ಹಾಸನ (ಫೆ.20):  ಕೌಟುಂಬಿಕ ಕಲಹಕ್ಕೆ ಬೇಸತ್ತು ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೈದು ನಂತರ ಪತಿ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಡಿಕೊಂಡಿರುವ ಘಟನೆ ತಾಲೂಕಿನ ಶಾಂತಿ ಗ್ರಾಮದಲ್ಲಿ ನಡೆದಿದೆ.

ಪತ್ನಿ ಅನ್ನಪೂರ್ಣ(23) ಮೃತರು. ಪತಿ ತುಳಸಿದಾಸ್‌ (40) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ತಿಂಗಳ ಹಿಂದೆ ಮೈಸೂರು ಮೂಲದ ಅನ್ನಪೂರ್ಣ ಳನ್ನು ಮದುವೆಯಾಗಿದ್ದ ತುಳಸಿದಾಸ್‌ ಎಟಿಎಂನಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದರು. 

ಹೈಕೋರ್ಟ್ ಜಡ್ಜ್‌ಗೆ ವಿಡಿಯೋ ಮಾಡಿ 150 ಕಾಂಡೋಂ ಕಳಿಸಿದ ಮಹಿಳೆ : ಕಾರಣ..?

ಪತಿ ಪತ್ನಿ ನಡುವೆ ಆಗಿಂದಾಗ್ಗೆ ಸಣ್ಣಪುಟ್ಟವಿಚಾರಗಳಿಗಾಗಿ ಕಲಹ ಉಂಟಾಗುತ್ತಿತ್ತು. ಇದರಿಂದ ತೀವ್ರ ಬೇಸತ್ತಿದ್ದರು. ಕೆಲಸಕ್ಕೂ ಹೋಗದೆ ಮನೆಯಲ್ಲೇ ಇದ್ದ ತುಳಸಿದಾಸ್‌ ಅನ್ನಪೂರ್ಣಳನ್ನು ಹೊರಗೆ ಕರೆದುಕೊಂಡು ಹೋಗಿ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ. ನಂತರ ತಾನೂ ಕೂಡ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ.

ಶಾಂತಿಗ್ರಾಮ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.