Asianet Suvarna News Asianet Suvarna News

ಹೆಚ್ಚಿದ ಸೈಬರ್ ಕ್ರೈಂ: ಸ್ವಲ್ಪ ಎಚ್ಚರ ತಪ್ಪಿದ್ರೂ ಪಂಗನಾಮ..! ಹುಷಾರ್

ಸಿಲಿಕಾನ್ ಸಿಟಿಯಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಕೋಟಿ ಕೋಟಿ ವಂಚನೆ ಮಾಡಿರುವ ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿದೆ. ಫೋನ್‌ ಕಾಲ್, ಆಫರ್, ಗಿಫ್ಟ್ ಹೆಸರಲ್ಲಿ ಮೋಸ ಮಾಡೋರ ಜಾಲ ಸಕ್ರಿಯವಾಗಿದ್ದು, ಸ್ವಲ್ಪ ಯಾಮಾರಿದ್ರೂ ನಾಮ ಹಾಕಿಸ್ಕೊಳ್ಳೋದು ಪಕ್ಕಾ.

Cyber Crimes increases in Bangalore
Author
Bangalore, First Published Feb 15, 2020, 1:12 PM IST

ಬೆಂಗಳೂರು(ಫೆ.15): ಸಿಲಿಕಾನ್ ಸಿಟಿಯಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಕೋಟಿ ಕೋಟಿ ವಂಚನೆ ಮಾಡಿರುವ ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿದೆ. ಫೋನ್‌ ಕಾಲ್, ಆಫರ್, ಗಿಫ್ಟ್ ಹೆಸರಲ್ಲಿ ಮೋಸ ಮಾಡೋರ ಜಾಲ ಸಕ್ರಿಯವಾಗಿದ್ದು, ಸ್ವಲ್ಪ ಯಾಮಾರಿದ್ರೂ ನಾಮ ಹಾಕಿಸ್ಕೊಳ್ಳೋದು ಪಕ್ಕಾ.

ಬೆಂಗಳೂರಿನಲ್ಲಿ ಆನ್ ಲೈನ್ ವಂಚಕರ ಹಾವಳಿ ಹೆಚ್ಚಾಗಿದ್ದು,  ಸಿಐಡಿ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಪೋನ್‌ನಲ್ಲೇ ನಂಬಿಸಿ ದುಡ್ಡು ಅಕೌಂಟ್‌ಗೇ ಹಾಕಿಸಿಕೊಂಡು ವಂಚನೆ ಮಾಡುತ್ತಿರುವುದು ಬಯಲಾಗಿದೆ.

ಬೆಂಗಳೂರು ಪೊಲೀಸ್ ಕಮಿಷನರ್ ಹೆಸರಲ್ಲೇ ಮಹಾ ದೋಖಾ! ಎಚ್ಚರ!

ಸಿಐಡಿ ಆರ್ಥಿಕ ಅಪರಾಧ ವಿಭಾಗದಲ್ಲಿ ಕೋಟ್ಯಂತರ ವಂಚನೆ ಎಫ್ಐಆರ್ ದಾಖಲಾಗಿದ್ದು, ವೃದ್ಧೆಯನ್ನು ನಂಬಿಸಿ 1.67 ಕೋಟಿ ವಂಚನೆ ಮಾಡಲಾಗಿದೆ. ಅಂಬುಲಕ್ಷ್ಮೀ ಶ್ರೀನಿವಾಸ್ ಎಂಬುವವರಿಗೆ 1.67 ಕೋಟಿಗೆ ವಂಚನೆ ಮಾಡಲಾಗಿದೆ.

800 ರೂ. ಕುರ್ತಾ ಬುಕ್ ಮಾಡಿ 79 ಸಾವಿರ ಕಳ್ಕೊಂಡ ಯುವತಿ, ನಡೆದಿದ್ದೇನು..?

ಸ್ಯಾಮ್ ಸ್ಯಾಂಗ್ ಕಂಪನಿ ಲಾಟರಿಯಲ್ಲಿ 10ಲಕ್ಷ ಪೌಂಡ್ ಬಹುಮಾನ ಎಂದು ನಂಬಿಸಿ ದೋಖಾ ಮಾಡಲಾಗಿದೆ. 93 ಕೋಟಿ 80 ಲಕ್ಷ ಬಹುಮಾನ ಎಂದು ನಂಬಿಸಿದ್ದ ವಂಚಕರು ಸ್ಯಾಮ್ ಸಾಂಗ್ ಕಂಪನಿ ಏಜೆಂಟ್ ಎಂದು ಕರೆ ಮಾಡಿದ್ದರು. ಲೀಗಲ್ ಚಾರ್ಜ್ಗಾಗಿ ಹಣ ಕಟ್ಟುವಂತೆ 1.67 ಕೋಟಿ ಅಕೌಂಟ್‌ಗೆ ಪಡೆದಿದ್ದ. ವ್ಯಕ್ತಿಯ ಮಾತು ನಂಬಿ ವೃದ್ಧ ದಂಪತಿಗಳು ಹಣ ಹಾಕಿದ್ದರು. ಇದೀಗ ಎಫ್ಐಆರ್ ದಾಖಲಿಸಿಕೊಂಡು ಸಿಐಡಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

Follow Us:
Download App:
  • android
  • ios