Heart Attack: ವಿಧಿಯಾಟ.. ಕಾರ್ಮಿಕನಿಗೆ ಮೃತ್ಯು, ಸುದ್ದಿ ತಿಳಿಸಲು ಹೊರಟ ಮಾಲೀಕನಿಗೂ ಹೃದಯಾಘಾತ

* ಹೃದಯಾಘಾತದಿಂದ ಕೂಲಿ ಕಾರ್ಮಿಕನ ಸಾವು

* ಸುದ್ದಿ ತಿಳಿಸಲು ಹೊರಟ ಮಾಲೀಕರನೂ ಸಾವು!

* ಇಬ್ಬರೂ ಹೃದಯಾಘಾತದಿಂದ ನಿಧನ

*  ಶಿವಮೊಗ್ಗದಿಂದ ಘೋರ ಪ್ರಕರಣ ವರದಿ

heart attack worker and owner died shivamogga thirthahalli mah

ಶಿವಮೊಗ್ಗ( ಡಿ. 28)  ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಹೃದಯಾಘಾತದಿಂದ (Heart Attack)  ಕುಸಿದು ಬಿದ್ದು ಮೃತನಾದ. ಈ ವಿಷಯವನ್ನು ಬೇರೆಯವರಿಗೆ ತಿಳಿಸಲೆಂದು ಹೊರಟ ಮಾಲೀಕನಿಗೂ ವಿಧಿ ಹೃದಯಾಘಾತದ ಸಾವನ್ನೇ ಬರೆದಿತ್ತು.

ತೀರ್ಥಹಳ್ಳಿ (Thirthahalli ) ತಾಲೂಕು ಆರಗ ಗ್ರಾಮದಿಂದ ಘಟನೆ ವರದಿಯಾಗಿದೆ. ಕೂಲಿ ಕಾರ್ಮಿಕ ಭರ್ಮಪ್ಪ (45) ಹಾಗೂ ಮಾಲೀಕ, ನಿವೃತ್ತ ಶಿಕ್ಷಕ ದುಗ್ಗಪ್ಪ ಗೌಡ (75) ಇಬ್ಬರೂ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಭರ್ಮಪ್ಪ ಕೆಲಸ ಮಾಡುವಾಗ ಇದ್ದಕ್ಕಿದ್ದಂತೆಯೇ ಆರೋಗ್ಯದಲ್ಲಿ (Health) ಏರುಪೇರು ಉಂಟಾಗಿದೆ. ಕುಸಿದು ಬಿದ್ದ ತಕ್ಷಣ ದುಗ್ಗಪ್ಪ ಗೌಡ ಕುಟುಂಬದವರು ಸ್ಥಳಕ್ಕೆ ಬಂದಿದ್ದಾರೆ. ಅಷ್ಟರಲ್ಲಾಗಲೇ ಬರ್ಮಪ್ಪ ಸಾವನ್ನಪ್ಪಿದ್ದಾರೆ. ಈ ಸುದ್ದಿಯನ್ನು ಆತನ ಮನೆಯವರಿಗೆ ತಿಳಿಸಲು ದುಗ್ಗಪ್ಪ ಗೌಡ ಅವರು ತೆರಳುತ್ತಿದ್ದ ಸಂದರ್ಭದಲ್ಲಿ ಅವರಿಗೂ ಹೃದಯಾಘಾತವಾಗಿದೆ. ಅವರು ಕೂಡ ಮಾರ್ಗಮಧ್ಯದಲ್ಲಿ ಅಸುನೀಗಿದ್ದಾರೆ. ದುಗ್ಗಪ್ಪ ಗೌಡ ಹಾಗೂ ಬರ್ಮಪ್ಪ ಇಬ್ಬರ ಕುಟುಂಬದಲ್ಲು ಶೋಕ ಮಡುಗಟ್ಟಿದೆ.

