Asianet Suvarna News Asianet Suvarna News

ಮಂಡ್ಯ: ಮಾಜಿ ಸಚಿವ ರೇವಣ್ಣ ಪುತ್ರನ ವಿರುದ್ಧ FIR

ಮಾಜಿ ಸಚಿವ ಎಚ್‌. ಡಿ. ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣ ವಿರುದ್ಧ FIR ದಾಖಲಾಗಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ಆರೋಪದಲ್ಲಿ ಕೇಸು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

FIR registered on former minister hd revanna son suraj
Author
Bangalore, First Published Dec 4, 2019, 11:04 AM IST

ಮಂಡ್ಯ(ಡಿ.04): ಮಾಜಿ ಸಚಿವ ಎಚ್‌. ಡಿ. ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣ ವಿರುದ್ಧ FIR ದಾಖಲಾಗಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ಆರೋಪದಲ್ಲಿ ಕೇಸು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

"

ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪದಲ್ಲಿ ರೇವಣ್ಣ ಪುತ್ರ ಸೂರಜ್ ಹಾಗೂ ಇತರರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಕೆ.ಆರ್.ಪೇಟೆ ಉಪ ಚುನಾವಣ ಪ್ರಚಾರ ಮುಗಿಸಿ ವಾಪಸ್ ಹೋಗುವಾಗ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಹುಣಸೂರು ಪ್ರಚಾರ: ಸಿದ್ದರಾಮಯ್ಯ ಸಮಯ ಪ್ರಜ್ಞೆ

ಪ್ರಚಾರ ಮುಗಿಸಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ನಿಂಬೆಹಳ್ಳಿಯ ತಮ್ಮ ಕಾರ್ಯಕರ್ತನ ಮನೆಯಲ್ಲಿ ಊಟಕ್ಕೆ ಬಂದಿದ್ದಾಗ ಅಡ್ಡಗಟ್ಟಿ ಹಲ್ಲೆ ಆರೋಪ ಮಾಡಿದ್ದಾರೆಂದು ಆರೋಪಿಸಲಾಗಿದೆ. ಪ್ರಚಾರ ಮುಗಿಸಿ ಊಟಕ್ಕೆ ಬಂದಿದ್ದಾಗ ಬಿಜೆಪಿ ಕಾರ್ಯಕರ್ತರಿಗೆ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ.

ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಾಜಿ ಸಚಿವ ರೆವಣ್ಣ ಹಿರಿಯ ಪುತ್ರ ಸೂರಜ್  ವಿರುದ್ದ FIR ದಾಖಲಾಗಿದೆ.

ಜಾತಿ ಆಧಾರದಲ್ಲಿ ಮತಯಾಚನೆ: ಸೋಮಣ್ಣ, ಮಾಧುಸ್ವಾಮಿ ವಿರುದ್ಧ ದೂರು

ಡಾ.ಸೂರಜ್ ರೇವಣ್ಣ ಮತ್ತು ಇತರೆ ಐವರ ವಿರುದ್ದ ಕೇಸ್ ದಾಖಲಿಸಲಾಗಿದ್ದು, ನಿಂಬೆಹಳ್ಳಿಯ ಶಿವಾನಂದ್ ಎಂಬುವವರ ದೂರು ಆದರಿಸಿ ಪ್ರಕರಣ ದಾಖಲಿಸಲಾಗಿದೆ. ಅಕ್ರಮವಾಗಿ ಹಣ ಹಂಚಲು ಬಂದಿದ್ದಾರೆಂದು ಆರೋಪಿಸಿ ಪ್ರಶ್ನೆ ಮಾಡಲು ತೆರಳಿದ್ದಾಗ ಘಟನೆ ನಡೆದಿದೆ. ಕೆ.ಆರ್.ಪೇಟೆ ತಾಲೂಕಿನ ಗಡಿ ಗ್ರಾಮದಲ್ಲಿ ತಂಗಿದ್ದು ಹಣ ಹಂಚಿಕೆ ಆರೋಪ ಕೇಳಿ ಬಂದಿದೆ.

ಬಿಜೆಪಿ ಕಾರ್ಯಕರ್ತರು ಹಣ ಹಂಚಿಕೆ ಗೆ ತೆರಳಿದ್ದರು ಎಂದು ಜೆಡಿಎಸ್ ಕಾರ್ಯಕರ್ತರು ಪ್ರಶ್ನೆಮಾಡಿದ್ದರು. ಈ ವೇಳೆ ಎರಡೂ ಬದಿಗಳಲ್ಲಿ ಪಕ್ಷದ ಕಾರ್ಯಕರ್ತರ ನಡುವೆ ಕಲಹ ಉಂಟಾಗಿದೆ. ಘಟನೆಯಲ್ಲಿ ಎರಡು ಕಾರು ಮೂವರಿಗೆ ಗಾಯವಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ.

ಒಲ್ಲದ ಹೆಂಡ್ತಿಯನ್ನು ಭೀಕರವಾಗಿ ಕೊಂದು ಕಥೆ ಕಟ್ಟಿದ ಗಂಡ : ಕೊನೆಗೂ ಸಿಕ್ಕಿಬಿದ್ದ

ಸೂರಜ್ ಸ್ಥಳದಲ್ಲಿ ಇದ್ದು ಅವರ ಸೂಚನೆಯಂತೆ ಕಾರ್ಯಕರ್ತರಿಂದ ಹಲ್ಲೆ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಜೆಡಿಎಸ್‌ನ ಮೂವರು ಕಾರ್ಯಕರ್ತರಿಗೂ ಗಾಯವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮ್ಮ ಮೇಲಿನ ಹಲ್ಲೆ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಪೊಲೀಸರಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios