಯಕರ್ತರು ಧೃತಿಗೆಡಬೇಡಿ. ನಿಮ್ಮೊಂದಿಗೆ ನಾವಿದ್ದೇವೆ. ಮುಖ್ಯಮಂತ್ರಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ತವರು ತಾಲೂಕು ಅನ್ನೋ ಕಾರಣಕ್ಕೆ ಮತದಾರರು ಬಿಜೆಪಿಯನ್ನು ಆಶಿರ್ವದಿಸಿದ್ದಾರೆ. ಅಭಿವೃದ್ಧಿ ಆಸೆಯಿಂದ ಜನ ಮತಹಾಕಿದ್ದಾರೆ. ಅದನ್ನು ಬಿಎಸ್‌ವೈ ಗಮನಿಸಲಿ ಎಂದು ಹೇಳಿದ್ದಾರೆ.

ಈ ತಾಲೂಕಿನ ಅಭಿವೃದ್ಧಿ ಮಾಡಿ ಎಂದು ಬಿಎಸ್‌ವೈ ಅವರಿಗೆ ಮನವಿ ಮಾಡುತ್ತೇನೆ. ಈ ರೀತಿಯ ಚುನಾವಣೆಯನ್ನು ನಾನು ನೋಡಿರಲಿಲ್ಲ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಪರಾಜಿತ ಕಾಂಗ್ರೆಸ್  ಅಭ್ಯರ್ಥಿ ಕೆ.ಬಿ ಚಂದ್ರಶೇಖರ್ ಹೇಳಿದ್ದಾರೆ.

'ಕಣ್ಣೀರು ಹಾಕಿದ್ರೆ ಗೆಲುವು ಸಿಗಲ್ಲ', ರಿಸಲ್ಟ್‌ ಬಗ್ಗೆ ಕೋಟ ಮಾತು