ಧಾರವಾಡ, (ಅ.15): ಅತ್ಯಾಚಾರವೆಸಗುವ ದುಷ್ಕರ್ಮಿಗಳ ಜನನಾಂಗವನ್ನು ಕತ್ತರಿಸಬೇಕೆಂದು ಬಸವಪ್ರಕಾಶ ಸ್ವಾಮೀಜಿ ಹೇಳಿದ್ದಾರೆ. 

ಇಂದು (ಗುರುವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವಪ್ರಕಾಶ ಸ್ವಾಮೀಜಿ, ರಾಜ್ಯದಲ್ಲಿ ಪದೇ ಪದೇ ಬಾಲಕಿಯರ ಮೇಲೆ ಅತ್ಯಾಚಾರವಾಗುತ್ತಿರುವುದು ಅಮಾನವೀಯ. ಇದು ದೇಶವೇ ತಲೆತೆಗ್ಗಿಸುವಂತಹ ಘಟನೆ.  ಅತ್ಯಾಚಾರವೆಸಗಿದ ದುಷ್ಕರ್ಮಿಗಳ ಜನನಾಂಗ ಕತ್ತರಿಸುವ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ರೇಪಿಸ್ಟ್‌ಗಳಿಗೆ ಉಳಿಗಾಲವಿಲ್ಲ, ಮರಣ ದಂಡನೆಯೊಂದೇ ಶಿಕ್ಷೆ: ಸುಗ್ರೀವಾಜ್ಞೆ ಜಾರಿ!

ಅಲ್ಲದೇ ಹೆಣ್ಣುಮಕ್ಕಳು ಕೂಡಾ ಮೈ ಮುಚ್ಚುವ ಗೌರವ ಪೂರ್ಣವಾದ ಉಡುಗೆಯನ್ನ ತೊಡಬೇಕೆಂದು ಎನ್ನುವುದನ್ನು ಸಹ ಹೇಳಿದರು.

ಭಾರತದ ಸಂಸ್ಕೃತಿಯನ್ನ ಉಳಿಸಿಕೊಂಡು ಹೋಗುವುದನ್ನ ಇಂದಿನ ಯುವ ಜನಾಂಗ ಕಲಿಯಬೇಕು. ಬಸವಣ್ಣ, ಮಹಾತ್ಮಾ ಗಾಂಧೀಜಿ, ಡಾ.ಅಂಬೇಡ್ಕರ ಕಂಡ ಭಾರತವನ್ನ ನೋಡಬೇಕೆಂದು ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.