Asianet Suvarna News Asianet Suvarna News

ಯಾರಿಗುಂಟು..ಯಾರಿಗಿಲ್ಲ 4500ಕ್ಕೆ ಮೈಸೂರು ಸಿಲ್ಕ್!

ಕಡಿಮೆ ಬೆಲೆಗೆ ಮೈಸೂರು ರೇಷ್ಮೆ ಸೀರೆ ನೀಡುವ ರಾಜ್ಯ ಸರ್ಕಾರದ ಯೋಜನೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಅಂದರೆ ರೇಷ್ಮೆ ತವರು ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಸೀರೆ ತಯಾರಿಕೆ ಆರಂಭವಾಗಿದೆ.

Good news Coming soon, Mysore Silk saris at ₹4,500!

ಬೆಂಗಳೂರು[ಜು.11]  ವರಮಹಾಲಕ್ಷ್ಮಿ ಹಬ್ಬದಿಂದ ಸೀರೆ ವಿತರಿಸಲು ಸಿದ್ಧತೆ. ಮಾಡಿಕೊಳ್ಳಲಾಗಿದೆ.  ಹಬ್ಬದಂದು 4,500 ಸಾವಿರ ರೂ.ಗೆ ಸೀರೆ ನೀಡಲಾಗುತ್ತದೆ. ಇದಕ್ಕಾಗಿ ಪ್ಲೇನ್ ಪ್ರಿಂಟೆಡ್ ಸೀರೆಗಳ ತಯಾರಿಕೆ ಆರಂಭವಾಗಿದೆ.

ಕೆಎಸ್ಐಸಿಯ ಅಂಗಡಿಗಳಲ್ಲಿ ಸದ್ಯ 5,300 ರೂಪಾಯಿಗೆ ಸೀರೆ ಲಭ್ಯವಿದ್ದು ವರಮಹಾಲಕ್ಷ್ಮಿ ಹಬ್ಬಕ್ಕೆ ಆಫರ್ ನೀಡಲಾಗುವುದು ಎಂದು ಸುವರ್ಣ ನ್ಯೂಸ್.ಕಾಂಗೆ ಕೆಎಸ್ಐಸಿಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಪ್ಪ ಮಾಹಿತಿ ನೀಡಿದ್ದಾರೆ.

ಪ್ರವಾಸಿ ತಾಣಗಳಾದ ಕೆಆರ್ ಎಸ್, ಹಂಪಿ, ಬಾದಾಮಿ, ಶ್ರವಣಬೆಳಗೊಳ ಸೇರಿದಂತೆ ಇತರೆ ಪ್ರವಾಸಿ ಕೇಂದ್ರಗಳಲ್ಲೂ ಮಳಿಗೆಗಳನ್ನು ತೆರೆದು ಮಾರಾಟ ಮಾಡಲಾಗುತ್ತದೆ.

ಹಳೆ ಸ್ಟಾಕ್ ಮಾರಾಟ ಮಾಡುತ್ತಿಲ್ಲ
ನಾವು ಹಳೆ ಸ್ಟಾಕ್ ಮಾರಾಟ ಮಾಡುತ್ತಿದ್ದೇವೆ ಎಂದು ಮಾಧ್ಯಮವೊಂದರಲ್ಲಿ  ವರದಿಯಾಗಿದ್ದು ಸತ್ಯಕ್ಕೆ ದೂರ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್  ಸ್ಪಷ್ಟ ಪಡಿಸಿದ್ದಾರೆ.ಮೈಸೂರು ಸಿಲ್ಕ್ ಹೆಸರಲ್ಲಿ ಬೇರೆ ಸೀರೆ ಕೊಡ್ತಿದ್ದಾರೆ ಎಂದು ವರದಿ ಮಾಡಿದ್ದಾರೆ. ಮೈಸೂರು ಸಿಲ್ಕ್ ಫ್ಯಾಕ್ಟರಿ ಯಲ್ಲಿ ಬೇರೆ ಸೀರೆ ತಯಾರಿಸುವುದೇ ಇಲ್ಲ. ನಿಗದಿತ ಪ್ರಮಾಣದಲ್ಲಿ ಮಾತ್ರ ಸೀರೆ ಉತ್ಪಾದನೆ ಮಾಡುವುದರಿಂದ ಹಳೆ ಸಂಗ್ರಹದ ಮಾತೆ ಬರಲ್ಲ ಎಂದು ಹೇಳಿದರು.

Follow Us:
Download App:
  • android
  • ios