Asianet Suvarna News Asianet Suvarna News

'BSY ತಮ್ಮ ಪರಮಾಧಿಕಾರ ಬಳಸಿ ಮಂತ್ರಿ ಮಂಡಲ ವಿಸ್ತರಣೆ ಮಾಡ್ತಾರೆ'

ಒಂದು ವಾರದಲ್ಲಿ ಸಚಿವ ಸಂಪುಟ ಪ್ರಕ್ರಿಯೆ ಪೂರ್ಣ| ಸೋತವರಿಗೆ ಮಂತ್ರಿ ಸ್ಥಾನ ನೀಡುವ ಬಗ್ಗೆ ಸಿಎಂ  ನಿರ್ಣಯ ಕೈಗೊಳ್ಳುತ್ತಾರೆ| ದುರಾದೃಷ್ಟವಷಾತ್‌ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಉಪಚುನಾವಣೆಯಲ್ಲಿ ಸೋತಿದ್ದಾರೆ| 

DCM Laxman Savadi Talks Over Cabinet Expansion
Author
Bengaluru, First Published Jan 25, 2020, 3:09 PM IST

ಬೆಳಗಾವಿ(ಜ.25): ಒಂದು ವಾರದಲ್ಲಿ ಸಚಿವ ಸಂಪುಟ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಧನುರ್ ಮಾಸ ಕಳೆದಿದೆ. ಈಗಾಗಲೇ ವರಿಷ್ಠರ ಜೊತೆ ಮಾತನಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಇದರ ಬಗ್ಗೆ ನಾವು ಹೇಳುವ ಅವಶ್ಯಕತೆ ಇಲ್ಲ. ಸಿಎಂ ಬಳಿ ಇರುವ ಪರಮಾಧಿಕಾರ ಬಳಸಿ ಮಂತ್ರಿ ಮಂಡಲ ವಿಸ್ತರಣೆ ಮಾಡುತ್ತಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ. 

ಶನಿವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಗೊಂದಗಳಿಲ್ಲ. ಸೋತವರಿಗೆ ಮಂತ್ರಿ ಸ್ಥಾನ ನೀಡುವ ಬಗ್ಗೆ ಸಿಎಂ ಯಡಿಯೂರಪ್ಪ ನಿರ್ಣಯ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ಸಂಪುಟದಿಂದ ಸವದಿ ಕೈಬಿಟ್ಟು ಆರ್.ಶಂಕರ್‌ಗೆ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಜೀವನದಲ್ಲಿ ಎಲ್ಲರಿಗೂ ಆಪೇಕ್ಷೆಗಳಿರುತ್ತವೆ ಕೇಳುವುದು ತಪ್ಪಲ್ಲ, ಎಲ್ಲರಿಗೂ ಅಧಿಕಾರ, ಅಂತಸ್ತು ಕಾರ್ಯ ಮಾಡಲು ಇಚ್ಛಾಶಕ್ತಿ ಇದ್ದೇ ಇರುತ್ತದೆ. ಕೇಳುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಧಿಕಾರ ತ್ಯಾಗ ಮಾಡಿ ಅಂತಾ ಪಕ್ಷ ಹೇಳಿದ್ರೆ ಏನ್ ಮಾಡ್ತೀರಾ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸವದಿ, ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತೋ ನಾನು ಅದರ ಜೊತೆ ಇರುತ್ತೇನೆ. ಈಗಲೂ ಇರ್ತೀನಿ, ಮುಂದೆಯೂ ಇರುತ್ತೇನೆ. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಲು ಸದಾ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಸಿಎಂಗೆ ಸೆಂಟಿಮೆಂಟಲ್ ಬ್ಲ್ಯಾಕ್ ಮೇಲ್ ಮಾಡ್ತೀದಾರಾ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಲಕ್ಷ್ಮಣ ಸವದಿ, ಅವರೆಲ್ಲರೂ ನಮ್ಮ ಪಕ್ಷಕ್ಕೆ ಬಂದಿರುವುದರಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಪಾಪ ಏನೋ ದುರಾದೃಷ್ಟ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಸೋತಿದ್ದಾರೆ. ನಮಗೂ ಸ್ಥಾನ ಬೇಕು ಅಂತ ಆಪೇಕ್ಷೆ ಪಡೋದರಲ್ಲಿ ತಪ್ಪೇನೂ ಇಲ್ಲ ಎಂದಿದ್ದಾರೆ. 

ಸಿಎಂಗೆ ಪರ್ಸನಲ್ ಪವರ್ ಮುಖ್ಯವಾಗಿದೆ. ರಾಜ್ಯದ ಬಗ್ಗೆ ಚಿಂತೆ ಇಲ್ಲ ಸಂಪುಟ ವಿಸ್ತರಣೆ ಮಾಡ್ತಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ವಿಚಾರದ ಬಗ್ಗೆ ಖಾರವಾಗಿಯೇ ಉತ್ತರ ನೀಡಿದ ಡಿಸಿಎಂ ವಿಪಕ್ಷ ನಾಯಕರಿಗೆ ನಮ್ಮನ್ನು ಟೀಕೆ ಮಾಡೋದು ಆದ್ಯ ಕರ್ತವ್ಯವಾಗಿದೆ. ಸಿದ್ದರಾಮಯ್ಯ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ‌ ಎಂದು ಹೇಳಿದ್ದಾರೆ. 
 

Follow Us:
Download App:
  • android
  • ios