ಶಾಲ್ಯಾಗಿದ್ದ ನಮ್ ಪುಸ್ತಕನೂ ಹೋಗ್ಯಾವ್; ನಮ್ ಮನಿನೂ ಸೋರತೈತಿ!
‘ನಮ್ ಸಾಲ್ಯಾಗ ಇದ್ದ ಪುಸ್ತಕ ಎಲ್ಲ ಹೋಗ್ಯಾವ್.. ನಮ್ ಮನಿನೂ ಸೋರತೈತಿ ಅಲ್ಲಿದ್ದ ಪುಸ್ತಕಾನೂ ಹಾಳಾಗ್ಯಾವ್.. ಸಾಲಿಗೆ ಹ್ಯಾಂಗ್ ಹೋಗಬೇಕ್.’ ಇದು ತಾಲೂಕಿನ ಹೆಬಸೂರು ಗ್ರಾಮದಲ್ಲಿನ ನೆರೆಯಿಂದ ತತ್ತರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿ ರಕ್ಷಿತಾ ಮಾಡಳ್ಳಿ ಹೇಳುವ ಮಾತು.
ಹುಬ್ಬಳ್ಳಿ (ಅ.23) : ‘ನಮ್ ಸಾಲ್ಯಾಗ ಇದ್ದ ಪುಸ್ತಕ ಎಲ್ಲ ಹೋಗ್ಯಾವ್.. ನಮ್ ಮನಿನೂ ಸೋರತೈತಿ ಅಲ್ಲಿದ್ದ ಪುಸ್ತಕಾನೂ ಹಾಳಾಗ್ಯಾವ್.. ಸಾಲಿಗೆ ಹ್ಯಾಂಗ್ ಹೋಗಬೇಕ್.’ ಇದು ತಾಲೂಕಿನ ಹೆಬಸೂರು ಗ್ರಾಮದಲ್ಲಿನ ನೆರೆಯಿಂದ ತತ್ತರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿ ರಕ್ಷಿತಾ ಮಾಡಳ್ಳಿ ಹೇಳುವ ಮಾತು. ಹೆಬಸೂರು ಶಾಲೆ ಬೆಣ್ಣಿಹಳ್ಳ-ನಿಗದಿ ಹಳ್ಳಗಳ ಪಕ್ಕದಲ್ಲೇ ಇದೆ. 9 ಕೊಠಡಿಗಳ ದೊಡ್ಡ ಶಾಲೆಯಿದು. 1ರಿಂದ 7ನæೕ ತರಗತಿ ವರೆಗೆ ನಡೆಯುವ ಈ ಶಾಲೆಯಲ್ಲಿ ಬರೋಬ್ಬರಿ 282 ವಿದ್ಯಾರ್ಥಿಗಳು ಕಲಿಯುತ್ತಾರೆ. 9 ಜನ ಶಿಕ್ಷಕರಿದ್ದಾರೆ.
ಅಪಾಯ ಮಟ್ಟಮೀರಿ ಹರಿಯುತ್ತಿರುವ ವೇದಾವತಿ
ರಸ್ತೆಗಿಂತ ತಳಭಾಗದಲ್ಲಿ ಈ ಶಾಲೆಯಿದೆ. ಕಳೆದ 12 ವರ್ಷಗಳಲ್ಲಿ ಬರೋಬ್ಬರಿ 7 ಸಲ ಈ ಶಾಲೆಯೂ ಅತಿವೃಷ್ಟಿಯಿಂದ ಜಲದಿಗ್ಬಂಧನಕ್ಕೊಳಗಾಗಿದೆ. ಅದರಲ್ಲಿ ಈ ವರ್ಷವೇ ಅಂದರೆ ಕಳೆದ ಒಂದು ತಿಂಗಳಲ್ಲಿ ಬರೋಬ್ಬರಿ ಮೂರು ಬಾರಿ ಜಲಾವೃತವಾದ ಶಾಲೆಯಿದು. ಮಳೆ ನೀರೆಲ್ಲ ಕೊಠಡಿಗಳೊಳಗೆ ನುಗ್ಗಿ ಹಾಜರಾತಿ, ದಾಖಲಾತಿ, ಮಕ್ಕಳ ನೋಟ್‌ಬುಕ್‌ಗಳೆಲ್ಲ ಹಾಳಾಗಿವೆ. ಅಕ್ಷರಶಃ ಕೊಚ್ಚಿಕೊಂಡು ಹೋಗಿವೆ. ಈವರೆಗೂ ಶಾಲೆಯ ಕೊಠಡಿಗಳಲ್ಲಿ ರಾಡಿ, ರೊಜ್ಜಿದೆ. ಶಾಲೆಯ 9 ಕೊಠಡಿಗಳ ಪೈಕಿ 5 ಕೊಠಡಿಗಳ ಪರಿಸ್ಥಿತಿ ಇದೆ ಆಗಿದೆ. ಈ ಕೊಠಡಿಗಳಲ್ಲಿ ತರಗತಿ ನಡೆಸುವುದು ಸಾಧ್ಯವೇ ಇಲ್ಲ. ಶಾಲೆಯ 4 ಕೊಠಡಿಗಳನ್ನು ಮಾತ್ರ ಬಳಸಲಾಗುತ್ತಿದೆ. ಇನ್ನುಳಿದ ಕೊಠಡಿಗಳಿಗಾಗಿ ಪಕ್ಕದಲ್ಲಿನ ಗಂಡು ಮಕ್ಕಳ ಶಾಲೆಯ ನಾಲ್ಕು ಕೊಠಡಿಗಳನ್ನು ಕೇಳಿಕೊಂಡು ತರಗತಿ ನಡೆಸಲಾಗುತ್ತಿದೆ.
