Asianet Suvarna News Asianet Suvarna News

'ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ವಿರುದ್ಧ ಫೈಟ್ ಮಾಡಿದ್ದೇವೆ'

ದೇವೆಗೌಡರ ರಾಜಕೀಯ ನೆಲೆಯನ್ನ ಈವರೆಗೂ ರಾಜ್ಯದಲ್ಲಿ ಯಾರಿಗೂ ಕಂಡು ಹಿಡಿಯಲು ಆಗಿಲ್ಲ| ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆ ಈಗಲೇ ಹೇಳಲು ಆಗುವುದಿಲ್ಲ ಎಂದ ಸತೀಶ್ ಜಾರಕಿಹೊಳಿ|ಅನರ್ಹ ಶಾಸಕರದ್ದು ಅತೀ ಆಸೆ ಇದೆ ಇದನ್ನ ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಯಾರಿಂದಲೂ ತುಂಬಿಕೊಡಲು ಆಗುವುದಿಲ್ಲ|

Former Minister Satish Jarakiholi Talks Over ByElection
Author
Bengaluru, First Published Dec 7, 2019, 2:45 PM IST

ಬೆಳಗಾವಿ(ಡಿ.07): ಮತದಾರರ ಪ್ರೀತಿ ಯಾವ ರೀತಿ ಇದೆ ಎಂಬುದನ್ನು ಕಾದುನೋಡಬೇಕಿದೆ. ಸಮೀಕ್ಷೆಗಳ ಪ್ರಕಾರ ಗೋಕಾಕ್‌ನಲ್ಲಿ ಬಿಜೆಪಿ ಮುನ್ನಡೆ ತೋರಿಸಿದ್ದಾರೆ. ಸರ್ವೇ ಪ್ರಕಾರ ನಾವು ಸೋಲುವುದಿಲ್ಲ. ಸಮೀಕ್ಷೆಯಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗೆಲ್ಲುತ್ತೆ ಅಂತಾ ಹೇಳಿದ್ದಾರೆ. ಸಮೀಕ್ಷೆಗಳು ಕೆಲವೊಮ್ಮೆ ಬೇರೆಯಾಗಬಹುದು.ಗೋಕಾಕ್‌ನಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ಫಿಫ್ಟಿ ಫಿಫ್ಟಿ ಇದೆ. ಉಪಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರುವುದು ಕಡಿಮೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ. 

"

ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆ ಆಗುವುದು ಬಹಳ ಕಷ್ಟ. ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ವಿರುದ್ಧ ಫೈಟ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. 
ಮಲ್ಲಿಕಾರ್ಜುನ ಖರ್ಗೆ ಮತ್ತು ಪರಮೇಶ್ವರ ಪ್ರಚಾರಕ್ಕೆ ಕೈಕೊಟ್ಟ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮಹಾರಾಷ್ಟ್ರದಲ್ಲಿ ಯಾರು ಪ್ರಚಾರ ಮಾಡಿರಲಿಲ್ಲ. ರಾಹುಲ್ ಗಾಂಧಿ ಮೂರು ಸಲ ಬಂದರೂ 42 ಸೀಟ್ ಗೆದ್ದಿದೆ. ಪರಮೇಶ್ವರ ಐಟಿ ದಾಳಿ ವಿಚಾರದಲ್ಲಿ ಬ್ಯೂಸಿ ಇದ್ದಾರೆ‌. ಮಲ್ಲಿಕಾರ್ಜುನ ಖರ್ಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಲ್ಲಿ ಬ್ಯೂಸಿ ಇದ್ದರು ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಲ್ಲಿಕಾರ್ಜುನ ಖರ್ಗೆ ಪರವಾಗಿ ಮಾಜಿ ಪ್ರಧಾನಿ ದೇವೆಗೌಡರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ದೇವೆಗೌಡರ ರಾಜಕೀಯ ನೆಲೆಯನ್ನ ಈವರೆಗೂ ರಾಜ್ಯದಲ್ಲಿ ಯಾರಿಗೂ ಕಂಡು ಹಿಡಿಯಲು ಆಗಿಲ್ಲ. ನಾವು ಆಶಯ ಮಾಡುತ್ತೇವೆ ದೇವೆಗೌಡರು ಯಾವಾಗಲೂ ಬಿಜೆಪಿಗೆ ವಿರೋಧವಾಗಿರುತ್ತಾರೆ. ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆ ಈಗಲೇ ಹೇಳಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ. 

ರಮೇಶ್ ತನ್ನ ನೆಲೆ ಬಿಟ್ಟು ಬೇರೆಯವರಿಗೆ ಹೇಳುತ್ತಾನೆ. ರಮೇಶ್ ಜಾರಕಿಹೊಳಿ‌ ಮೆಂಟಲ್ ಗಿರಾಕಿಯಾಗಿದ್ದಾನೆ. ಮಾಜಿ ಸಿಎಂ ಸಿದ್ದರಾಮಯ್ಯರನ್ನ ಬಿಜೆಪಿಗೆ ತರ್ತೇನಿ ಅಂತಾನೆ, ದಿನಾ ಒಂದು ಹೇಳಿಕೆ ಕೊಡ್ತಾನೆ ಅವನ ತಲೆ ಸರಿಯಿಲ್ಲ, ಯಾರಿಗೂ ಒಳ್ಳೆಯದು ಕೆಟ್ಟದು ನೋಡಲ್ಲ ಮಾತನಾಡುತ್ತಾನೆ ಅಷ್ಟೇ, ರಮೇಶ್‌ನ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. 

ಬಿಜೆಪಿ ಅಂದ್ರೆ ಗರ್ಭಗುಡಿ ಇದ್ದ ಹಾಗೆ ರಮೇಶ್ ಹೊರಗೆ ಮಂಗಳಾರತಿ ತೆಗೆದುಕೊಳ್ಳಲು‌ ನಿಂತವ ಒಳಗೆ ಪೂಜಾರಿ ಬೇರೆಯವರೇ ಇರ್ತಾರೆ. ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ‌ ಮೂರನೇ ಸ್ಥಾನದಲ್ಲಿರುತ್ತಾನೆ. ಅನರ್ಹ ಶಾಸಕರದ್ದು ಅತೀ ಆಸೆ ಇದೆ ಇದನ್ನ ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಯಾರಿಂದಲೂ ತುಂಬಿಕೊಡಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ. 
 

Follow Us:
Download App:
  • android
  • ios