Kalaburagi Earthquake: ಚಿಂಚೋಳಿ ತಾಲೂಕಿನ ಹಲವು ಗ್ರಾಮಗಳಲ್ಲಿ ಬೆಚ್ಚಿಬಿದ್ದ ಜನ

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹಲವು ಗ್ರಾಮಗಳಲ್ಲಿ ಭೂ ಕಂಪನದ ಅನುಭವವಾಗಿದೆ. ಭೂಮಿ ಆಳದಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.

earthquake in kalaburagi district gow

ಕಲಬುರಗಿ (ಸೆ.1): ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹಲವು ಗ್ರಾಮಗಳಲ್ಲಿ ಭೂ ಕಂಪನದ ಅನುಭವವಾಗಿದೆ. ಭೂಮಿ ಆಳದಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ಲಘು ಕಂಪನ ಹಾಗೂ ಶಬ್ದದಿಂದ ಭಯಭೀತರಾಗಿ ಜನರು ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ.  ಕಳೆದ ರಾತ್ರಿ 10:59 ರ ಸುಮಾರಿಗೆ ಭೂ ಕಂಪನವಾಗಿದ್ದು, ಚಿಂಚೋಳಿ ತಾಲೂಕಿನ ಚಿಮ್ಮಾಇದ್ಲಾಯಿ, ದಸ್ತಾಪುರ, ಐಪಿ ಹೊಸಳ್ಳಿ ಹಾಗೂ ಸುಲೇಪೆಟ್ ಗ್ರಾಮಗಳಲ್ಲಿ ಕಂಪನದ ಅನುಭವವಾಗಿದೆ. ಗ್ರಾಮಸ್ಥರು ಈ ಕಂಪನದಿಂದ ಭಯ ಭೀತರಾಗಿದ್ದಾರೆ. ಕಳೆದ ವರ್ಷವೂ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಈ ಗ್ರಾಮಗಳಲ್ಲಿ  ಇದೇ ರೀತಿ ಆಗಿತ್ತು. ಇನ್ನು  ವಿಜಯಪುರ ನಗರ ಹಾಗೂ ಸುತ್ತ ಮುತ್ತಲಿನ ಪ್ರದೇಶ ಮತ್ತು ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಪದೇಪದೇ ಭೂಕಂಪನವಾಗುತ್ತಿದ್ದು, ಒಂದು ವಾರದಲ್ಲಿ ಸುಮಾರು 10 ಬಾರಿ ಭೂಕಂಪನ ಅನುಭವಕ್ಕೆ ಬಂದಿದ್ದರಿಂದಾಗಿ ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದಾರೆ.ಕಳೆದ ಶುಕ್ರವಾರ ವಿಜಯಪುರದಲ್ಲಿ ನಸುಕಿನ ಜಾವ 2.21ಕ್ಕೆ ಭೂಕಂಪನ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ 3.9 ದಾಖಲಾಗಿದೆ.

ಭಾರಿ ಸದ್ದಿನೊಂದಿಗೆ ಭೂಕಂಪನ ಸಂಭವಿಸಿದೆ. ನಿದ್ರೆಯಲ್ಲಿದ್ದ ಜನರು ಬೆಚ್ಚಿ ಬಿದ್ದು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಬೆಳಗ್ಗೆ 7 ಗಂಟೆ ಸುಮಾರಿಗೆ ಮತ್ತೆ ಭೂಕಂಪನ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ 3.7 ತೀವ್ರತೆ ಭೂಕಂಪನವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ವಿಜಯಪುರ, ಹೊನ್ನುಟಗಿ, ಉಕ್ಕಲಿ ಗ್ರಾಮಗಳಲ್ಲಿ ದಿನಂಪ್ರತಿ ಭೂಕಂಪನ ಸಂಭವಿಸುತ್ತಿದೆ. ಜನರು ತತ್ತರಿಸಿದ್ದಾರೆ. ಈ ಪ್ರದೇಶಗಳಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನವರೆಗೆ 4 ಬಾರಿ ಭೂಕಂಪನವಾಗಿದೆ.

