ಶಿರಸಿ(ಮಾ.22): ಆಶಾ ಕಾರ್ಯಕರ್ತೆಯರು ಎಂದು ಹೇಳಿಕೊಂಡು ಕೆಲ ಗ್ರಾಮೀಣ ಭಾಗದಲಿ ಕೊರೋನಾ ತಪಾಸಣೆ ಮಾಡುತ್ತೇನೆ ಎಂದು ತಲಾ ನೂರು ರೂಪಾಯಿ ವಸೂಲಿ ಮಾಡಿದ ಪ್ರಸಂಗ ಬೆಳಕಿಗೆ ಬಂದಿದೆ.

ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರು ಎಂದು ಹೇಳಿಕೊಂಡು ಕೊರೋನಾ ಟೆಸ್ಟ್‌ ಮಾಡಬೇಕೆಂದು ಇಲಾಖೆಯಿಂದ ಬಂದಿದ್ದೇವೆ. ತಲಾ ನೂರು ರೂಪಾಯಿ ಪಡೆದು ಮಧ್ಯಾಹ್ನ ಎಲ್ಲ ಸಲಕರಣೆ ತರುತ್ತೇವೆ ಎಂದು ಹೋಗಿದ್ದಾರೆ. ನಂತರ ಇವರು ನಕಲಿ ಎಂದು ಗೊತ್ತಾಗಿದೆ.

‘ಜನತಾ ಕರ್ಫ್ಯೂದಿಂದ ಕೊರೋನಾ ಹತೋಟಿಗೆ ತರಲು ಸಾಧ್ಯವಿಲ್ಲ’

ಉಳಿದವರು ಎಚ್ಚರಿಕೆಯಿಂದ ಇರಲು ಕಡಬಾಳದ ನಾಗರಿಕರೊಬ್ಬರು ಮನವಿ ಮಾಡಿದ್ದಾರೆ. ಇನ್ನೂ ಕೆಲವೆಡೆ ಗ್ರಾಮೀಣ ಭಾಗದಲ್ಲಿ ರೋಗದಿಂದ ದೂರವಿರವು ಈ ಪುಸ್ತಕ ಓದಿ ಎಂದು ಪುಸ್ತಕ ಮಾರಾಟ ಮಾಡುವವರೂ ಬರುತ್ತಿದ್ದಾರೆ. ಅವರಿಂದಲೂ ಎಚ್ಚರಿಕೆಯಿಂದ ಇರಲು ಗ್ರಾಮೀಣ ಭಾಗದ ಕೆಲವರು ವಿನಂತಿಸಿಕೊಂಡಿದ್ದಾರೆ.