Asianet Suvarna News Asianet Suvarna News

Harsha Murder Case: ಎನ್‌ಐಎ ವಹಿಸಿ: ಕೇಂದ್ರ ಸಚಿವೆ ಕರಂದ್ಲಾಜೆ

*  ಹರ್ಷ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹ
*  ಹತ್ಯೆಗೀಡಾಗಿರುವ ಹರ್ಷನ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ ಸಚಿವೆ
*  ರಾಜ್ಯ ಬಜೆಟ್‌ಗೆ ಸ್ವಾಗತ
 

Harsha Murder Case Should Be Handed Over to the NIA Says Union Minister Shobha Karandlaje grg
Author
Bengaluru, First Published Mar 6, 2022, 10:28 AM IST

ಶಿವಮೊಗ್ಗ(ಮಾ.06):  ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ(Harsha Murder) ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ(National Investigation Agency) ವಹಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje) ಮನವಿ ಮಾಡಿದರು. ಹತ್ಯೆಗೀಡಾಗಿರುವ ಹರ್ಷನ ಮನೆಗೆ ಶನಿವಾರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಹಿಂದೂ(Hindu) ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡಿದಂತಹ ಹಾಗೂ ಹಿಂದು ಯುವಕರಿಗೆ ಪ್ರೇರಣಯಾಗಿದ್ದ ಹರ್ಷ ಇಂದು ನಮ್ಮೊಂದಿಗಿಲ್ಲ. ಆತನ ಸಾವು ಕೇವಲ ಅವರ ಮನೆಯವರಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ದುಖಃವನ್ನುಂಟು ಮಾಡಿದೆ ಎಂದರು.

ಘಟನೆ ನಡೆದ ದಿನದಂದೆ ಈ ಪ್ರಕರಣವನ್ನು ಎನ್‌ಐಎ(NIA) ತನಿಖೆಗೆ ಕೊಡಬೇಕು ಎಂದು ಸರ್ಕಾರವನ್ನು ಆಗ್ರಹ ಮಾಡಿದ್ದೆ. ರಾಷ್ಟ್ರೀಯ ತನಿಖಾ ದಳದಿಂದಲೇ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದೆ. ಏಕೆಂದರೆ ಇದು ಕೇವಲ ಹರ್ಷನ ಕೊಲೆಗೆ ಈ ಪ್ರಕರಣ ಸೀಮಿತವಾಗಿಲ್ಲ. ಇದರ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ಪಿತೂರಿ ಇದೆ. ಇದರ ಹಿಂದೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ದಂತಹ ಬಹಳ ದೊಡ್ಡ ಸಂಘಟನೆಗಳ ಕೈವಾಡವಿದೆ. ಈ ಕಾರಣಕ್ಕಾಗಿ ಪ್ರಕರಣವನ್ನು ಎನ್‌ಐಎ ತನಿಖೆ ವಹಿಸಬೇಕು ಎಂದು ಆಗ್ರಹ ಮಾಡಿದ್ದೇನೆ ಎಂದರು.

Shivamogga: ಹರ್ಷ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರು. ಘೋಷಣೆ

ಈಗಾಗಲೇ ಯುಎನ್‌ಎಫ್‌ಪಿ ಕಾಯ್ದೆ(UNFP Act) ಅಡಿಯಲ್ಲಿ ಪ್ರಕರಣ ದಾಖಲು ಮಾಡಬೇಕೆಂದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ಹೇಳಿದೆ. ಕೇಸು ದಾಖಲಾದ ತಕ್ಷಣ ಕೇಂದ್ರ ಸರ್ಕಾರ(Central Government) ಸದರಿ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸುತ್ತದೆ. ಈಗಾಗಲೇ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯ ಸರ್ಕಾರ(Government of Karnataka) ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸುತ್ತದೆ. ಸೂಕ್ತ ತನಿಖೆಯಾಗುತ್ತದೆ ಎಂಬ ವಿಶ್ವಾಸ ತಮಗಿದೆ ಎಂದು ಹೇಳಿದರು.

ಹಿಂದೆ ಕರ್ನಾಟಕ(Karnataka) ರಾಜ್ಯದಲ್ಲಿ ಹಲವಾರು ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆಯಾಗಿದೆ. ಮಂಗಳೂರಿನ ದೀಪಕ್‌ ರಾವ್‌, ಮೈಸೂರಿನ ರಾಜು, ಬೆಂಗಳೂರಿನ ರುದ್ರೇಶ್‌ ತನಕ ನಾವು 22-23 ಜನ ಹಿಂದೂ ಯುವಕರನ್ನು ಕಳೆದುಕೊಂಡಿದ್ದೇವೆ. ರುದ್ರೇಶ್‌ ಸಂಘದ ಗಣವೇಶ ಧರಿಸಿ ಮನೆಕಡೆಗೆ ಹೊರಟ ಸಂದರ್ಭದಲ್ಲಿ ಅವರನ್ನು ಕೂಡ ಇದೇ ರೀತಿ ಹತ್ಯೆ ಮಾಡಲಾಗಿತ್ತು. ತನಿಖೆ ಮಾಡಿದ ಸಂದರ್ಭದಲ್ಲಿ ಪಿಎಫ್‌ಐ ಸಂಘಟನೆ ಪ್ರಕರಣದ ಹಿಂದಿದೆ ಎಂಬ ಸಂಗತಿ ಈಗಾಗಲೇ ವರದಿಯಾಗಿದೆ. ಆರೋಪಿಗಳು ಜೈಲಿನಲ್ಲಿದ್ದಾರೆ ಎಂದರು.

