ಬಳ್ಳಾರಿ‌(ಜ.20): ಪ್ರಚೋದನಕಾರಿ ಭಾಷಣ ಮಾಡಿದ ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಮುಂದುವರೆದಿದೆ. ಸೋಮಶೇಖರ್ ರೆಡ್ಡಿಯನ್ನ ಯಾವಾಗ ಬಂಧಿಸುತ್ತೀರಿ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. 

ಸೋಮಶೇಖರ್ ರೆಡ್ಡಿ ವಿರುದ್ಧ ಅಸಂಖ್ಯಾತ ದೂರುಗಳು ದಾಖಲಾಗಿದ್ರೂ ಯಾಕೆ ಇನ್ನೂ ಬಂಧನವಾಗಿಲ್ಲ? ಕಾನೂನು ಎಲ್ಲರಿಗೂ ಒಂದೇ, ಮೊದಲು ಬಂಧಿಸಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದಾರೆ. 

‘ಮುಸ್ಲಿಮರು 10 ಮಕ್ಕಳನ್ನ ಹೆತ್ತರೆ, ಹಿಂದೂಗಳು 50 ಮಕ್ಕಳಿಗೆ ಜನ್ಮ ನೀಡುತ್ತೇವೆ’

ಕಾಂಗ್ರೆಸ್ ನಾಯಕರು ಎರಡೆರಡು ಬಾರಿ ಬಳ್ಳಾರಿ ಎಸ್ಪಿ ಹಾಗೂ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದಾರೆ. ಆದರೂ ಕೂಡ ಇನ್ನೂ ಸೋಮಶೇಖರ್ ರೆಡ್ಡಿಯನ್ನ ಬಂಧಿಸಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಮಾಜಿ ಸಿಂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಕೂಡ ದೂರು ಸಲ್ಲಿಸಿದ್ದಾರೆ.