Asianet Suvarna News Asianet Suvarna News

ಸೋತರೂ ಇವರೇ ಶಾಸಕ: ಕಾರಿನ ಮೇಲೆ ಏನಂತಾ ಬರೆಸಿದ್ದಾರೆ?

Sep 1, 2018, 9:27 PM IST

ವಿಜಯಪುರ(ಸೆ.1): ಬಿಜೆಪಿ ಮಾಜಿ ಶಾಸಕ ರಮೇಶ್ ಭುಸನೂರು ಈ ಬಾರಿಯ ವಿಧಾನಸಭೆ ಚುನಾವನೆಯಲ್ಲಿ ಸೋತರೂ, ಹಾಲಿ ಶಾಸಕನೆಂದು ಕಾರಿಗೆ ಬೋರ್ಡ್ ಹಾಕಿ ಚರ್ಚೆಗೆ ಗ್ರಾಸ ಒದಗಿಸಿದ್ದಾರೆ. 

ಸಿಂಧಗಿಯ ಬಿಜೆಪಿಯ  ಮಾಜಿ ಶಾಸಕ ರಮೇಶ್ ಭೂಸನೂರ್ ಕಾರಿನ ಮೇಲೆ ಹಾಲಿ ಶಾಸಕನೆಂದು ಬೋರ್ಡ್ ಹಾಕಲಾಗಿದೆ. ಫಾರ್ಚೂನರ್ ಕಾರಿನ ಮುಂಬದಿ ಹಾಗೂ ಹಿಂಬದಿಯಲ್ಲಿ ಶಾಸಕ ಎಂದೇ ಬೋರ್ಡ್ ಇದ್ದು, ಇದು ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

 
ಈ ಹಿಂದೆ  ಸಿಂಧಗಿಯಿಂದ ಎರಡು ಬಾರಿ ಬಿಜೆಪಿಯಿಂದ ಶಾಸಕರಾಗಿದ್ದ ರಮೇಶ್  ಭೂಸನೂರ್, ಕಳೆದ 2018 ರ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದರು. ಆದರೆ ಅವರ ಕೆಎ 37 ಪಿ 6955 ನಂಬರಿನ ಪಾರ್ಚ್ಯೂನರ್ ಕಾರ್ ಮೇಲೆ ಈಗಲೂ ಹಾಲಿ ಶಾಸಕ ಎಂಬ ಬೋರ್ಡ್ ಇದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..