Asianet Suvarna News Asianet Suvarna News

ಸಿರಿ ಧಾನ್ಯಗಳನ್ನ ಬಳಸಿ - ಆರೋಗ್ಯ ವೃದ್ಧಿಸಿ

ಮಕ್ಕಳು ಸದೃಢವಾಗಿ ಬೆಳೆಯಲು ಪೌಷ್ಟಿಕ ಆಹಾರ ಮುಖ್ಯವಾಗಿದ್ದು, ಅದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹುಳಿಯಾರಿನ ಪುರದಕಟ್ಟೆಯಲ್ಲಿ ಆಯೋಜನೆ ಮಾಡಲಾಗಿತ್ತು. ಸಿಪಿಒ ಜಯರಾಮ್ ಮಾತನಾಡಿ, ಇಂದಿನ ಮಕ್ಕಳಲಿ ಹೆಚ್ಚು ಅಪೌಷ್ಟಿಕತೆ ಕಾಣಬಹುದು. ಇದಕ್ಕೆ ಕಾರಣ ಅವರು ಸೇವಿಸುತ್ತಿರುವ ಆಹಾರದಲ್ಲಿ ಯಾವುದೇ ಖನಿಜ ಅಂಶಗಳು ಇಲ್ಲದಿರುವುದಾಗಿದೆ.

Consume whole grains - boost health snr
Author
First Published Feb 13, 2024, 7:32 AM IST

ಹುಳಿಯಾರು: ಮಕ್ಕಳು ಸದೃಢವಾಗಿ ಬೆಳೆಯಲು ಪೌಷ್ಟಿಕ ಆಹಾರ ಮುಖ್ಯವಾಗಿದ್ದು, ಅದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹುಳಿಯಾರಿನ ಪುರದಕಟ್ಟೆಯಲ್ಲಿ ಆಯೋಜನೆ ಮಾಡಲಾಗಿತ್ತು. ಸಿಪಿಒ ಜಯರಾಮ್ ಮಾತನಾಡಿ, ಇಂದಿನ ಮಕ್ಕಳಲಿ ಹೆಚ್ಚು ಅಪೌಷ್ಟಿಕತೆ ಕಾಣಬಹುದು. ಇದಕ್ಕೆ ಕಾರಣ ಅವರು ಸೇವಿಸುತ್ತಿರುವ ಆಹಾರದಲ್ಲಿ ಯಾವುದೇ ಖನಿಜ ಅಂಶಗಳು ಇಲ್ಲದಿರುವುದಾಗಿದೆ.

ಇದಕ್ಕೆ ನಾವೇ ಮೂಲ ಕಾರಣ ಮಕ್ಕಳಿಗೆ ಜಂಕ್ ಫುಡ್ ಕೊಡಿಸುತಿರುವುದು ಎಂದು ತಿಳಿಸಿದರು. ಇನ್ನು ಮುಂದೆಯಾದರೂ ಸಿರಿ ಉತ್ಪತ್ತಗಳನ್ನು ಬಳಸಿ ಎಂದು ಪ್ರಾದೇಶಿಕದ ಮೂಲಕ ತಿಸಿದರು. ಈ ಕಾರ್ಯಕ್ರಮದಲ್ಲಿ ಸಿರಿ ಧಾನ್ಯದ ಗಜೇಂದ್ರ ಒಕ್ಕೂಟ ಅಧ್ಯಕ್ಷೆ ಹೇಮಲತಾ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸುನಿತಾ, ವಲಯದ ಮೇಲ್ವಿಚಾರಕರು ರೇಷ್ಮಾ, ಸೇವಾಪ್ರತಿನಿಧಿ ನರಸಿಂಹ ಮೂರ್ತಿ ಹಾಜರಿದ್ದರು