Harsha Murder Case: ಕೆಲವು ಗೂಂಡಾ ಮುಸ್ಲಿಂರ ವಿಕೃತಿ ಕಡಿ​ಮೆ​ಯಾ​ಗಿ​ಲ್ಲ: ಈಶ್ವ​ರಪ್ಪ

ಅದೇ ರೀತಿ ಈ ಪ್ರಕರಣದ ಹಿಂದೆ ಕೂಡ ಯಾವ ಸಂಘಟನೆ ಇದೆ? ಇವರಿಗೆ ಯಾವ ದೇಶದಿಂದ, ಯಾವ ಸಂಘಟನೆಯಿಂದ ಹಣಕಾಸಿನ ನೆರವು ಸಿಗುತ್ತಿದೆ? ಈ ಎಲ್ಲಾ ವಿಚಾರ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿ ಶೋಭಾ ಕರಂದ್ಲಾಜೆ, ಎನ್‌ಐಎ ತನಿಖೆ ಮಾಡುವ ನಿಟ್ಟಿನಲ್ಲಿ ಮುನ್ನುಡಿ ಇಟ್ಟಿದೆ. ರಾಜ್ಯ ಸರ್ಕಾರದಿಂದ ಶಿಫಾರಸ್ಸು ಆದ ತಕ್ಷಣ ಎನ್‌ಐಎ ಇಂದ ತನಿಖೆ ಆಗುತ್ತದೆ. ಜತೆಗೆ ಇದರ ಹಿಂದಿರುವ ಷಡ್ಯಂತ್ರ ಕೂಡ ಬೆಳಕಿಗೆ ಬರುತ್ತದೆ ಎಂದರು.
ಪ್ರಕಣರದ ಹಿಂದೆ ಒಬ್ಬಿಬ್ಬರಲ್ಲ ಹಲವಾರು ಜನರಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ(Social Media) ಹರಿದಾಡುತ್ತಿದೆ. ಕೊಲೆ ಮಾಡಿ ಅದರ ಭಯಾನಕ ದೃಶ್ಯ ವಿಡಿಯೋ ಮಾಡುವುದನ್ನು ತಾಲಿಬಾನ್‌(Taliban) ಆಡಳಿತದಲ್ಲಿ ಆಫ್ಘಾನಿಸ್ತಾನದಲ್ಲಿ ನೋಡಿದ್ದೆವು. ಅತ್ಯಂತ ಕ್ರೂರವಾಗಿ, ಕೆಟ್ಟದ್ದಾಗಿ ನಡೆದುಕೊಳ್ಳುವವರನ್ನು ಸಿರಿಯಾದಿಂದ, ತಾಲಿಬಾನ್‌ನಿಂದ ತರಬೇತು ಪಡೆದು ಬಂದವರಿಂದ ಮಾತ್ರ ಸಾಧ್ಯ. ಕ್ರೂರತೆ ಮೆರೆಯಲು ಸಾದ್ಯ. ಇದು ಕೇವಲ ಈ ಮನೆಯ, ಶಿವಮೊಗ್ಗದ ಸಮಸ್ಯೆ ಅಲ್ಲ. ಸಮಸ್ಯೆ ಹಿಂದೂ ಸಮಾಜದ, ದೇಶದ ಸಮಸ್ಯೆಯಾಗಿದೆ. ಖಂಡಿತವಾಗಿ ಇದಕ್ಕೆ ಅಂತ್ಯ ಹಾಡುವುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುತ್ತದೆ. ಇಂತಹ ಪ್ರಕರಣ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯ ಬಜೆಟ್‌ಗೆ ಸ್ವಾಗತ: ಸಚಿವೆ

ಎಲ್ಲ ವರ್ಗದ ಜನರಿಗೆ ನ್ಯಾಯ ನೀಡುವ ರೀತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಈ ಬಾರಿ ಬಜೆಟ್‌(Budget) ಮಂಡನೆ ಮಾಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ನಿಕಟಪೂರ್ವ ಸಿಎಂ ಬಿ.ಎಸ್‌. ಯಡಿಯೂರಪ್ಪ(BS Yediyurappa) ಅವರು ಹೇಗೆ ಸಂಧ್ಯಾ ಸುರಕ್ಷಾ ಯೋಜನೆ, ಭಾಗ್ಯಲಕ್ಷ್ಮೀ ಯೋಜನೆ ನೀಡಿದ್ದರೋ ಅದೇ ರೀತಿ ಎಲ್ಲ ವರ್ಗ, ಸಮುದಾಯ ಜನರಿಗೆ ಅನುಕೂಲ ಆಗುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಾರಿ ಬಜೆಟ್‌ ಮಂಡನೆ ಮಾಡಿದ್ದಾರೆ. ರಾಜ್ಯ ಬಜೆಟ್‌ ಅನ್ನು ಸ್ವಾಗತ ಮಾಡುತ್ತೇನೆ. ಮುಂದಿನ ಚುನಾವಣೆಯನ್ನು(Election) ಸಾಮೂಹಿಕ ನಾಯಕತ್ವದಲ್ಲಿ ಹೋಗುತ್ತೇವೆ ಎಂದು ಶಿಕಾರಿಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಈ ವಿಚಾರ ಕುರಿತು ಚರ್ಚೆ ಈಗ ಬೇಡ ಎಂದರು.
 

Follow Us:
Download App:
  • android
  • ios