ಮೈಸೂರು(ಫೆ.27): ಮೈಸೂರಿನಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಮೇಲೆಯೇ ರೌಡಿ ಶೀಟರ್ ಫೈಲ್ ಓಪನ್ ಆಗಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ವಿಕುಮಾರ್ ರೌಡಿ ಶೀಟರ್ ಲಿಸ್ಟ್‌ಗೆ ಸೇರಿದ್ದಾರೆ.

ಮೈಸೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷನ‌ ಮೇಲೆ ರೌಡಿಶೀಟರ್ ಫೈಲ್ ಓಪನ್ ಆಗಿದ್ದು, ರೌಡಿಶೀಟರ್ ವ್ಯಾಪ್ತಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ವಿಕುಮಾರ್ ಸೇರಿದ್ದಾರೆ.

ಅಜ್ಜನ ಕೊಲೆ ಮಾಡಿದ್ದ ಮೊಮ್ಮಗನಿಗೆ ಜೀವಾವಧಿ ಶಿಕ್ಷೆ

ಬಿಳಿಕೆರೆ ಪೊಲೀಸರು ವಿಜಯ್ ಕುಮಾರ್ ಮೇಲೆ ರೌಡಿಶೀಟರ್ ಫೈಲ್ ಓಪನ್ ಮಾಡಿದ್ದು, ಹೊಸರಾಮನಹಳ್ಳಿ ಗಲಾಟೆ ಪ್ರಕರಣ ಹಾಗೂ ಪರಿಯಾಪಟ್ಟಣ ಠಾಣೆಯಲ್ಲಿ ಗಲಾಟೆ ಸಂಭಂದ ಪೇಜ್ ಫೈಲ್ ತೆರೆಯಲಾಗಿದೆ.

ಹುಣಸೂರು ಉಪಚುನಾವಣೆ ವೇಳೆ ಹೊಸರಾಮನಹಳ್ಳಿಯಲ್ಲಿ ಗಲಾಟೆ ನಡೆದಿತ್ತು. ಮತದಾನದಿಂದು ವೇಳೆ ಶಾಸಕ ಅನಿಲ್ ಚಿಕ್ಕಮಾದು ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಸ್ಥಳದಲ್ಲಿ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಧರಣಿ ಪ್ರತಿಭಟನೆಗೆ ಮುಂದಾಗಿದ್ದರು.

ಮಹಿಳೆ ಕೊಂದ ಮಂಗಳಮುಖಿಯ ಬಡಿದು ಕೊಂದ ಗ್ರಾಮಸ್ಥರು!

ಪೋಲಿಸ್ ಹಾಗೂ ಕಾಂಗ್ರೆಸ್ ಕಾರ್ಯರ್ತ ನಡುವೆ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಡಿವೈಎಸ್ಪಿ ಸುಂದರಾಜ್ ಹಾಗೂ ವಿಜಯ್ ಕುಮಾರ್ ನಡುವೆ ವಾಗ್ವಾದ ನಡೆದಿತ್ತು. ಡಾ.ಬಿ ಜೆ.ವಿಜಯ್ ಕುಮಾರ್ ಪೊಲೀಸರಿಗೆ ಏಕಚನದಲ್ಲಿ ಧಮ್ಕಿ ಹಾಕಿದ್ದರು. ಜೊತೆಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಗಲಾಟೆ ಕಾರಣಕ್ಕೆ ರೌಡಿ ಶೀಟರ್ ಹಾಳೆ ಓಪನ್ ಆಗಿದೆ.