ಆರೋಗ್ಯ ವೃದ್ಧಿಸಿ

 ಬಿ. ಶೇಖರ್‌ ಗೋಪಿನಾಥಂ

  ಮೈಸೂರು : ಹಲವು ವಿಶೇಷತೆಗಳಿಗೆ ವೇದಿಕೆಯಾಗಿರುವ ಸುತ್ತೂರು ಜಾತ್ರಾ ಮಹೋತ್ಸವವು ದೇಶದ ‘ಸಿರಿಧಾನ್ಯಗಳ’ ಮಹತ್ವ ಸಾರುವಲ್ಲೂ ಯಶಸ್ವಿಯಾಯಿತು.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ನಡೆದ ಸಿರಿಧಾನ್ಯಗಳ ಮಹತ್ವ ಕುರಿತ ಕೃಷಿ ವಿಚಾರಸಂಕಿರಣವು ಸಿರಿಧಾನ್ಯಗಳ ಪರಂಪರೆ, ಮಹತ್ವ, ಮಾರುಕಟ್ಟೆ, ಬೇಡಿಕೆಯನ್ನು ರೈತರು ಹಾಗೂ ಸಾರ್ವಜನಿಕರಿಗೆ ಮನದಟ್ಟು ಮಾಡಿಸಿತು. ವಿಚಾರಸಂಕಿರಣದಲ್ಲಿ ಪಾಲ್ಗೊಂಡಿದ್ದ ವಿಷಯ ತಜ್ಞರು ಸಿರಿಧಾನ್ಯಗಳ ಉಳಿಸಿ, ಬಳಸಿ, ಬೆಳೆಸುವ ನಿಟ್ಟಿನಲ್ಲಿ ವಿಷಯ ಮಂಡಿಸಿದರು.

ರೈತರು ಉದ್ಯಮಿಗಳಾಗಬೇಕು

ಕೃಷಿಯಲ್ಲಿ ಸಿರಿಧಾನ್ಯ ಕುರಿತು ಪ್ರಗತಿಪರ ರೈತ ಹೊನ್ನೂರು ಪ್ರಕಾಶ್‌ ಮಾತನಾಡಿ, 2023ನೇ ಸಾಲನ್ನು ವಿಶ್ವಸಂಸ್ಥೆಯು ಸಿರಿಧಾನ್ಯಗಳ ವರ್ಷವೆಂದು ಕರೆದಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಕಡಿಮೆ ಮಳೆ, ಗೊಬ್ಬರ ಇಲ್ಲದಿದ್ದರೂ ಬೆಳೆಯುವ ಸಿರಿಧಾನ್ಯಗಳನ್ನು ಪ್ರಸ್ತುತ ಹಲವಾರು ದೃಷ್ಠಿಯಲ್ಲಿ ನೋಡಬೇಕಿದೆ ಎಂದರು.

ರೈತರು ಎಲ್ಲವನ್ನೂ ಬೆಳೆಯುತ್ತಾರೆ. ಆದರೆ, ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ, ಮಾರುಕಟ್ಟೆಮಾಡುವುದರಲ್ಲಿ ಸೋಲುತ್ತಿದ್ದಾರೆ. ರೈತರು ಕ್ವಿಂಟಾಲ್‌ ರಾಗಿಯನ್ನು 3 ಸಾವಿರಕ್ಕೆ ಮಾರುತ್ತಾರೆ. ಆದರೆ, ರಾಗಿಯನ್ನು ಹಿಟ್ಟು ಮಾಡಿ ಮಾರಿದರೇ ಕ್ವಿಂಟಾಲ್‌ಗೆ 30 ಸಾವಿರ ಸಿಗುತ್ತದೆ. ರಾಗಿ, ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಾಗಿ ಮಾರಿದರೇ ಬೇರೆಯವರು ದರ ನಿಗದಿ ಮಾಡುತ್ತಾರೆ. ಆದರೆ, ಮೌಲ್ಯವರ್ಧನೆ ಮಾಡಿ ಮಾರಿದರೇ ರೈತರೇ ತಮ್ಮ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಿಕೊಳ್ಳಬಹುದು. ಆ ಮೂಲಕ ಎಲ್ಲಾ ರೈತರು ಉದ್ಯಮಿಗಳಾಗಬೇಕು ಎಂದು ಅವರು ಆಶಿಸಿದರು.

ರೈತರ ಮಕ್ಕಳಿಗೆ ಈಗ ಹೆಣ್ಣು ಕೊಡುತ್ತಿಲ್ಲ. ತಾವು ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ ಮಾರಿದರೇ ಆವಾಗ ಎಲ್ಲರೂ ಹುಡುಕಿಕೊಂಡು ಬಂದು ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಾರೆ. ಕಬ್ಬು ಬೆಳೆಯಲ್ಲಿ ರೈತರಿಗೆ ಲಾಭವಿಲ್ಲ. ಅದರ ಬದಲು ಸಿರಿಧಾನ್ಯ ಬೆಳೆದರೇ ಹೆಚ್ಚು ಲಾಭ ಗಳಿಸಬಹುದು. ರೈತರು ಸಾವಯವ ಕೃಷಿ ಮಾಡುವ ಮೂಲಕ ಮಾರುಕಟ್ಟೆಕ್ರಾಂತಿ ಮಾಡಬೇಕು ಎಂದು ಅವರು ಕರೆ ನೀಡಿದರು.

