Asianet Suvarna News Asianet Suvarna News

ಬಸ್ ಅಪಘಾತ: ಕಾಸರಗೋಡಿನ ಚೆಂಡೆ ಕಲಾವಿದರಿಗೆ ಗಾಯ

ಮಿನಿ ಬಸ್‌ ಇನೋವಾ ಕಾರಿಗೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಘಟನೆ ಮದ್ದೂರಿನಲ್ಲಿ ನಡೆದಿದೆ. ಘಟನೆಯಲ್ಲಿ ಕಾಸರಗೋಡಿನ ಏಳು ಮಂದಿ ಚೆಂಡೆ ಕಲಾವಿದರು ಗಾಯಗೊಂಡಿದ್ದಾರೆ.

Chande artists from kasaragod injured in Bus accident at mandya
Author
Bangalore, First Published Jan 11, 2020, 8:22 AM IST

ಮಂಡ್ಯ(ಜ.11): ಮಿನಿ ಬಸ್ಸೊಂದು ಇನೋವಾ ಕಾರಿಗೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾವಾಗಿ ಬಸ್‌ ಚಾಲಕ ಸೇರಿದಂತೆ ಕಾಸರಗೂಡು ಮೂಲದ ಏಳು ಮಂದಿ ಚಂಡೆ ಕಲಾವಿದರು ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕಿನ ನಿಡಘಟ್ಟಗ್ರಾಮದ ಬಳಿ ಶುಕ್ರವಾರ ಜರುಗಿದೆ.

ಕಾಸರಗೋಡಿನ ಚೆಂಡೆ ಕಲಾವಿದರಾದ ಅಖಿಲೇಶ್‌, ಅಗೀಲ್, ಸಚೇತ್‌, ಜೀತು, ವಿಜಿಲ್, ವಿಭಿನ ಹಾಗೂ ಮಿನಿ ಬಸ್‌ ಚಾಲಕ ರಾಜೇಂದ್ರನ್‌ ಎಂಬುವರು ಗಾಯಗೊಂಡಿದ್ದಾರೆ. ಗಾಯಾಳುಗಳು ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬಸ್‌ ನಲ್ಲಿದ್ದ 15 ಮಂದಿ ಕಲಾವಿದರು, ಇನೋವಾ ಕಾರಿನಲ್ಲಿದ್ದ ನಾಲ್ಕು ಮಂದಿ ಪ್ರಯಾಣಿಕರು ಸೇರಿದಂತೆ 19 ಮಂದಿ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅತ್ಯಾಚಾರ: 3 ವರ್ಷದ ಕಂದಮ್ಮನಿಗೆ ನಿತ್ಯ ನರಕ ಯಾತನೆ

ಚೆಂಡೆ ಕಲಾವಿದರೆಲ್ಲರೂ ಕಾಸರಗೂಡಿನಿಂದ ರೈಲಿನಲ್ಲಿ ಮಂಗಳೂರಿಗೆ ಬಂದ ನಂತರ ಹರ್ಷದೀಪ್‌ ಟ್ರಾವೆಲ್ಸ್‌ ನ ಮಿನಿ ಬಸ್ಸಿನಲ್ಲಿ ಮಡಿಕೇರಿ ಮೂಲಕ ಬೆಂಗಳೂರಿನ ಕೆಂಗೇರಿಯಲ್ಲಿನ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದರು. ಮದ್ದೂರು ತಾಲೂಕು ನಿಡಘಟ್ಟದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೆಳಗ್ಗೆ 5-30ರ ಸುಮಾರಿಗೆ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕಂಟೈನರ್‌ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಲು ಹೋದ ಮಿನಿ ಬಸ್‌ ಚಾಲಕ ಪಕ್ಕದಲ್ಲಿ ಹೋಗುತ್ತಿದ್ದ ಇನೋವಾ ಕಾರಿಗೆ ಡಿಕ್ಕಿ ಹೊಡೆದ ನಂತರ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಅಪಘಾತ ಸಂಭವಿಸಿದೆ.

ಪ್ರವಾಸಕ್ಕೆ ತೆರಳುತ್ತಿದ್ದ ಬಸ್‌ ಉರುಳಿ 12 ಮಂದಿಗೆ ಗಾಯ

ಅಪಘಾದಲ್ಲಿ ಮಿನಿ ಬಸ್‌ ಸಂಪೂರ್ಣವಾಗಿ ಜಖಂಗೊಂಡಿದೆ. ಇನೋವಾ ಕಾರು ಚಾಲಕನ ಬಲ ಭಾಗದಲ್ಲಿ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಈ ಸಂಬಂಧ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow Us:
Download App:
  • android
  • ios