Asianet Suvarna News Asianet Suvarna News

ವಿಜಯನಗರದಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲು: ಕಾರ್ಯಕರ್ತರ ಮಧ್ಯೆ ವಾಗ್ವಾದ

ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ನಡುವೆ ಪರಸ್ಪರ ವಾಗ್ವಾದ| ಪಕ್ಷದ ಮುಖಂಡರ ಭಾವಚಿತ್ರಗಳನ್ನು ಕಿತ್ತೊಗೆದು ಆಕ್ರೋಶ| ವಿಜಯನಗರ ವಿಧಾನಸಭಾ ಉಪಚುನಾವಣೆಯಲ್ಲಿ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿಲ್ಲ ಎಂಬ ಆರೋಪ|

Congress Activists quarrel Each other in Hosapete
Author
Bengaluru, First Published Dec 13, 2019, 9:48 AM IST

ಹೊಸಪೇಟೆ(ಡಿ.13): ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ನಡುವೆ ಪರಸ್ಪರ ವಾಗ್ವಾದ ನಡೆದು, ಪಕ್ಷದ ಮುಖಂಡರ ಭಾವಚಿತ್ರಗಳನ್ನು ಕಿತ್ತೊಗೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿದೆ. ಇತ್ತೀಚೆಗೆ ಜರುಗಿದ ವಿಜಯನಗರ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿಲ್ಲ ಎಂದು ಆರೋಪಿಸಿ, ಕಾರ್ಯಕರ್ತರು ಶಿವಯೋಗಿ ಭಾವಚಿತ್ರ ಹೊಂದಿರುವ ಫ್ಲೆಕ್ಸ್‌ಗಳನ್ನು ಕಿತ್ತೆಸೆದಿದ್ದಾರೆ.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆಯವರು ಸೋಲು ಅನುಭವಿಸಿದ ಹಿನ್ನೆಲೆ ಆತ್ಮಾವಲೋಕನ ಸಭೆಯಲ್ಲಿ ಕೈ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಅದು ಕೈ, ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಶಿವಯೋಗಿ ಬದಲಾವಣೆ ಸೇರಿದಂತೆ ಪ್ರಸ್ತುತ ಇರುವ ಕಚೇರಿಯನ್ನು ಬೇರೆಡೆ ಸ್ಥಳಾಂತರ ಮಾಡಬೇಕು ಎಂದು ಪಟ್ಟು ಹಿಡಿದಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಿಜಯನಗರ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಕುಂಠಿತವಾಗಿದೆ. ಕೂಡಲೇ ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡಬೇಕು. ಮೊಹಮ್ಮದ್ ಇಮಾಮ್ ನಿಯಾಜಿ ಅವರ ವೈಯಕ್ತಿಕ ಕಚೇರಿಯಾದ ಹಿನ್ನೆಲೆ ಕೆಲವೊಬ್ಬರು, ಈ ಕಚೇರಿಗೆ ಸರಿಯಾಗಿ ಬರುತ್ತಿಲ್ಲ. ಕೂಡಲೇ ಕಾಂಗ್ರೆಸ್ ಕಚೇರಿಯನ್ನು ಬೇರೆಡೆ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎನ್. ಮೊಹ್ಮಮದ್ ಇಮಾಮ್ ನಿಯಾಜಿ, ಅಯ್ಯಾಳಿ ಮೂರ್ತಿ, ವೆಂಕಟರಾವ್ ಘೋರ್ಪಡೆ, ಎಲ್. ಸಿದ್ದನಗೌಡ, ಗಾದಿಗನೂರು ಹಾಲಪ್ಪ, ಟಿ. ಚಿದಾನಂದ, ಗುಜ್ಜಲ ನಾಗರಾಜ, ಗುಜ್ಜಲ ರಾಘವೇಂದ್ರ, ಬಡಾವಲಿ, ನಿಂಬಗಲ್ ರಾಮಕೃಷ್ಣ, ಕೆ. ಗೌಸ್, ಬಸವರಾಜ ಹಾಗೂ ನೂರ್‌ಜಹಾನ್ ಹಾಗೂ ಲಿಯಾಖತ್ ಅಲಿ ಇನ್ನಿತರರಿದ್ದರು.

Follow Us:
Download App:
  • android
  • ios