Asianet Suvarna News Asianet Suvarna News

ಮತ್ತೆ ಶುರುವಾಯ್ತು ಬೌ ಬೌ ಗೋಳು!

ವಿಭೂತಿನಗರದಲ್ಲಿ ಬೌ ಬೌ ಗೋಳು! ಛೂ ಅಂದ್ರೆ ಬರುತ್ತೆ ಶ್ವಾನಗಳ ಹಿಂಡು! ಪುಟ್ಟ ಬಾಲಕನ ಮೇಲೆ ಎರಗಿದ ಡಾಗ್ ಗ್ಯಾಂಗ್! ವಾರ್ಡ್ ನಂಬರ್ 81ರಲ್ಲಿ ನಾಯಿಗಳದ್ದೇ ಕಾಟ! ನಾಯಿಗಳ ದಾಳಿಗೆ ನಲುಗಿದ ಪ್ರವೀಣ್

ಬೆಂಗಳೂರು(ಆ.30): ಇಷ್ಟು ದಿನ ಬಾಲ ಮುದುರಿಕೊಂಡಿದ್ದ ಬೀದಿ ನಾಯಿಗಳು ಮತ್ತೆ ಬಾಲ ಬಿಚ್ಚಿವೆ. ಪ್ರವೀಣ್ ಎಂಬ 10 ವರ್ಷದ ಬಾಲಕನ ಮೇಲೆ ಎರಗಿ ಕ್ರೌರ್ಯ ತೋರಿಸಿವೆ. ಹೆಚ್ಎಎಲ್ ಬಳಿ ಇರುವ ವಿಭೂತಿನಗರದಲ್ಲಿ ಈ ಘಟನೆ ನಡೆದಿದೆ.

ನಿನ್ನೆ ಮಧ್ಯಾಹ್ನ 12:30ರ ಸುಮಾರಿಗೆ ಪ್ರವೀನ್ ಬಹಿರ್ದೆಸೆಗೆ ತೆರಳಿದ್ದಾನೆ. ಈ ವೇಳೆ ಸುಮಾರು 20 ನಾಯಿಗಳ ಹಿಂಡು ಬಾಲಕ ಮೇಲೆ ಎರಗಿದೆ. ಇನ್ನೂ ಪ್ರವೀಣ್ ಗೆ ಶ್ವಾನಗಳ ಗುಂಪು ದಾಳಿ ಮಾಡಿದ್ದರಿಂದ ಗಂಬೀರ ಗಾಯಗಳಾಗಿವೆ. ಸದ್ಯ ಪ್ರವೀಣ್ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಸಂಬಂಧ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೂ ಸ್ಥಳೀಯ ಕಾರ್ಪೋರೇಟರ್ ನಾಗರಾಜ್ ಕೂಡ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಅಂತ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..


 

Video Top Stories