ವೈಜ್ಞಾನಿಕವಾಗಿ ಸಿರಿಧಾನ್ಯ ಬಳಸಿ:

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿ ವಿಸ್ತರಣಾ ನಿರ್ದೇಶಕ ಡಾ.ವಿ. ಹೇಮಲಾ ನಾಯಕ್‌ ಮಾತನಾಡಿ, ಹಸಿರು ಕ್ರಾಂತಿ, ಆಹಾರ ಭದ್ರತೆಗಾಗಿ ದೇಶದಲ್ಲಿ ರಾಸಾಯಿನಕ ಗೊಬ್ಬರ, ವಿದೇಶಿ ತಳಿಗಳನ್ನು ತಂದು ಹೆಚ್ಚಿನ ಇಳುವರಿ ಪಡೆಯಲಾಯಿತು. ಆದರೆ, ಇದು ಜನರ ಆರೋಗ್ಯದ ಪರಿಣಾಮ ಬೀರುತ್ತಿದೆ. ಹೀಗಾಗಿ, ಈಗ ಪರಿಸರಸ್ನೇಹಿ ಸಿರಿಧಾನ್ಯಗಳತ್ತ ಮುಖ ಮಾಡಿದ್ದೇವೆ ಎಂದರು.

ಸಿರಿಧಾನ್ಯ ಬೆಳೆಯುವುದರಲ್ಲಿ ಭಾರತವು ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಹೆಚ್ಚಿನ ಪೌಷ್ಟಿಕಾಂಶಗಳಿಂದ ಕೂಡಿರುವ ಸಿರಿಧಾನ್ಯಗಳನ್ನು ವೈಜ್ಞಾನಿಕವಾಗಿ ಬಳಸಿಕೊಂಡು, ಮೌಲ್ಯವರ್ಧನೆಗೆ ಹೆಚ್ಚು ಒತ್ತು ನೀಡಬೇಕಿದೆ ಎಂದು ಅವರು ಹೇಳಿದರು.

ಸಿರಿಧಾನ್ಯಗಳ ಪುನರುಜ್ಜೀವನ ಹಾಗೂ ಸಂಸ್ಕರಣೆ ಕುರಿತು ಅತ್‌ರ್‍ 360 ಇಕೋ ವೆಂಚ​ರ್‍ಸ್ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್‌. ದಿನೇಶಕುಮಾರ್‌ ಮಾತನಾಡಿ, ಸಿರಿಧಾನ್ಯಗಳನ್ನು ಸರಿಯಾಗಿ ಸಂಸ್ಕರಿಸಲು ತಂತ್ರಜ್ಞಾನ, ಯಂತ್ರಗಳ ಅಗತ್ಯವಿದೆ. ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ತಂತ್ರಜ್ಞಾನದೊಂದಿಗೆ ಯಂತ್ರಗಳ ಅಭಿವೃದ್ಧಿಯಲ್ಲಿ ತೊಡಗಿದೆ. ಸಿರಿಧಾನ್ಯಗಳ ಕ್ರಾಂತಿ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ಭಾರತ ನವಶೀಲಾಯುಗದಲ್ಲಿ ಸಿರಿಧಾನ್ಯ ಕೃಷಿ ಕ್ರಾಂತಿ ಕುರಿತು ಪುರಾತತ್ವ ಶಾಸ್ತ್ರಜ್ಞ ಪ್ರೊ. ರವಿ ಕೋರಿಶೆಟ್ಟರ್‌ ವಿಷಯ ಮಂಡಿಸಿದರು.

ಭೂಮಿ ಬಹಳಷ್ಟುಸತ್ವ ಕಳೆದುಕೊಂಡಿದೆ. ಭೂಮಿಯಲ್ಲಿನ ಸಾವಯವ ಇಂಗಾಲದ ಅಂಶ ಕಡಿಮೆ ಆಗಿದೆ. ಇದರಿಂದ ಭೂಮಿಯು ಪ್ರಸ್ತುತ ಐಸಿಯುನಲ್ಲಿದೆ. ಹೀಗಾಗಿ, ರೈತರು ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಸಿರಿಧಾನ್ಯಗಳನ್ನು ಹೆಚ್ಚು ಬೆಳೆಯಬೇಕು.

Follow Us:
Download App:
  • android
  • ios