ತುಮಕೂರು(ಜ.21): ರೈಲು ಪ್ರಯಾಣದ ಬಗ್ಗೆ ಎಷ್ಟೇ ಸುರಕ್ಷತೆ ವಹಿಸಿದರೂ, ಭದ್ರತಾ ಸಿಬ್ಬಂದಿಗಳು ಎಷ್ಟೇ ಸೂಚನೆ ಕೊಟ್ಟರೂ ಅಪಘಾತಗಳು ನಡೆಯುತ್ತಲೇ ಇರುತ್ತವೆ. ತುಮಕೂರಿನಲ್ಲಿ ರೈಲಿಗೆ ಸಿಲುಕಿ ವಿದ್ಯಾರ್ಥಿ ದಾರುಣವಾಗಿ ಮೃತಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಜೈಪುರ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಯುವಕ ಸಾವನ್ನಪ್ಪಿದ್ದಾನೆ.

 ತಿಪಟೂರು ನಗರದ  ಶಿವಕುಮಾರಸ್ವಾಮೀಜಿ ವೃತ್ತದ ಬಳಿ ಘಟನೆ ನಡೆದಿದ್ದು ರೈಲಿಗೆ ಸಿಲುಕಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಜೈಪುರ್ ಎಕ್ಸಪ್ರೆಸ್‌ಗೆ ರೈಲಿಗೆ ಸಿಲುಕಿ ವಿದ್ಯಾರ್ಥಿ ಮೃತಪಟ್ಟಿದ್ದು, ಮೃತ ದುರ್ದೈವಿ ಮಧು ಆರ್ ಬೆಂಗಳೂರು ಮೂಲದವನಾಗಿದ್ದಾನೆ.

ಬಾಂಬ್ ನಿಷ್ಕ್ರಿಯಗೊಳಿಸಿದ ತಜ್ಞರು: ನಿಟ್ಟುಸಿರು ಬಿಟ್ಟ ಮಂಗಳೂರಿಗರು

ಮೃತ ವ್ಯಕ್ತಿ ಕಲ್ಪತರು ಕಾಲೇಜು ವಿದ್ಯಾರ್ಥಿಯಾಗಿದ್ದು, ಅರಸೀಕೆರೆ ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಜಾಗೃತೆ ವಹಿಸಬೇಕಾದ ಅಗತ್ಯವಿದೆ.