ಧಾರವಾಡ[ಮಾ.23]: ಇಲ್ಲಿನ ಹೊಸಯಲ್ಲಾಪೂರ ವ್ಯಕ್ತಿಗೆ ಕೊರೋನಾ ವೈರಸ್‌ ಪತ್ತೆಯಾದ ಹಿನ್ನೆಲೆಯಲ್ಲಿ ಅವರೊಂದಿಗೆ ಸಂಪರ್ಕದಲ್ಲಿದ್ದ ಕುಟುಂಬದ ಸದಸ್ಯರನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಐಸೋಲೇಶನ್‌ ವಾರ್ಡ್‌ನಲ್ಲಿ ಇಡಲಾಗಿದೆ.

ಸೋಂಕಿನ ವ್ಯಕ್ತಿಯು ಕಳೆದ ಮಾ. 13ರಂದು ಧಾರವಾಡಕ್ಕೆ ಬಂದಿದ್ದು ಅಲ್ಲಿಂದ ಮಾ. 17ರ ವರೆಗೂ ಮನೆಯಲ್ಲಿದ್ದನು. ಹೀಗಾಗಿ ಆತನ ಕುಟುಂಬದವರಿಗೂ ಸೋಂಕು ತಗಲುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರನ್ನು ಸಹ ಐಸೋಲೇಶನ್‌ ವಾರ್ಡ್‌ನಲ್ಲಿ ಇರಿಸಲಾಗಿದೆ. 

ಕೊರೋನಾ ಕಾಟ: ಧಾರವಾಡದ ವ್ಯೆಕ್ತಿಗೆ ಕೋವಿಡ್ 19 ಸೋಂಕು ದೃಢ 

ಇದರೊಂದಿಗೆ ಆತನೊಂದಿಗೆ ಸಂಪರ್ಕಕ್ಕೆ ಯಾರಾರ‍ಯರು ಬಂದಿದ್ದಾರೆ ಎಂಬುದನ್ನು ಸಹ ಜಿಲ್ಲಾಡಳಿತ ಪತ್ತೆ ಹಚ್ಚುವಲ್ಲಿ ನಿರತರವಾಗಿದೆ.