30.01.2022ರಂದು ವಿಜಯಪುರ ತಾಲೂಕಿನ ಬರಟಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಗನಾಳ ಗ್ರಾಮದಲ್ಲಿ ರಿಕ್ಟರ್‌ ಮಾಪಕದಲ್ಲಿ 2.9ರಷ್ಟುತೀವ್ರತೆಯಾಗಿದೆ. 22.03.2022ರಂದು ಬಸವನಬಾಗೇವಾಡಿ ತಾಲೂಕಿನ ಉಕ್ಕಲಿಯಲ್ಲಿ ರಿಕ್ಟರ್‌ ಮಾಪಕದಲ್ಲಿ 3.5 ತೀವ್ರತೆಯಲ್ಲಿ ದಾಖಲಾಗಿದೆ. 26.03.2022ರಲ್ಲಿ ಉಕ್ಕಲಿ ಗ್ರಾಮದಲ್ಲಿ ರಿಕ್ಟರ್‌ ಮಾಪಕದಲ್ಲಿ 2.8ರಷ್ಟುತೀವ್ರತೆ ದಾಖಲಾಗಿದೆ.

ವಿಜಯಪುರ ನಗರ ಮತ್ತು ಸುತ್ತಮುತ್ತ ಮತ್ತೆ ಮರುಕಳಿಸಿದ ಭೂಕಂಪ!

14.04.2022ರಲ್ಲಿ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳದಲ್ಲಿ ರಿಕ್ಟರ್‌ ಮಾಪಕದಲ್ಲಿ 1.3 ತೀವ್ರತೆ ದಾಖಲಾಗಿದೆ. 09.07.2022ರಂದು ರಿಕ್ಟರ್‌ ಮಾಪಕದಲ್ಲಿ 4.4ರಷ್ಟುತೀವ್ರತೆಯಲ್ಲಿ ಭೂಕಂಪನ ದಾಖಲಾಗಿದೆ. ಈ ಸಂದರ್ಭದಲ್ಲಿ ಕೆಲವೊಂದು ಹಳೆಯ ಮನೆಗಳು ಬಿರುಕು ಬಿಟ್ಟಿದ್ದವು. 20.08.2022ರಲ್ಲಿ ವಿಜಯಪುರ ತಾಲೂಕಿನ ಮದಬಾವಿ ಗ್ರಾಮದಲ್ಲಿ ರಿಕ್ಟರ್‌ ಮಾಪಕ 3.5ರಷ್ಟುತೀವ್ರತೆ ದಾಖಲಾಗಿದೆ. 21.08.2022ರಲ್ಲಿ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ 3.1ರಷ್ಟುತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ.

ವಿಜಯಪುರದಲ್ಲಿ ಸರಣಿ ಭೂಕಂಪನ: ವಿಜ್ಞಾನಿಗಳು ಬಂದಾಗಲೇ ಕಂಪಿಸಿದ ಭೂಮಿ..!

22.08.2022ರಲ್ಲಿ ಮತ್ತೆ ಉಕ್ಕಲಿಯಲ್ಲಿ ರಿಕ್ಟರ್‌ ಮಾಪಕದಲ್ಲಿ 2.6ರಷ್ಟುತೀವ್ರತೆ ದಾಖಲಾಗಿದೆ. 23ರಿಂದ ದಿನಂಪ್ರತಿ ವಿಜಯಪುರ ತಾಲೂಕಿನ ಹೊನ್ನುಟಗಿ, ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಭೂಕಂಪನ ಸಂಭವಿಸುತ್ತಿದೆ. ಇದರಿಂದಾಗಿ ಜನರು ರಾತ್ರಿ ಹೊತ್ತಿನಲ್ಲಿ ನಿದ್ರೆ ಮಾಡದ ಸ್ಥಿತಿ ನಿರ್ಮಾಣವಾಗಿದೆ.

Latest Videos
Follow Us:
Download App:
  • android
  • ios