Vijayanagara: ಕರಡಿ ಹೆಸರು ಕೇಳಿದ್ರೇ ಬೆಚ್ಚಿ ಬೀಳುತ್ತಿರುವ ರೈತರು..!

*   ಅವಳಿ ಜಿಲ್ಲೆಯಲ್ಲಿ ಎರಡು ಕರಡಿ ಧಾಮಗಳಿದ್ರೂ ತಪ್ಪದ ಕರಡಿ ಕಾಟ
*  ಕರಡಿ ಧಾಮಗಳಿದ್ರೂ ಹೊಲ ಮತ್ತು ಊರಿನತ್ತ ಬರುತ್ತಿರೋ ಕರಡಿಗಳು
*  ಕೂಡ್ಲಿಗಿ ತಾಲೂಕಿನಲ್ಲಿ ಅತಿ ಹೆಚ್ಚು ಕಾಟ
 

Farmers Faces Problems For Bears in Vijayanagara grg

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ವಿಜಯನಗರ

ವಿಜಯನಗರ​(ಮೇ.04):  ಕರಡಿ(Bear) ಈ ಒಂದು ಹೆಸರನ್ನು ಕೇಳಿದ್ರೇ ಈ ಭಾಗದ ಜನರು ಒಂದು ಕ್ಷಣ ಬೆಚ್ಚಿ ಬೀಳುವಂತಾಗಿದೆ. ಇದಕ್ಕೆ ಕಾರಣ ನಿತ್ಯ ಕರಡಿಗಳ ಕಾಟದಿಂದ ಬೆಳೆಯಷ್ಟೇ ಇಲ್ಲಿಯ ರೈತ ಜೀವಕ್ಕೂ ಹಾನಿಯಂಟು ಮಾಡ್ತೀವೆ. ಈ ಬಗ್ಗೆ ಅದೆಷ್ಟೋ ಬಾರಿ ಅರಣ್ಯ ಇಲಾಖೆಯ(Forest Department) ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗ್ತಿಲ್ಲ. ಹೀಗಾಗಿ ಜೀವ ಅಂಗೈಯಲ್ಲಿ ಇಟ್ಟುಕೊಂಡು ಬೆಳೆ ಕಾಯಲು ರೈತರು ಹೋಗುವಂತ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ಇದ್ದ ಬೆಳೆ ಬೆಳಗಾಗೋಷ್ಟರಲ್ಲಿ ಇರುತ್ತದೆಯೋ ಇಲ್ಲವೊ ಅನ್ನೋ ಗ್ಯಾರಂಟಿ ಇಲ್ಲದಂತಾಗಿದೆ ಇಲ್ಲಿಯ ರೈತರ ಪರಿಸ್ಥಿತಿ.

Farmers Faces Problems For Bears in Vijayanagara grg

ಕೂಡ್ಲಿಗಿ ತಾಲೂಕಿನಲ್ಲಿ ಅತಿ ಹೆಚ್ಚು ಕಾಟ

ಕೂಡ್ಲಿಗಿ(Kudligi) ತಾಲೂಕಿನ ಭೀಮಸಮುದ್ರ, ಕರಡಿಹಳ್ಳಿ, ಕಡೆಕೋಳ, ಮಾಕನಡಕ, ಗುಂಡುಮುಣುಗು, ಕುರಿಹಟ್ಟಿ ಗ್ರಾಮಗಳಲ್ಲಿ ರೈತರಿಗೆ(Farmers) ಹೊಲದಲ್ಲಿ ಕೆಲಸ ಮಾಡೋದಕ್ಕಿಂತ ಕರಡಿ ಕಾಯೋದೇ ಒಂದು ದೊಡ್ಡ ಕೆಲಸವಾಗಿದೆ. ರೈತರ ಹೊಲಗಳಿಗೆ ಲಗ್ಗೆ ಇಡೋ ಕರಡಿಗಳು ಬೆಳಗಾಗೋದ್ರೊಳಗೆ ಎಲ್ಲ ಬೆಳೆ ನಾಶ ಮಾಡ್ತಿವೆ. ಹೀಗಾಗಿ ಇಲ್ಲಿಯ  ರೈತರು ಕಷ್ಟಪಟ್ಟು ಬೆಳೆದ ಬೆಳೆಗಳ(Crop) ರಕ್ಷಣೆಗೆ ಹಗಲು- ರಾತ್ರಿ ಎನ್ನದೇ ಹರಸಾಹಸ ಪಟ್ಟು ಕರಡಿಗಳನ್ನು ಕಾಯೋ ಕೆಲಸ ಮಾಡಬೇಕಿದೆ. ಇಲ್ಲವಾದರೆ ಕೈಗೆ ಬಂದ ತುತ್ತು ಬಾಯಿಗೆ ಬರೋದಿಲ್ಲ.

