Asianet Suvarna News Asianet Suvarna News

ಯೋಗೀಶ ಗೌಡ ಹತ್ಯೆ ಪ್ರಕ​ರ​ಣ​: ಇಂಡಿಗೆ ಜೈಲೇ ಗತಿ, ಧಾರವಾಡ ಜೈಲಿಗೆ ಶಿಫ್ಟ್‌

ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಆರೋ​ಪದ ಅಡಿ ಡಿ.13ರಂದು ವಿಜ​ಯಪುರದಲ್ಲಿ ಇಂಡಿ ವಶಕ್ಕೆ ಪಡೆದಿದ್ದ ಸಿಬಿಐ| ಬಸ​ವ​ರಾಜ ಮುತ್ತಗಿ ಅವರ ಹತ್ಯೆಗೆ ಸುಪಾರಿ| 

Chandrashekhar Indi Shifted to Dharwad Jail grg
Author
Bengaluru, First Published Dec 18, 2020, 9:59 AM IST

ಧಾರ​ವಾಡ(ಡಿ.18): ಯೋಗೀಶ ಹತ್ಯೆ ಪ್ರಕ​ರ​ಣ​ಕ್ಕೆ ಸಂಬಂಧಿ​ಸಿ​ದಂತೆ ಎರಡು ದಿನ​ಗಳ ಕಾಲ ಸಿಬಿಐ ವಿಚಾ​ರಣೆ ಆನಂತರ ವಿನಯ ಕುಲ​ಕರ್ಣಿ ಅವರ ಮಾವ ಚಂದ್ರ​ಶೇ​ಖರ ಇಂಡಿ ಅವ​ರನ್ನು ಡಿ.28ರವರೆಗೆ ನ್ಯಾಯಾಂಗ ಬಂಧ​ನಕ್ಕೆ ಇಲ್ಲಿನ ಸಿಬಿ​ಐನ ವಿಶೇಷ ನ್ಯಾಯಾ​ಲಯ ಆದೇ​ಶಿ​ಸಿದೆ. 

ಸಿಬಿಎ ವಶದಲ್ಲಿದ್ದ ಅವರನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಆರೋ​ಪದ ಅಡಿ ಡಿ.13ರಂದು ವಿಜ​ಯಪುರದಲ್ಲಿ ಇಂಡಿ ಅವ​ರನ್ನು ವಶಕ್ಕೆ ಪಡೆದು ತೀವ್ರ ವಿಚಾ​ರಣೆ ಆನಂತರ ಆರೋಪ ಪಕ್ಕಾ ಆಗುತ್ತಿದ್ದಂತೆ 14ರಂದು ಬಂಧಿ​ಸ​ಲಾ​ಗಿತ್ತು. ಬಳಿಕ ಡಿ.15ರಂದು ನ್ಯಾಯಾಲಯ 2 ದಿನ ಅವರನ್ನು ಹೆಚ್ಚಿನ ವಿಚಾರಣೆಗೆ ಸಿಬಿಐ ವಶಕ್ಕೆ ನೀಡಿತ್ತು. ವಿಚಾ​ರ​ಣೆ ಬಳಿಕ ಗುರು​ವಾರ ಅವ​ರನ್ನು ನ್ಯಾಯಾ​ಲ​ಯಕ್ಕೆ ಹಾಜರು ಪಡಿ​ಸ​ಲಾ​ಯಿತು. ವಿಚಾರಣೆ ನಡೆಸಿದ ನ್ಯಾಯಾಲಯ ಇಂಡಿಗೆ ಡಿ.28ರವರಿಗೆ ನ್ಯಾಯಾಂಗ ಬಂಧ​ನ ವಿಧಿಸಿ ಆದೇ​ಶಿ​ಸಿತು. ಜತೆಗೆ ಡಿ.19ರಂದು ಇಂಡಿ ಅವರ ಕುಟುಂಬದ ಭೇಟಿಗೂ ಅವ​ಕಾಶ ನೀಡಿ ಆದೇಶ ನೀಡಿತು.

ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ತಪ್ಪುಗಳ ಸರಮಾಲೆ: ಇಕ್ಕಟ್ಟಿಗೆ ಸಿಲುಕಿದ ಕುಲಕರ್ಣಿ

ಮುತ್ತಗಿ ನಾವು ಒಂದೇ ಕುಟುಂಬದ ಸದ​ಸ್ಯ​ರಿದ್ದಂತೆ

ಬಸ​ವ​ರಾಜ ಮುತ್ತಗಿ ಅವರ ಹತ್ಯೆಗೆ ಸುಪಾರಿ ನೀಡ​ಲಾ​ಗಿದೆ ಎಂಬುದು ಸತ್ಯಕ್ಕೆ ದೂರ​ವಾ​ಗಿದೆ. ಮುತ್ತಗಿ ಮತ್ತು ನಾವೆ​ಲ್ಲರೂ ಮೊದ​ಲಿ​ನಿಂದಲೂ ಕುಟುಂಬದ ಸದ​ಸ್ಯ​ರಂತೆ ಇದ್ದೇವೆ ಎಂದು ಜಿಪಂ ಸದಸ್ಯ ಯೋಗೀ​ಶ​ಗೌಡ ಹತ್ಯೆಗೆ ಸಂಬಂಧಿ​ಸಿ​ದಂತೆ ಸಿಬಿ​ಐನ ವಿಚಾ​ರಣೆ ಮುಗಿಸಿ ಬಂದ ವಿನಯ ಕುಲಕರ್ಣಿ ಅವರ ಸಹೋ​ದರ ವಿಜಯ ಕುಲ​ಕರ್ಣಿ ಮೊದಲ ಬಾರಿಗೆ ಮಾಧ್ಯ​ಮ​ಗ​ಳಿಗೆ ಪ್ರತಿ​ಕ್ರಿಯೆ ನೀಡಿ​ದ್ದಾರೆ.

ಈ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಪಿಸ್ತೂಲು ಪೂರೈಕೆ ಮಾಡಿ​ರುವ ಆರೋಪ ಹೊತ್ತಿ​ರುವ ವಿನಯ ಅವರ ಸೋದರ ಮಾವ ಚಂದ್ರ​ಶೇ​ಖರ ಇಂಡಿ ಅವ​ರನ್ನು ಎರಡು ದಿನ​ಗ​ಳಿಂದ ವಿಚಾ​ರಣೆ ನಡೆ​ಸು​ತ್ತಿದ್ದು, ಇದೇ ಸಂದ​ರ್ಭ​ದಲ್ಲಿ ಬುಧ​ವಾರ ಹಾಗೂ ಗುರು​ವಾರ ಎರಡು ದಿನ​ಗಳ ಕಾಲ ವಿಜಯ ಕುಲ​ಕರ್ಣಿ ಸಹ ಸಿಬಿ​ಐನ ವಿಚಾ​ರ​ಣೆಗೆ ಒಳ​ಗಾ​ದರು. ವಿಚಾ​ರಣೆ ಮುಗಿಸಿ ಹೊರ ಬಂದ ಅವರು, ಮುತ್ತಗಿ ಹತ್ಯೆಗೆ ಸಂಚು ರೂಪಿ​ಸ​ಲಾ​ಗಿದೆ ಎಂಬ ಸುದ್ದಿ ಯಾರು ಹಬ್ಬಿ​ಸಿ​ದ್ದಾರೆ ಗೊತ್ತಿಲ್ಲ. ಅದೆಲ್ಲಾ ಸುಳ್ಳು. ನಾವೆಲ್ಲಾ ಒಂದೇ ತಾಟಿ​ನಲ್ಲಿ ಊಟ ಮಾಡಿ​ದ್ದೇವೆ ಎಂದು ಪ್ರತಿ​ಕ್ರಿ​ಯಿ​ಸಿ​ದರು.

ಹಾಗೆಯೇ ಗುರು​ವಾರ ವಿನಯ ಅವರ ಸಂಬಂಧಿ ನಟ​ರಾಜ್‌, ಪೊಲೀಸ್‌ ಅಧಿ​ಕಾರಿ ವರ್ಗ​ದ​ವರ ಜತೆಗೆ ಸಂಪರ್ಕ ಹೊಂದಿ​ರುವ ಆರೋ​ಪದ ಮೇಲೆ ನಿವೃತ್ತ ಡಿವೈ​ಎಸ್ಪಿ ಪುತ್ರ ಕಿರಣ ವೀರ​ನ​ಗೌ​ಡರ ಅವ​ರನ್ನೂ ವಿಚಾ​ರಣೆ ಮಾಡಿ ಮಹ​ತ್ವದ ಮಾಹಿ​ತಿ​ಯನ್ನು ಸಿಬಿಐ ಅಧಿ​ಕಾ​ರಿ​ಗಳು ಸಂಗ್ರ​ಹಿ​ಸಿ​ದರು.
 

Follow Us:
Download App:
  • android
  • ios