ಗದಗ(ನ.23): ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿ ಸರ್ಕಾರ ಸಿನಿಮಾ ರೀತಿಯಲ್ಲಿ ರಚನೆಯಾಗಿದೆ. ಇದೊಂದು ಆಶ್ಚರ್ಯಕರ ಬೆಳವಣಿಗೆಯಾಗಿದೆ. ಬಿಜೆಪಿ ಪ್ರಜಾಪ್ರಭುತ್ವದ ಬುಡವನ್ನೇ ಅಲುಗಾಡಿಸಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಹೆಚ್. ಕೆ. ಪಾಟೀಲ್ ಅವರು ವಾಗ್ದಾಳಿ ನಡೆಸಿದ್ದಾರೆ. 

ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ತನ್ನ ನಿಲುವನ್ನ ತಾಳಬೇಕಿತ್ತು. ಕಾಂಗ್ರೆಸ್, ಎನ್ ಸಿಪಿ, ಶಿವಸೇನೆಯ ಜೊತೆಗೂಡಿಸಿಕೊಂಡು ಸರ್ಕಾರ ರಚನೆ ಮಾಡುವ ಆಲೋಚನೆ ಇದೇ ಎಂದಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪತ್ರಿಕೆಗಳಲ್ಲಿ ಉದ್ಧವ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗತ್ತಾರೆ ಎಂಬ ಸುದ್ದಿಗಳು ಬಂದಿವೆ. ಆದ್ರೆ ಮುಂಜಾನೆ ತರಾತುರಿಯಲ್ಲಿ 7.30 ಕ್ಕೆ ಬಿಜೆಪಿ, ಎನ್ ಸಿಪಿ ಜೊತೆಗೂಡಿ ಬಿಜೆಪಿ ಸರ್ಕಾರ ಸ್ಥಾಪನೆಯಾಗಿದೆ.ರಾಜಪಾಲರ ಕಚೇರಿ ಎದುರು ಮುಂಜಾನೆ 5.30 ಕ್ಕೆ ಬಂದು ಮಾತಾಡಿ 7.30 ಕ್ಕೆ ಪ್ರಮಾಣ ವಚನ ಸ್ವೀಕಾರ ಮಾಡತ್ತಾರೆ ಅಂದರೆ ರಾಜ್ಯಪಾಲರು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ರಾಜಪಾಲರ ನಡೆ ಅವಮಾನಕರವಾಗಿದೆ ಎಂದು ಹೇಳಿದ್ದಾರೆ. 

ಈ ರೀತಿಯ ಕ್ಷುಲ್ಲಕ ರಾಜಕಾರಣಕ್ಕೆ ತಮ್ಮ ರಾಜ್ಯಪಾಲರ ಕಚೇರಿಯನ್ನು ಬಳಕೆ ಮಾಡಬಾರದು. ರಾಜಕೀಯವಾಗಿ ಬಿಜೆಪಿ, ಎನ್ ಸಿಪಿ ಸೇರುವುದಕ್ಕೆ ಯಾರದು ಅಭ್ಯಂತರ ಇರಲಿಲ್ಲ. ನಡು ರಾತ್ರಿಯಲ್ಲಿ ಸರ್ಕಾರ ಮಾಡುವಂತಹ ಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ.