Asianet Suvarna News Asianet Suvarna News

ಗಣರಾಜ್ಯೋತ್ಸವಕ್ಕೆ ಹಕ್ಕಿಪಿಕ್ಕಿ ಜನಾಂಗದ ದಂಪತಿ ಆಯ್ಕೆ

ಹಾಸನದ ಹಕ್ಕಿಪಿಕ್ಕಿ ಜನಾಂಗದ ದಂಪತಿ ದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. 

Hassan Tribal Couple To Participate In Delhi Republic Day Function
Author
Bengaluru, First Published Jan 23, 2020, 8:28 AM IST

ಹಾಸನ [ಜ.23]: ದೆಹಲಿಯಲ್ಲಿ ಜ.26ರಂದು ನಡೆಯುವ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಲು ಹಾಸನ ಜಿಲ್ಲೆಯ ಹಕ್ಕಿಪಿಕ್ಕಿ ಸಮುದಾಯದ ದಂಪತಿ ರಾಜ್ಯದಿಂದ ಆಯ್ಕೆಯಾಗಿದ್ದಾರೆ. 

ಪ್ರತಿ ಗಣರಾಜ್ಯೋತ್ಸವದಂದು ಪ್ರತಿ ರಾಜ್ಯದಿಂದ ಹಿಂದಿನಿಂದಲೂ ಇಬ್ಬರನ್ನು ಆಯ್ಕೆ ಮಾಡಿ ಕಳುಹಿಸುವುದು ರೂಢಿ. ಈ ಬಾರಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅಂಗಡಿಹಳ್ಳಿಯ ಹಕ್ಕಿಪಿಕ್ಕಿ ಜನಾಂಗದ ಹೂರಾಜ್‌, ಚಂದೋಶಿ ದಂಪತಿ ಆಯ್ಕೆಯಾಗಿದ್ದಾರೆ. 

ತಂದೆ ರೇವಣ್ಣ ಕೆಳಗೆ - ಪ್ರಜ್ವಲ್‌ ಮೇಲೆ : ಮಗನನ್ನೇ ಸರ್ ಎನ್ನುತ್ತಿದ್ದ ರೇವಣ್ಣ...

ಬುಡಕಟ್ಟು ಸಮುದಾಯವನ್ನು ಮುಖ್ಯ ವಾಹಿನಿಗೆ ತಂದು, ಅವರ ಸಂಸ್ಕೃತಿ, ಸಂಪ್ರದಾಯಗಳನ್ನು ಪರಿಚಯಿಸುವ ಸಲುವಾಗಿ 1965ರಿಂದ ಗಣರಾಜ್ಯೋತ್ಸವದಲ್ಲಿ ಭಾಗಿಯಾಗುವ ಅವಕಾಶ ನೀಡಲಾಗುತ್ತಿದೆ. ಅದರಂತೆ ರಾಜ್ಯದಿಂದಲೂ ಪ್ರತಿ ವರ್ಷವೂ ಇಬ್ಬರನ್ನು ಆಯ್ಕೆ ಮಾಡಿ ಕಳುಹಿಸಲಾಗುತ್ತಿದೆ. ಫೆ.27 ರಂದು ರಾಷ್ಟ್ರಪತಿ, ಪ್ರಧಾನಮಂತ್ರಿಯೊಂದಿಗೆ ಸಂವಾದದಲ್ಲಿ ಭಾಗವಹಿಸುತ್ತಾರೆ ಎಂದು ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.

ಮಂಗಳೂರು ಬಾಂಬ್ ಪತ್ತೆ ಬೆನ್ನಲ್ಲೇ ಹಾಸನದಲ್ಲಿ ಇಬ್ಬರು ಶಂಕಿತರು ಅರೆಸ್ಟ್...

ಈ ಬಾರಿ ಹಾಸನದ ಹೂರಾಜ್‌ ದಂಪತಿಗೆ ಅವಕಾಶ ದೊರೆತಿದೆ. ವಿಮಾನದ ಮೂಲಕ ಅವರನ್ನು ದೆಹಲಿಗೆ ಕಳುಹಿಸಲಾಗುತ್ತಿದೆ. ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡು, ಫೆ.27 ರಂದು ರಾಷ್ಟ್ರಪತಿ, ಪ್ರಧಾನಮಂತ್ರಿಯೊಂದಿಗೆ ಸಂವಾದದಲ್ಲಿ ಭಾಗವಹಿಸುತ್ತಾರೆ ಎಂದು ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.

ಆಯ್ಕೆ ಖುಷಿ ತಂದಿದೆ:

ಈ ಬಗ್ಗೆ ಪ್ರತಿಕ್ರಿಯಿಸಿದ ಹೂರಾಜ್‌ ದಂಪತಿ, ಪ್ರಧಾನಿ ಜತೆ ಮಾತನಾಡುವ ಅವಕಾಶ ದೊರೆತಿದ್ದು ತುಂಬಾ ಖುಷಿ ತಂದಿದೆ. ಬುಡಕಟ್ಟು ಸಮುದಾಯ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಪ್ರಧಾನಿ ಹಾಗೂ ರಾಷ್ಟ್ರಪತಿ ಗಮನಕ್ಕೆ ತರುತ್ತೇನೆ. ಸತ್ತರೆ ಹೂಳಲು ಜಾಗವಿಲ್ಲ. ಈ ಬಗ್ಗೆ ಪ್ರಧಾನಿ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.

Follow Us:
Download App:
  • android
  • ios