ಮಂಡ್ಯ[ಜು.15] ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಬಗ್ಗೆ ವರದಿ ನೀಡಿದ್ದೆ. ಅದು ಏನಾಯಿತೋ ಗೊತ್ತಿಲ್ಲ. ರಾಜ್ಯಕ್ಕೆ ಎಸಿಬಿ ಅವಶ್ಯಕತೆ ಇಲ್ಲ. ಎಸಿಬಿಯೂ ಒಂದು ಸಂಸ್ಥೆನಾ? ಸರಕಾರದ ಅನುಮತಿ ಪಡೆದು ತನಿಖೆ ಮಾಡ್ಬೇಕಾ? ಎಸಿಬಿ ಸರ್ಕಾರದ ಕೈ ಅಡಿಯಲ್ಲಿರುವ ಸಂಸ್ಥೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಅಧಿಕಾರಿಗಳು ಎಲ್ಲರ ಮೇಲೂ ದಾಳಿ ಮಾಡುತ್ತಿದ್ದರು. ಈಗ ಅಂಥ ಅಧಿಕಾರಿಗಳನ್ನು ಹುಡುಕಬೇಕು. ಆ ಧೈರ್ಯ ಎಸಿಬಿ ಗೆ ಇಲ್ಲ. ಭ್ರಷ್ಟಾಚಾರ ವಿರುದ್ಧ ಹೋರಾಟಕ್ಕೆ ಸ್ವತಂತ್ರ ಸಂಸ್ಥೆ ಬೇಕು. ಎಸಿಬಿ ಸ್ವತಂತ್ರ ಸಂಸ್ಥೆಯಲ್ಲ. ಲೋಕಾಯುಕ್ತಕ್ಕೆ ಅಧಿಕಾರ ಕೊಡಿ ಎಂದು ಆಗ್ರಹಿಸಿದರು.

ಕುಮಾರಸ್ವಾಮಿ ಕಣ್ಣೀರು ಹಾಕಿದ್ದು ಇವತ್ತಿನ ರಾಜಕೀಯ ಸ್ಥಿತಿ.  ಸರ್ಕಾರ ಉಳಿಯುತ್ತೋ? ಇಲ್ವೋ? ಸಂಶಯವಿದೆ. ಈಗಾಗಲೇ ಸರ್ಕಾರದ ಹಲವು ಬಿಕ್ಕಟ್ಟು ಕಂಡಿದ್ದೇನೆ. ಮುಂದೆ ಬರುವ ಸರ್ಕಾರ ಇದಕ್ಕಿಂತಲೂ ಉತ್ತಮವಾದದ್ದೇ? ಎಂಬುದು ಯಕ್ಷ ಪ್ರಶ್ನೆ.  ಸಮಾಜಕ್ಕೆ ನೋವಾಗಿರೋ ವಿಚಾರದಲ್ಲಿ ನಾನು ನೊಂದಿದ್ದೇನೆ. ಪ್ರಜಾಪ್ರಭುತ್ವದ ಅರ್ಥ ಜನರಿಂದ ಜನರಿಗಾಗಿ ಸರ್ಕಾರ.
ಇವತ್ತು ಕೆಲವರಿಂದ ಕೆಲವರಿಗಾಗಿ ಕೆಲವರ ಸರ್ಕಾರವಾಗಿದೆ ಎಂದು ವಿಷಾದಿಸಿದರು.

ತಪ್ಪು ವ್ಯಕ್ತಿಗಳದ್ದಲ್ಲ, ಸಮಾಜದ್ದು. ಸಮಾಜ ಬದಲಾಯಿಸದೇ ಯಾರನ್ನೂ, ಯಾವುದನ್ನೂ ಬದಲಾಯಿಸಲು ಸಾಧ್ಯವಿಲ್ಲ. ಬಜೆಟ್ ನಲ್ಲಿ ಕೊಟ್ಟ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ ಎಂದು ವ್ಯಂಗ್ಯವಾಡಿದರು.