ಪಾಂಡವಪುರ (ಏ.06): ಮಾತು ಬಾರದ ಮಹಿಳೆ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ತಾಲೂಕಿನ ಹೊಸಗಾನಹಳ್ಳಿಯಲ್ಲಿ ನಡೆದಿದೆ.

ಹೊಸಗಾನಹಳ್ಳಿ ಗ್ರಾಮದ ಎಚ್‌.ಬಿ.ಪ್ರಸನ್ನ, ಎಚ್‌.ಬಿ.ಶೇಖರ ಹಾಗೂ ಎಚ್‌.ಎಸ್‌.ಕವನ್‌ ಅತ್ಯಾಚಾರ ಎಸಗಿದ ಆರೋಪಿಗಳು.

ನನ್ನ ತಾಯಿ ನಿತ್ಯ ದನ ಮತ್ತು ಕುರಿ ಮೇಯಿಸಲು ಗ್ರಾಮದ ಹೊರವಲಯದಲ್ಲಿರುವ ಹೊಸಕೆರೆ ಪ್ರದೇಶಕ್ಕೆ ಹೋಗುತ್ತಿದ್ದರು.

ಗ್ರಾಪಂ ಸದಸ್ಯ, ಆಶಾ ಕಾರ್ಯಕರ್ತೆ ಲವ್ವಿಡವ್ವಿ ವಿಡಿಯೋ ಬಹಿರಂಗ ...

ಕಳೆದ ಗುರುವಾರ(ಏ.1) ಮಧ್ಯಾಹ್ನ ಪ್ರಸನ್ನ, ಶೇಖರ, ಕವನ್‌ ನನ್ನ ತಾಯಿಯನ್ನು ಸನ್ನೆ ಮಾಡಿ ಕರೆದುಕೊಂಡು ಹೋಗಿ, ಕೆರೆಯ ಕೋಡಿಯ ಪಕ್ಕದ ಮರವೊಂದರ ಕೆಳೆಗೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆಯ ಮಗಳು ದೂರು ನೀಡಿದ್ದಾರೆ. 

ದೂರು ನೀಡಿದ ಆಧಾರದ ಮೇಲೆ ಮೂವರನ್ನು ಬಂಧಿಸಲಾಗಿದೆ.