ಮಳವಳ್ಳಿ (ಅ.05):  ಉತ್ತರಪ್ರದೇಶದಲ್ಲಿ ಹೆಚ್ಚುತ್ತಿರುವ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣಗಳು ತಡೆಯುವಲ್ಲಿ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ವಿವಿಧ ಸಂಘಟನೆಯ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಿಂದ ಅಂಬೇಡ್ಕರ್‌ ವಿಚಾರ ವೇದಿಕೆ, ಬೌದ್ದಮಹಾಸಭಾ, ಬಹುಜನ ಸಮಾಜ ಪಾರ್ಟಿ, ಗಂಗಾಮತ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮೆರವಣಿಗೆ ನಡೆಸಿದರು. ಅನಂತ್‌ ರಾಂ ವೃತ್ತದಲ್ಲಿ ಸಿಎಂ ಯೋಗಿ ಅದಿತ್ಯನಾಥ್‌ ಪ್ರತಿಕೃತಿ ದಹಿಸಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಶಿರಾ ಟಿಕೆಟ್ ವಿಚಾರ : ಬಿಜೆಪಿಗರಲ್ಲೇ ಅಸಮಾಧಾನ ...

ನಂತರ ತಾಲೂಕು ಕಚೇರಿ ಎದುರು ಧರಣಿ ಕುಳಿತು ಉತ್ತರ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಮೇಲಿನ ಅಪಹರಣ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣವನ್ನು ಹೆಚ್ಚಾಗುತ್ತಿವೆ. ಇಂತಹ ಕೃತ್ಯವನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ, ಮನಿಶ ವಾಲ್ಮೀಕಿ ಎಂಬ ಹೆಣ್ಣು ಮಗಳನನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರಗೈದು ಅಮಾನುಷವಾಗಿ ಕೊಲೆ ಮಾಡಿರುವುದನ್ನು ಖಂಡಿಸಿದರು.

ಪ್ರತಿಭಟನೆಯಲ್ಲಿ ಮುಖಂಡ ಜಯರಾಜ್‌, ಮಂಚಯ್ಯ, ಮಹೇಶ್ಕುಮಾರ್‌ , ಗಂದಾಧರ್‌ , ಗಂಗಾಧರ್‌ , ನಟರಾಜ, ಶಿವಕುಮಾರ್‌ , ಒಕ್ಕರಹಳ್ಳಿ ಜಯರಾಜ, ಕಂಬರಾಜು, ಪ್ರಸಾದ್‌, ಶಾಂತಕುಮಾರ್‌ , ನಾಗರಾಜು,ಯತೀಶ್,  ಭರತ್‌ ರಾಜ್‌ , ಮೆಹಬೂಬ್‌ ಪಾಷ ಹಲವರು ಇದ್ದರು.