Asianet Suvarna News Asianet Suvarna News

ಲಾಕ್‌ಡೌನ್: ಕಾಸರಗೋಡಲ್ಲಿ ಬೀದಿ ಬೀದಿಗಳಲ್ಲಿ ಡ್ರೋಣ್‌ ಕಣ್ಗಾವಲು!

ಕಾಸರಗೋಡು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಈ ಸಮಯದಲ್ಲಿ ಜಿಲ್ಲೆಯ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾಡಳಿತ ಇದೀಗ ಡ್ರೋನ್‌ ಕ್ಯಾಮರಾದ ಮೊರೆಹೋಗಿದೆ.

Drone camera used in kasaragod to check people during lockdown
Author
Bangalore, First Published Apr 9, 2020, 8:51 AM IST

ಮಂಗಳೂರು(ಏ.09): ಕಾಸರಗೋಡು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಈ ಸಮಯದಲ್ಲಿ ಜಿಲ್ಲೆಯ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾಡಳಿತ ಇದೀಗ ಡ್ರೋನ್‌ ಕ್ಯಾಮರಾದ ಮೊರೆಹೋಗಿದೆ.

ಕಾಸರಗೋಡಿನಲ್ಲಿ ಲಾಕ್‌ಡೌನ್‌ ಉಲ್ಲಂಘಿಸುವವರ ಪತ್ತೆಗೆ ಡ್ರೋಣ್‌ ಕ್ಯಾಮರಾ ಬಳಕೆ ಮಾಡಲಾಗುತ್ತಿದ್ದು, ನಿಯಮ ಮುರಿಯುವವರ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ಜನ ಹತ್ತಿರ ಹೋಗೋದಕ್ಕೂ ಹಿಂಜರಿದಾಗ ರೋಗಿಗೆ ಮಾಸ್ಕ್ ತೊಡಿಸಿದ ಶಾಸಕ

ಅಲ್ಲಿನ ರಸ್ತೆಗಳು, ಗಲ್ಲಿಗಳು ಮೈದಾನಗಳಲ್ಲಿ, ಡ್ರೋನ್‌ ಕ್ಯಾಮರಾ ಸುತ್ತಾಡುತ್ತಿದ್ದು, ಗುಂಪು ಸೇರುವವರನ್ನು ಪತ್ತೆ ಹಚ್ಚಿ ಜನರನ್ನು ಮನೆ ಸೇರುವಂತೆ ಮಾಡುತ್ತಿದೆ. ಡ್ರೋನ್‌ ಕ್ಯಾಮರಾ ನೋಡಿ ಆಟಕ್ಕೆ ಮೈದಾನಕ್ಕಿಳಿದು ಯುವಕರೆಲ್ಲ ಬ್ಯಾಟ್‌, ವಿಕೆಟ್‌ ಸಹಿತ ಕಾಲ್ಕೀಳುತ್ತಿದ್ದಾರೆ ಎಂದು ತಿಳಿದುಬಂದಿದೆ.

Follow Us:
Download App:
  • android
  • ios