Covid Crisis: 'ಕೋವಿಡ್‌ ನಾಲ್ಕನೇ ಅಲೆ ಎದುರಿಸಲು ಸಕಲ ಸಿದ್ಧತೆ'

ಈ ದೃಶ್ಯಗಳು ನೋಡಿದ್ರೇ ಸಾಕು ಇಲ್ಲಿಯ ಗಂಭೀರ ಸಮಸ್ಯೆ ಅರ್ಥವಾಗ್ತದೆ 

ಹೌದು, ಹೀಗೆ  ಕರಡಿಗಳು ಕಂಡ್ರೆ ಸಾಕು, ಗಲಾಟೆ ಮಾಡಿ ಶಿಳ್ಳೆ ಹೊಡೆದ ತಮಟೆ ಬಾರಿಸೋ ಮೂಲಕ ಅದರ ಹಿಂದೆ ಬೆನ್ನುಹತ್ತಿ ಗುಡ್ಡ ದಾಟಿಸೋವರೆಗೂ ಓಡಿಸಬೇಕು. ಒಂದೊಮ್ಮೆ ಕರಡಿ ತಿರುಗಿ ಬಿದ್ರೇ ರೈತರ ಕರಡಿಯಿಂದ ತಪ್ಪಿಸಿಕೊಳ್ಳಲು‌ ಓಡಿ ಹೋಗಬೇಕು. ಇದು ಇಲ್ಲಿಯ ವಾಸ್ತವ ಚಿತ್ರಣವಾಗಿದೆ. ಮಳೆ ಇದ್ರೇ ಬೆಳೆ ಇಲ್ಲ ಬೆಳೆ ಒಂದಷ್ಟು ಕೈಗೆ ಬರುತ್ತದೆ ಅಂದ್ರೇ ಈ ಕರಡಿ ಕಾಟ ಬೇರೆ. ಹೀಗಾಗಿ ಬೆಳೆ ಉಳಿಸಿಕೊಳ್ಳಲು ಇಲ್ಲಿಯ ರೈತರು ಜೀವದ ಹಂಗು ತೊರೆದು ಕರಡಿಗಳನ್ನು ಓಡಿಸಿ, ಬೆಳೆಗಳ ಸಂರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.

Farmers Faces Problems For Bears in Vijayanagara grg

ಅವಳಿ‌ ಜಿಲ್ಲೆಯಲ್ಲಿ ಎರಡು ಕರಡಿ ಧಾಮಗಳಿವೆ ಆದ್ರೂ ತಪ್ಪಿಲ್ಲ ಕರಡಿ ಕಾಟ

ಏಷ್ಯಾದ ಅತಿದೊಡ್ಡ ಕರಡಿಧಾಮ ಬಳ್ಳಾರಿಯಲ್ಲಿದೆ(Ballari). ದಶಕಗಳ ಹಿಂದೆಯೇ ದರೋಜಿ ಕರಡಿ ಧಾಮ ನಿರ್ಮಾಣ ಮಾಡಿದ್ದು, ಇಲ್ಲಿ ಕರಡಿಗಳನ್ನು ಕುರುಚಲು ಗುಡ್ಡದಲ್ಲಿ ಫ್ರೀಯಾಗಿ ಇರುತ್ತವೆ ನಿಗದಿತ ಸಮಯಕ್ಕೆ ಗುಡ್ಡವೊಂದರ ಬಳಿ ಅರಣ್ಯ ಇಲಾಖೆ ಇಡೋ ಆಹಾರ ತಿನ್ನುವ ಮೂಲಕ ಇಲ್ಲಿ ವಾಸಿಸುತ್ತವೆ. ಮತ್ತೊಂದು ಕಳೆದೆರಡು ವರ್ಷಗಳ ಹಿಂದೆ ಕೂಡ್ಲಿಗಿ ತಾಲೂಕಿನ ವ್ಯಾಪ್ತಿಯಲ್ಲಿ ನಿರ್ಮಾಣವಾದ ಗುಡೇಕೋಟೆ ಕರಡಿ ಧಾಮ. ಇಲ್ಲಿಯೂ ಅರಣ್ಯ ಇಲಾಖೆಯವರು ಕರಡಿಗಳ ಮೇಲೆ ನಿಗಾ ಇಡೋ‌ ಮೂಲಕ ನಿಗದಿತ ಸಮಯಕ್ಕೆ ಆಹಾರ ಕೊಡ್ತಾರೆ. ಆದ್ರೇ ಕೆಲವೊಮ್ಮೆ ಊರ ಕಡೆ ಮತ್ತು ಹೊಲಗದ್ದೆಗಳ ಕಡೆ ಬರೋದು ಸಾಮಾನ್ಯ. ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸೋ ಕಾರ್ಯಕ್ರಮ ಇಲಾಖೆ ಮಾಡಿದೆಯಾದ್ರೂ ಸಂಪೂರ್ಣವಾಗಿ ಕರಡಿ ಹೊಲಗಳ ಕಡೆ ಬರೋದನ್ನು ತಡೆಯಲು ಆಗ್ತಿಲ್ಲ.  ಒಮ್ಮೆ ಕರಡಿ ಊರ ಕಡೆ ಅಥವಾ ಹೊಲದಲ್ಲಿ ಕಾಣಿಸಿಕೊಂಡರೇ ಜನರು ಸಿಳ್ಳೆ, ಕೇಕೆ ಹಾಕಿ ಸದ್ದು ಮಾಡೋ ಮೂಲಕ ಜೀವ ಭಯದಿಂದ ಕರಡಿ ಓಡಿಸಬೇಕಿದೆ.

ಬಗೆಹರಿಯದ ಸಮಸ್ಯೆ ಇದಾಗಿರೋ ಹಿನ್ನಲೆಯಲ್ಲಿ ಕರಡಿಧಾಮಕ್ಕೆ ಅಂಟಿಕೊಂಡಂತೆ ಇರೋ ಹೊಲಗಳಿಗೆ ವರ್ಷಕ್ಕೆ ಒಂದಷ್ಟು ಪರಿಹಾರ ಕೊಡಿಸಿ ಎನ್ನುವುದು ರೈತರ ಆಗ್ರಹವಾಗಿದೆ.
 

Latest Videos
Follow Us:
Download App:
  • android
  • ios