ಸಕಲೇಶಪುರ (ಮಾ.01):  ಕ್ಷುಲ್ಲಕ ಕಾರಣಕ್ಕೆ ಕುಡಿದು ಗಲಾಟೆ ಮಾಡಿಕೊಂಡು ಚಿಕ್ಕಪ್ಪನ ಮಗನೇ ಅಣ್ಣನನ್ನು ಕೊಲೆ ಮಾಡಿರುವ ಘಟನೆ ಸಕಲೇಶಪುರ ತಾಲೂಕಿನ ದೇವಾಲಯದ ಕೆರೆಯಲ್ಲಿ ಶನಿವಾರ ಸಂಜೆ ನಡೆದಿದೆ. 

ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲದ ರವಿ(46)ಎಂಬುವವರೇ ಹತ್ಯೆಗೀಡಾದವರು. ರವಿಯ ಚಿಕ್ಪಪ್ಪನ ಮಗನಾದ ಪ್ರದೀಪ್‌(29) ಕೊಲೆ ಆರೋಪಿ. 

ದಾವಣಗೆರೆ; ಅಂತರ್‌ ಜಾತಿ ವಿವಾಹವಾದ ಯುವಕನ ಮನೆ ಮೇಲೆ ಇದೆಂಥಾ ದಾಳಿ

ಚಿಕ್ಕಪ್ಪ ಹಾಗೂ ದೊಡ್ಡಪ್ಪನ ಮಕ್ಕಳ ನಡುವೆ ಜಗಳ ನಡೆದಿತ್ತು. ಶನಿವಾರ ಸಂಜೆ ರವಿ ಕೂಲಿ ಕೆಲಸದ ನಿಮಿತ್ತ ದೇವಾಲಯದ ಕೆರೆಗೆ ಬಂದಾಗ ಜಗಳ ಮತ್ತೆ ಪ್ರಾರಂಭವಾಯಿತು. 

ಈ ಸಂದರ್ಭದಲ್ಲಿ ಪ್ರದೀಪ್‌ ವಿಪರೀತ ಕುಡಿದ ಪರಿಣಾಮ ಜಗಳ ತಾರಕಕ್ಕೇರಿತು. ಕೊನೆಗೆ ಅಣ್ಣ ರವಿಯನ್ನು ಪ್ರದೀಪ್‌ ಕೊಲೆ ಮಾಡಿದ್ದಾನೆ. ಈ ಬಗ್ಗೆ ಸಕಲೇಶಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.