ಮುಕ್ತ ವಿವಿಯಿಂದ ಮನೆ ಬಾಗಿಲಿಗೆ ಉನ್ನತ ಶಿಕ್ಷಣ
ಉನ್ನತ ಶಿಕ್ಷಣದಿಂದ ವಂಚಿತರಾಗಿರುವವರಿಗಾಗಿ ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲಡೆ ಎಂಬ ಘೋಷವಾಕ್ಯದೊಂದಿಗೆ ಕರ್ನಾಟಕ ರಾಜ್ಯ ಮುಕ್ತ ವಿವಿ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಉನ್ನತ ಶಿಕ್ಷಣ ನೀಡಲು ಮುಂದಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಹೇಳಿದರು.
ಚಾಮರಾಜನಗರ : ಉನ್ನತ ಶಿಕ್ಷಣದಿಂದ ವಂಚಿತರಾಗಿರುವವರಿಗಾಗಿ ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲಡೆ ಎಂಬ ಘೋಷವಾಕ್ಯದೊಂದಿಗೆ ಕರ್ನಾಟಕ ರಾಜ್ಯ ಮುಕ್ತ ವಿವಿ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಉನ್ನತ ಶಿಕ್ಷಣ ನೀಡಲು ಮುಂದಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಹೇಳಿದರು.
ನಗರದ ರಾಮಸಮುದ್ರ ಬಡಾವಣೆಯಲ್ಲಿರುವ ಕರಾಮುವಿ ಪ್ರಾದೇಶಿಕ ಕೇಂದ್ರದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶ್ವವಿದ್ಯಾನಿಲಯವು ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ 21 ಪ್ರಾದೇಶಿಕ ಕೇಂದ್ರಗಳನ್ನು ತೆರೆದು ಲೆಗ್ಯೂಲರ್ ವಿಶ್ವವಿದ್ಯಾನಿಲಯಗಳ ಉನ್ನತ ಶಿಕ್ಷಣಕ್ಕೆ ಸರಿಸಮನಾಗಿ ಮನೆ ಬಾಗಿಲಿಗೆ ಉನ್ನತ ಶಿಕ್ಷಣ ಕೊಡುವಲ್ಲಿ ಮುಂಚೂಣಿಯಲ್ಲಿದೆ ಎಂದರು.
ರಾಜ್ಯಾದ್ಯಂತ 21 ಪ್ರಾದೇಶಿಕ ಕೇಂದ್ರಗಳು, ಮತ್ತು 149 ಕಲಿಕಾರ್ಥಿ ಸಹಾಯ ಕೇಂದ್ರಗಳ ಮೂಲಕ ವಿದ್ಯಾರ್ಥಿ ಸ್ನೇಹಿ ಶಿಕ್ಷಣ ಸೇವೆಯನ್ನು ಒದಗಿಸುತ್ತ ಬಂದಿದ್ದು ಇಲ್ಲಿ ಪದವಿ/ಸ್ನಾತಕೋತ್ತರ ಶಿಕ್ಷಣ ಪಡೆದ ಸಾವಿರಾರು ಮಂದಿ ರಾಜ್ಯ, ಕೇಂದ್ರ ಸರ್ಕಾರದ ವಿವಿಧ ಶ್ರೇಣಿಯ ಸರ್ಕಾರಿ ಹುದ್ದೆ ಪಡೆದುಕಾರ್ಯ ನಿರ್ವಹಿಸುತ್ತಿದ್ದಾರೆ, ಕೆ.ಎ.ಎಸ್., ಐ.ಎ.ಎಸ್. ಪೊಲೀಸ್ ಅಧಿಕಾರಿಗಳಾಗಿ, ಅಧ್ಯಾಪಕರಾಗಿ ಆಯ್ಕೆಯಾಗುತ್ತಿದ್ದಾರೆ ಎಂದರು.
ಯು.ಜಿ.ಸಿ. ಮಾನ್ಯತೆ ಪಡೆದಿರುವ 61 ಸ್ನಾತಕ/ಸ್ನಾತಕೋತ್ತರ ಪದವಿ, ಡಿಪ್ಲೋಮಾ ಶಿಕ್ಷಣ ಕ್ರಮಗಳಿಗೆ ಪ್ರವೇಶಾತಿ ನೀಡುತ್ತಿದ್ದು, ಇದರ ಜೊತೆಗೆ ಪ್ರಸಕ್ತ ಸಾಲಿನಿಂದ ಸಮಾಜ ಕಾರ್ಯ, ಪ್ರವಾಸೋದ್ಯಮ, ಭೂವಿಜ್ಞಾನ ಮತ್ತು ಇನ್ನಿತರ ಹೊಸ ಕೋರ್ಸ್‌ಗಳಿಗೆ ಪ್ರವೇಶಾತಿ ಪ್ರಾರಂಭ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು ಈ ವರ್ಷ ಒಂದು ಲಕ್ಷ ಪ್ರವೇಶಾತಿ ಸಾಧಿಸಬೇಕು ಎಂಬ ಗುರಿ ಹೊಂದಲಾಗಿದೆ ಎಂದರು.
