Asianet Suvarna News Asianet Suvarna News

ಕೈಲ್ ಪೋದ್ಗಾ ಹಬ್ಬವನ್ನೂ ತಿಂದ ಮಹಾಮಳೆ!

ಸೆಪ್ಟಂಬರ್ 3 ರಂದು ಆಚರಿಸುವ ಕೈಲ್ ಪೋದ್ ಹಬ್ಬ! ಎಲ್ಲವನ್ನೂ ಕಳೆದುಕೊಂಡು ಸಹಾಯಹಸ್ತಕ್ಕೆ ಅಂಗಾಲಾಚಿದ ಜನ! ಸಂಭ್ರಮದಲ್ಲಿರಬೇಕಾದ ಊರಲ್ಲೀಗ ಸೂತಕದ ಛಾಯೆ! ಜೀವ ಕೈಯಲ್ಲಿಡಿದು ಕುಳಿತಿದ್ದಾರೆ ಕೊಡಗಿನ ಜನ

ಮಡಿಕೇರಿ(ಆ.21): ಆಷಾಢ ಮುಗಿದು ಶ್ರಾವಣ ಆರಂಭವಾಯ್ತು ಅಂದ್ರೆ ಸಾಕು, ಕೊಡಗಿನಲ್ಲಿ ಸಾಲು ಸಾಲು ಹಬ್ಬಗಳ ರಂಗು ಮೇಳೈಸುತ್ತಿತ್ತು. ತರಹೇ ವಾರಿ ಖಾದ್ಯಗಳು, ಸಾಂಪ್ರದಾಯಿಕ ಉಡುಗೆ, ತೊಡುಗೆ, ಅಬ್ಬಾ ಆ ಅಂದವನ್ನ ಆಸ್ವಾದಿಸೋಕೆ ಎರಡು ಕಣ್ಣು ಸಾಲ್ತಿರಲಿಲ್ಲ. ಆದ್ರೆ ಈ ಸಂತೋಷದ ಮೇಲೆ ಅದೇಕೆ ವರುಣನ ಕೆಂಗಣ್ಣು ಬಿತ್ತೋ ಗೊತ್ತಿಲ್ಲ, ಹಬ್ಬದ ಸಂಭ್ರಮದಲ್ಲಿರಬೇಕಾದ ಊರಿನಲ್ಲಿ, ಸೂತಕದ ಛಾಯೆ ಆವರಿಸಿದೆ.

ಹೇಳಿ ಕೇಳಿ ಕೊಡಗು ವಿಶೇಷ ಹಬ್ಬ, ಆಚರಣೆಗಳಿಗೆ ಫೇಮಸ್.  ಕೊಡವರ ಶೈಲಿಯ ಖಾದ್ಯ, ತರ ತರಹದ ಉಡುಗೆಗಳು, ಆಹಾ ಆ ಹಬ್ಬದ ಸವಿಯೇ ಒಂದು ಅದ್ಭುತ. ಆಟಿ ತಿಂಗಳು ಬಂತೆಂದ್ರೆ ಕೊಡವ ನಾಡಿನ ಪ್ರತಿ ಮನೆಯಲ್ಲೂ ವಿಭಿನ್ನ ಖಾದ್ಯಗಳು ಘಮ ಘಮಸುತ್ತಿದ್ದವು.

ಆದ್ರೆ ಈ ವರ್ಷ ಕೈಲ್ ಪೋದ್ಗಾಗಿ ಕಾದು ಕುಳಿತಿದ್ದ ಕೊಡಗಿನ ಜನತೆಯ ಸಂಭ್ರಮ, ಮೃತ್ಯ ಮಳೆಯಲ್ಲಿ ಕೊಚ್ಚಿ ಹೋಗಿದೆ. ಕಳೆದ ಕೆಲ ತಿಂಗಳಿಂದ ಸುರಿಯುತ್ತಿರೋ ಭಾರೀ ಮಳೆಗೆ, ಕೊಡಗಿನ ಜನತೆಯ ಜೀವನವೇ ಅಲ್ಲೋಲ-ಕಲ್ಲೋಲವಾಗಿದೆ. ಹಬ್ಬದ ಆಚರಣೆ ಇರಲಿ, ಜೀವ ಉಳಿದರೆ ಸಾಕು, ನಮ್ಮವರು ನಮ್ಮ ಜೊತೆ ಇದ್ದರೆ ಸಾಕು ಅನ್ನೋವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಡಗಿನ ಪ್ರತಿಯೊಬ್ಬರು ಜೀವ ಕೈಯಲ್ಲಿಡಿದು ಕುಳಿತಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..