ಮೈತ್ರಿ ಒಪ್ಪಿಕೊಳ್ಳದ ಕೈ ಮನಸ್ಸುಗಳು!

ಕಾಂಗ್ರೆಸ್ ಪಕ್ಷದ ಮನಸ್ಸುಗಳು ಒಪ್ಪಿಕೊಳ್ಳಲು ಸಿದ್ದರಿಲ್ಲ 

ಮೈತ್ರಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಸಿಎಂ ಲಿಂಗಪ್ಪ

ರಾಮನಗರ ಉಪಚುನಾವಣೆಯಲ್ಲಿ ಮೈತ್ರಿಗೆ ವಿರೋಧ

ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧೆಗೆ ಲಿಂಗಪ್ಪ ಒತ್ತಾಯ

First Published Jul 28, 2018, 8:29 PM IST | Last Updated Jul 30, 2018, 12:16 PM IST

ರಾಮನಗರ(ಜು.28): ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಸಿಎಂ ತವರು ಜಿಲ್ಲೆಯ ಕಾಂಗ್ರೆಸ್ ಮುಖಂಡನಿಂದಲೇ ವಿರೋಧ ವ್ಯಕ್ತವಾಗಿದೆ. ಜೆಡಿಎಸ್ ಜೊತೆಗಿನ ಮೈತ್ರಿಯನ್ನು ಕಾಂಗ್ರೆಸ್ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ವಿರೋಧಿಸಿದ್ದಾರೆ.


ನಾನು ಸೇರಿದಂತೆ ನಮ್ಮ ಪಕ್ಷದ ಯಾರೂ ಸಹ ಜೆಡಿಎಸ್ ಮೈತ್ರಿಯನ್ನು ಒಪ್ಪಿಕೊಂಡಿಲ್ಲ ಎಂದಿರುವ ಲಿಂಗಪ್ಪ, ರಾಮನಗರ ಉಪ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿಯಾದರೆ ಅದನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ.

ರಾಮನಗರ ಉಪಚುನಾವಣೆಯಲ್ಲಿ ಮತ್ತೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾದರೆ ತಾವು ಅದನ್ನು ಉ್ಗರವಾಗಿ ಖಂಡಿಸುವುದಾಗಿ ಲಿಂಗಪ್ಪ ಎಚ್ಚರಿಸಿದ್ದಾರೆ. ಅಲ್ಲದೇ  ಮೈತ್ರಿಗೆ ಮುಂದಾದರೆ ತಾವೇ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿಯೂ ಅವರು ಬೆದರಿಕೆ ಒಡ್ಡಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..