ಏಕಕಾಲದಲ್ಲಿ ಎರಡು ಪದವಿಯನ್ನು ಪಡೆಯುವ ಅವಕಾಶವಿದ್ದು, ದೂರಶಿಕ್ಷಣ ನೀಡುವ ಏಕೈಕ ವಿವಿಯಾಗಿದೆ. ಸಾಂಪ್ರದಾಯಿಕ ವಿವಿಗಳು ನೀಡುವ ಪದವಿ ಮತ್ತು ಕರಾಮುವಿ ನೀಡುವ ಪದವಿಗಳು ಸಮಾನ ಅರ್ಹತೆ ಹೊಂದಿದೆ ಎಂದರು. 2022-23ರ ಜನವರಿ ಆವೃತ್ತಿಯ ಯುಜಿಸಿ ಅನುಮೋದಿತ ಕೋಸ್‌ಗಳ ಪ್ರದೇಶಾತಿ ಪ್ರಾರಂಭವಾಗಿದ್ದು, ಮಾಚ್‌ರ್ 31 ಕಡೆ ದಿನ. ಚಾಮರಾಜನಗರದ ಪ್ರಾದೇಶಿಕ ಕೇಂದ್ರದಲ್ಲಿಯೂ ಪ್ರವೇಶಾತಿ ಪಡೆಯಬಹುದಾಗಿದೆ ಎಂದರು.
ಚಾಮರಾಜನಗರÜದಲ್ಲಿ 2001ರಲ್ಲಿ ಪ್ರಾದೇಶಿಕ ಕೇಂದ್ರ ಸ್ಥಾಪಿಸುವುದರ ಮೂಲಕ ಜಿಲ್ಲೆಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದೆ. ಕಚೇರಿಯಲ್ಲಿ ನುರಿತ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಕರಾಮುವಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ನೀಡಲಾಗುತ್ತಿದೆ ಎಂದರು. ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ, ಡಿಫೆನ್ಸ್ ಹಾಗೂ ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ ಸ್ನಾತಕ/ ಸ್ನಾತಕೋತ್ತರ ಕೋರ್ಸಗಳ ಭೋದನಾ ಶುಲ್ಕದಲ್ಲಿ ಶೇಕಡ 15ರಷ್ಟುರಿಯಾಯಿತಿ ನೀಡಲಾಗುವರು.ಆಟೋ ಚಾಲಕರು ಮತ್ತು ಅವರ ಪತಿ/ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಸ್ನಾತಕೋತ್ತರ ಕೋರ್ಸ್, ಬೋಧನಾ ಶುಲ್ಕದಲ್ಲಿ ಶೇ.Ü 30 ರಷ್ಟುರಿಯಾಯಿತಿ ಇರುತ್ತದೆ. ಕೆಎಸ್‌ಆರ್‌ಟಿಸಿ ನೌಕರರಿಗೆ ಬೋಧನಾ ಶುಲ್ಕದಲ್ಲಿ ಶೇ. 25 ರಷ್ಟುರಿಯಾಯಿತಿ ಎಂದರು.
ತೃತೀಯ ಲಿಂಗ, ದೃಷ್ಟಿಹೀನ, ಕೋವಿಡ್-19ನಿಂದ ಮೃತಪಟ್ಟತಂದೆ, ತಾಯಿಯ ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗುವದು ಎಂದರು. ಪ್ರತಿ ತಾಲೂಕಿಗೆ ಒಂದು ಕರಾಮುವಿ ಕಲಿಕಾ ಸಹಾಯ ಕೇಂದ್ರ ತೆರೆಯಲು ಪ್ರಯತ್ನಿಸುತ್ತಿದ್ದು, ಚಾಮರಾಜನಗರ ಜಿಲ್ಲೆಯಲ್ಲಿ 2 ಕಲಿಕಾ ಸಹಾಯ ಕೇಂದ್ರಗಳಿವೆ. ನ್ಯಾಯಾಲಯದ ತಡೆಯಿಂದಾಗಿ ಕೆಲದಿನ ಪ್ರವೇಶಾತಿ ಕ್ಷೀಣಿಸಿತ್ತು. ಈಗ ನ್ಯಾಯಾಲಯದ ಆದೇಶ ಹೊರ ಬಿದ್ದನಂತರ ಮತ್ತೆ ಪ್ರವೇಶಾತಿ ಹೆಚ್ಚುತ್ತಿದ್ದು, ಎಲ್ಲಾ ಕಡೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಈ ಶೀಘ್ರದಲ್ಲಿ, ನ್ಯಾಕ್ ಮಾನ್ಯತೆ ಸಿಗಲಿದ್ದು, ಇದಕ್ಕಾಗಿ ಎಲ್ಲ ಸುಸಜ್ಜಿತ ಕಟ್ಟಡ, ಮೂಲ ಸೌಕರ್ಯಗಳು, ಬೋಧಕ ವರ್ಗ, ಪ್ರಾದೇಶಿಕ ಕೇಂದ್ರಗಳು ಕಲಿಕಾರ್ಥಿ ಸಹಾಯ ಕೇಂದ್ರಗಳ ಮಾಹಿತಿಯನ್ನು ಸಲ್ಲಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರಾಮುವಿ ಪ್ರಾದೇಶಿಕ ನಿರ್ದೇಶಕ ಮಹದೇವ ಎಸ್. ಭಾಸ್ಕರ್ ಇದ್ದರು.