ಪುನೀತ್ ಅಗಲಿಕೆ ನೋವು: ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ಅಭಿಮಾನಿಗಳನ್ನು ಅಗಲಿದ್ದರು. ಆ ನೋವು ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಈಗಲೂ ಒಂದಿಲ್ಲೊಂದು ಕಾರಣಕ್ಕೆ ಪವರ್ ಸ್ಟಾರ್ ಅವರನ್ನು ನೆನಪು ಮಾಡಿಕೊಳ್ಳುತ್ತಲೇ ಇರುತ್ತೇವೆ.  ಪುನೀತ್ ಅವರ ಆದರ್ಶಗಳನ್ನೇ ಅನುಸರಿಸಿದ ಅಭಿಮಾನಿಗಳು ನೇತ್ರದಾನ ಮಾಡುತ್ತಿದ್ದಾರೆ. 

Puneeth Rajkumar Eye Donation: ಅಪ್ಪು ನಿಧನದ ಬಳಿಕ 400 ಜನ ನೇತ್ರದಾನ

‘ಪವರ್‌ ಸ್ಟಾರ್‌’ ಪುನೀತ್‌ ರಾಜ್‌ಕುಮಾರ್‌ (Puneeth Rajkumat) ಅವರು ಹೃದಯ ಸ್ತಂಭನದಿಂದ ಮೃತಪಟ್ಟಬೆನ್ನಲ್ಲೇ ಸಾರ್ವಜನಿಕರಲ್ಲಿ ಹೃದಯದ ಆರೋಗ್ಯದ (Health) ಬಗ್ಗೆ ಕಾಳಜಿ ಹೆಚ್ಚಾಗಿದ್ದು, ರಾಜ್ಯಾದ್ಯಂತ ಹೃದಯ (Heart) ಪರೀಕ್ಷೆಗಾಗಿ ಜನ ಆಸ್ಪತ್ರೆ ಕಡೆ ಹೆಜ್ಜೆ ಹಾಕಿದ್ದರು.

ಬೆಂಗಳೂರು (Bengaluru), ಮಂಡ್ಯ, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಯುವಕರು, ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಹೃದಯದ ಪರೀಕ್ಷೆಗೆ ಮುಂದಾಗಿದ್ದರು.

ವಿಪರೀತ ಜಿಮ್‌ ಬೇಡ: ಯಾವುದೇ ವ್ಯಾಯಾಮ ಅತಿ ಎನ್ನುವಷ್ಟು ಮಾಡಬಾರದು. ವಾಕಿಂಗ್‌, ಸೈಕ್ಲಿಂಗ್‌, ಸ್ವಿಮ್ಮಿಂಗ್‌, ಜಿಮ್‌ ಯಾವುದೇ ಆದರೂ ನಿಯಮಿತ ಪ್ರಮಾಣದಲ್ಲೇ ಮಾಡಬೇಕು. ಜಿಮ್‌ನಲ್ಲಿ ವ್ಯಾಯಾಮ ಮಾಡುವ ಕ್ರಮಗಳು ಅವರವರ ಶರೀರ ಹಾಗೂ ವಯಸ್ಸಿಗೆ ತಕ್ಕಂತೆ ಇರಬೇಕು ಎಂದರು.

ಹೊಟ್ಟೆಬೆಳೆಸಿಕೊಳ್ಳಬೇಡಿ: ಬರೀ ಹೊಟ್ಟೆ ಬೆಳೆಸಿಕೊಳ್ಳುವುದು ಮಧುಮೇಹ (Diabites) ಹಾಗೂ ಹೃದಯ ಎರಡಕ್ಕೂ ಅಪಾಯ. ಇನ್ನು ಪ್ರೊಟೀನ್‌ ಡಯೆಟ್‌ಗಳಂತಹ ಕೃತಕ ಡಯೆಟ್‌ಗಳಿಗೆ ಹೋಗದೆ ಸ್ವಾಭಾವಿಕವಾಗಿರುವ ಮೊಟ್ಟೆ, ಮೊಳಕೆ ಕಾಳಿನಲ್ಲಿರುವ ಪ್ರೊಟೀನ್‌ ಸೇವಿಸಬೇಕು. ಇತಿಮಿತಿಯಲ್ಲಿ ಕಡ್ಡಾಯ ವ್ಯಾಯಾಮ ಮಾಡಬೇಕು ಎಂದು ಸಲಹೆ ನೀಡಿದರು.

