ಚಿತ್ರದುರ್ಗ (ನ.26): ಶೌಚಕ್ಕೆ ಹೋದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. 

ಚಳ್ಳಕೆರೆ ಠಾನೆ ಪೊಲೀಸರಿಂದ ಆರೋಪಿ ರವಿರಾಜ್ (21) ಬಂಧಿಸಲಾಗಿದೆ. ಬಾಲಕಿಯ ಅಪಹರಣ ಮತ್ತು ಅತ್ಯಚಾರ ನಡೆಸಿದ ಪ್ರಕಣದ ಆರೋಪದ ಅಡಿಯಲ್ಲಿ ಆತನನ್ನು ಬಂಧಿಸಲಾಗಿದೆ. 

ಚಿಕ್ಕಮಗಳೂರು ನೌಟಂಕಿ ರಾಗಿಣಿ... ಗಂಡ ಬಂದಾಗ ಪ್ರಿಯಕರನ ತೆಕ್ಕೆಯಲ್ಲಿದ್ದಳು! .
 ಚಳ್ಳಕೆರೆ ತಾಲೂಕಿನ ಬಂಡೇಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. 
  
ಅಕ್ಟೋಬರ್ 28 ರಂದು ಬಯಲು ಶೌಚಕ್ಕೆ ಹೋಗಿದ್ದ ಬಾಲಕಿಯನ್ನು  ಅಪಹರಣ ಮಾಡಿದ್ದ ಆತ ಅತ್ಯಾಚಾರ ಎಸಗಿದ್ದ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.