Asianet Suvarna News Asianet Suvarna News

ಕ್ರಿಮಿನಾಶಕ ಕುಡಿದು 45 ವರ್ಷದ ಆನೆ ಸಾವು

ಕೋಸಿಗೆ ಸಿಂಪಡಿಸಲು ಡ್ರಂನಲ್ಲಿ ಇಟ್ಟಿದ್ದ ಕೀಟನಾಶಕ ಸೇವಿಸಿ ಆನೆ ವಾಪಸ್‌ ಹೋಗುತ್ತಿದ್ದಾಗ ಆನೆ ಸೋಲಾರ್‌ ತಂತಿ ಮೇಲೆ ಕುಸಿದು ಬಿದ್ದು ಸಾವನಪ್ಪಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

elephant died after drinking Pesticide in chamarajnagar
Author
Bangalore, First Published Jan 11, 2020, 9:01 AM IST

ಚಾಮರಾಜನಗರ(ಜ.11): ಕೋಸಿಗೆ ಸಿಂಪಡಿಸಲು ಡ್ರಂನಲ್ಲಿ ಮಿಶ್ರ ಮಾಡಿಟ್ಟಿದ್ದ ಕೀಟನಾಟಕ ಸೇವನೆ ಮಾಡಿ ಆನೆಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಕುಳ್ಳೂರು (ಬೂದಿಪಡಗ ರಂಗಸಂದ್ರ)ದಲ್ಲಿ ಶುಕ್ರವಾರ ನಡೆದಿದೆ.

ಗ್ರಾಮದ ಶಿವರುದ್ರೇಗೌಡ ಎಂಬವರ ಜಮೀನಿನಲ್ಲಿ ಆನೆ ಮೃತದೇಹ ಪತ್ತೆಯಾಗಿದ್ದು, ಅಂದಾಜು 40-45 ವರ್ಷವಾಗಿದೆ ಎಂದು ಅಂದಾಜಿಸಲಾಗಿದೆ. ಕೋಸಿಗೆ ಸಿಂಪಡಿಸಲು ಡ್ರಂನಲ್ಲಿ ಇಟ್ಟಿದ್ದ ಕೀಟನಾಶಕ ಸೇವಿಸಿ ಆನೆ ವಾಪಸ್‌ ಹೋಗುತ್ತಿದ್ದಾಗ ಆನೆ ಸೋಲಾರ್‌ ತಂತಿ ಮೇಲೆ ಕುಸಿದು ಬಿದ್ದು ಸಾವನಪ್ಪಿದೆ ಎಂದು ಪುಣಜನೂರು ಆರ್‌ಎಫ್‌ಓ ಕಾಂತರಾಜು ಅವರು ಸ್ವಷ್ಟಪಡಿಸಿದ್ದಾರೆ.

4 ವರ್ಷದ ನಂತರ ಗಗನಚುಕ್ಕಿ ಜಲಪಾತೋತ್ಸವ..! ಸಂಭ್ರಮಕ್ಕೆ ದಿನಗಣನೆ..!

ಈ ಸಂಬಂಧ ಜಮೀನು ಮಾಲೀಕ ಶಿವರುದ್ರೇಗೌಡ ಅವರನ್ನು ಬಂಧಿಸಲಾಗಿದೆ. ಸ್ಥಳಕ್ಕೆ ಬಿಆರ್‌ಟಿ ಡಿಎಫ್‌ಒ ಮನೋಜ್‌ ಕುಮಾರ್‌, ಎಸಿಎಫ್‌ ರಮೇಶ್‌, ಪುಣಜನೂರು ಆರ್‌ಎಫ್‌ಒ ಕಾಂತರಾಜು, ಸೆಸ್ಕಾಂ ಪಿಎಸ್‌ಐ ಸುನೀಲ್‌ ಕುಮಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಾ. ಮೂರ್ತಿ ಅವರು ಮರಣೋತ್ತರ ಪರೀಕ್ಷೆ ನಡೆಸಿದರು.

ಬಸ್ ಅಪಘಾತ: ಕಾಸರಗೋಡಿನ ಚೆಂಡೆ ಕಲಾವಿದರಿಗೆ ಗಾಯ

Follow Us:
Download App:
  • android
  • ios