ಯಾವಾಗ ಪರೀಕ್ಷೆ ಮಾಡಬೇಕು?: ಅತಿಯಾದ ಒತ್ತಡದ ಅನುಭವ, ಸತತವಾಗಿ ಎಡ ಭಾಗದ ಕತ್ತು, ಭುಜ, ಕೈ ನೋವು, ಎದೆ ಭಾಗದಲ್ಲಿ ವಿಪರೀತ ನೋವು, ಬೆವರುವುದು ಹಾಗೂ ಬೆನ್ನು ನೋವು ಕಾಣಿಸಿಕೊಂಡರೆ ಕೂಡಲೇ ಪರೀಕ್ಷೆಗೆ ಒಳಪಡಬೇಡಿ. ಈ ಲಕ್ಷಣಗಳು ಬೇರೆ ಕಾಯಿಲೆಗೂ ಗೋಚರಿಸಬಹುದು. ಆದರೆ, ವೈದ್ಯರ ಸಂಪರ್ಕಿಸಿ ಪರೀಕ್ಷೆಗೆ ಒಳಪಡುವುದು ಅಗತ್ಯ.

ಹೃದಯದ ಆರೋಗ್ಯಕ್ಕೆ ಟಿಫ್ಸ್‌: ಮಿತ ಆಹಾರ ಸೇವನೆ, ಮಾಂಸ ಸೇವನೆ ನಿಯಂತ್ರಣದಲ್ಲಿಡಿ. ಮಾಂಸಾಹಾರಿಗಳಾಗಿದ್ದರೆ ಮೀನು ಸೇವನೆಗೆ ಆದ್ಯತೆ ನೀಡಿ. ನಿತ್ಯ ಸೇವಿಸುವ ಉಪ್ಪು, ಸಕ್ಕರೆ, ಬೆಣ್ಣೆ, ಮೈದಾ, ಹಾಲು, ಪನ್ನೀರ್‌ ನಿಯಂತ್ರಣದಲ್ಲಿಡಿ. ಪ್ರೊಟೀನ್‌ಯುಕ್ತ ಆಹಾರ ಸೇವನೆಗೆ ಆದ್ಯತೆ ನೀಡಿ, ಕಾರ್ಬೊ ಹೈಡ್ರೇಟ್‌ ಹಾಗೂ ಕೊಬ್ಬಿನ ಅಂಶ ಕಡಿಮೆ ಇರುವ ಆಹಾರ ಇರಲಿ. ದಿನಕ್ಕೆ 6 ರಿಂದ 8 ಗ್ಲಾಸ್‌ ನೀರು ಕುಡಿಯಬೇಕು. ವಾರದಲ್ಲಿ 5 ದಿನವಾದರೂ ಕನಿಷ್ಠ 40 ನಿಮಿಷ ನಿಯಮಿತ ವ್ಯಾಯಾಮ ಅಥವಾ ನಡಿಗೆ, ನಿತ್ಯದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಹಾಡು ಕೇಳುವುದು, ಆಟ ಆಡುವುದು, ಧ್ಯಾನ, ಓಡಾಟ, ಯೋಗಾಭ್ಯಾಸದಂತಹ ಹವ್ಯಾಸಗಳಿಂದ ಒತ್ತಡಕ್ಕೆ ಮುಕ್ತಿ ನೀಡಬೇಕು.

ಹೃದಯ ಬಗ್ಗೆ ಕಾಳಜಿ ಯಾವಾಗಲೂ ಇರಲಿ: ಯಾವುದೇ ವ್ಯಾಯಾಮ ಅತಿ ಎನಿಸುವಷ್ಟುಮಾಡಬಾರದು. ನಿಯಮಿತ ಪ್ರಮಾಣದಲ್ಲೇ ಇರಬೇಕು. ಹೃದಯದ ಬಗೆಗಿನ ಕಾಳಜಿ ಒಂದು ದಿನಕ್ಕೆ ಸೀಮಿತವಾಗಬಾರದು. 35 ವರ್ಷ ದಾಟಿದ ಮಹಿಳೆಯರು, 40 ವರ್ಷ ಮೇಲ್ಪಟ್ಟಪುರುಷರು ಪ್ರತಿ ವರ್ಷ ಹೃದ್ರೋಗ ಪರೀಕ್ಷೆ ಮಾಡಿಸಿಕೊಳ್ಳಬೇಕು.

Latest Videos
Follow Us:
Download App:
  • android
  • ios