ಇನ್ನು ಒಂದೇ ತಿಂಗಳಲ್ಲಿ ಮೂರು ಬಾರಿ ಜಲದಿಗ್ಬಂಧನಕ್ಕೊಳಗಾದ ಪರಿಣಾಮ 5 ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿವೆ. 5 ಕೊಠಡಿಗಳ 10 ಕಂಬಗಳ ಪೈಕಿ 6 ಕಂಬಗಳು ಈಗಾಗಲೇ ನೆಲಕ್ಕುರುಳಿವೆ. ಕೊಠಡಿಗಳೆಲ್ಲ ಅಪಾಯ ಸ್ಥಿತಿಗೆ ತಲುಪಿವೆ.
ಸಾಂಕ್ರಾಮಿಕ ರೋಗದ ಭೀತಿ:
ಮೂರ್ನಾಲ್ಕು ಬಾರಿ ಜಲಾವೃತವಾದ ಹಿನ್ನೆಲೆಯಲ್ಲಿ ಶಾಲೆಯ ಸುತ್ತಮುತ್ತಲು, ಕೊಠಡಿಗಳ ಒಳಗೆ ನೀರು ಶೇಖರಣೆಯಾಗಿದೆ. ಇದರಿಂದ ಮಕ್ಕಳು ನಿರಂತರ ಜಾರಿ ಬೀಳುವುದು ಮಾಮೂಲಾಗಿದೆ. ಇದರಿಂದ ಕೈಕಾಲು ಗಾಯ ಮಾಡಿಕೊಳ್ಳುತ್ತಿದ್ದಾರೆ. ಜತೆಗೆ ಜ್ವರ, ಕೆಮ್ಮು ನೆಗಡಿಯಿಂದ ಸಾಕಷ್ಟುಮಕ್ಕಳು ಬಳಲುವಂತಾಗಿದೆ. ಶಾಲೆಯ ಅಪಾಯಸ್ಥಿತಿಗೆ ತಲುಪಿದಂತಾಗಿರುವುದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂಜರಿಯುತ್ತಿದ್ದಾರೆ.
Dharwad Floods: ಸಾಧಾರಣ ಮಳೆಗೂ ಮಹಾನಗರ ತಲ್ಲಣ!
ಏನ್ಮಾಡಬೇಕು:
ಶಿಥಿಲಗೊಂಡ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮಗೊಳಿಸಿ ಮಂಜೂರಾಗಿರುವ ಹೊಸ ಕೊಠಡಿಗಳ ನಿರ್ಮಾಣ ಮಾಡಬೇಕು. ಅಲ್ಲಿವರೆಗೂ ಸುರಕ್ಷಿತ ಕಟ್ಟಡಕ್ಕೆ ಶಾಲೆಯನ್ನು ಸ್ಥಳಾಂತರ ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹ. ಅಪಾಯಕಾರಿ ಸ್ಥಿತಿಯಲ್ಲಿರುವ ಶಾಲೆಗೆ ಮಕ್ಕಳನ್ನು ಕಳುಹಿಸಲು ಪಾಲಕರು ಹಿಂಜರಿಯುವಂತಾಗಿದೆ. ಕೂಡಲೇ ಶಾಲಾ ಕಟ್ಟಡದ ಕೆಲಸ ಶುರು ಮಾಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.