Asianet Suvarna News Asianet Suvarna News

ಒಂದೇ ದಿನದಲ್ಲಿ ನಿರ್ಮಾಣವಾಯ್ತು ರಸ್ತೆ!

ಕಳೆದ 8 ವರ್ಷಗಳಿಂದ ಸಾರ್ವಜನಿಕ ರಸ್ತೆ ಇದ್ದರೂ ಸಹ ಪರದಾಡುತ್ತಿದ್ದ ಜನರಿಗೆ ಅನುಕೂಲವಾಗಲಿ ಎಂದು ಜಿಲ್ಲಾಧಿಕಾರಿಗಳು ಹಾಗೂ ಪಾಂಡವಪುರ ಉಪವಿಭಾಗಾಧಿಕಾರಿಗಳು ಸೇರಿ ಒಂದೇ ದಿನದಲ್ಲಿ ರಸ್ತೆ ನಿರ್ಮಾಣ ಮಾಡಿಸಿ ಹೊಸ ಅಧ್ಯಾಯ ಸೃಷ್ಟಿಸಿದ್ದಾರೆ.

 

Cement road constructed within a day in Mandya
Author
Bangalore, First Published Feb 27, 2020, 11:59 AM IST

ಮಂಡ್ಯ(ಫೆ.27): ಕಳೆದ 8 ವರ್ಷಗಳಿಂದ ಸಾರ್ವಜನಿಕ ರಸ್ತೆ ಇದ್ದರೂ ಸಹ ಪರದಾಡುತ್ತಿದ್ದ ಜನರಿಗೆ ಅನುಕೂಲವಾಗಲಿ ಎಂದು ಜಿಲ್ಲಾಧಿಕಾರಿಗಳು ಹಾಗೂ ಪಾಂಡವಪುರ ಉಪವಿಭಾಗಾಧಿಕಾರಿಗಳು ಸೇರಿ ಒಂದೇ ದಿನದಲ್ಲಿ ರಸ್ತೆ ನಿರ್ಮಾಣ ಮಾಡಿಸಿ ಹೊಸ ಅಧ್ಯಾಯ ಸೃಷ್ಟಿಸಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಗ್ರಾಮದ ಗಣಂಗೂರು-ಸಿದ್ದಾಪುರ ರಸ್ತೆಯ ಅಂಗನವಾಡಿ ಹಿಂಭಾಗದ ರಸ್ತೆಯ ನಿರ್ಮಾಣ ಕಾಮಗಾರಿಗೆ ಅಕ್ಕಪಕ್ಕದ ನಿವಾಸಿಗಳು ಸಾಕಷ್ಟುಪ್ರತಿರೋಧ ತೋರಿ ಗಲಾಟೆ ಮಾಡಿ ರಸ್ತೆ ನಿರ್ಮಾಣಕ್ಕೆ ತೊಂದರೆ ಮಾಡುತ್ತಿದ್ದರು.

4 ವರ್ಷದ ಮಗುವಿಗೆ ತಲಸೀಮಿಯಾ ಕಾಯಿಲೆ

ಈ ರಸ್ತೆ ನಿರ್ಮಾಣಕ್ಕೆ ಶಿವಲಿಂಗು ಅವರ ಪುತ್ರ ಎಸ್‌.ನಾಗರಾಜು(ರಘು) ಸಬ್ಬನಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಆನಂದ್‌ ಹಾಗೂ ಪಿಡಿಒ ಎಂ.ವಿ.ವೆಂಕಟೇಶ್‌ ಅವರ ಗಮನಕ್ಕೆ ತಂದು ಅರ್ಜಿ ಕೊಟ್ಟಿದ್ದರೂ ಸಹ ಅಕ್ಕಪಕ್ಕದ ನಿವಾಸಿಗಳ ತೊಂದರೆಯಿಂದಾಗಿ ಈ ರಸ್ತೆ ನಿರ್ಮಾಣ ಆಸಾಧ್ಯವಾಗಿತ್ತು.

8 ವರ್ಷಗಳಿಂದಲೂ ಸೂಕ್ತ ದಾಖಲೆಗಳಿದ್ದರೂ ರಸ್ತೆ ನಿರ್ಮಾಣ ಆಸಾಧ್ಯವಾದ ಈ ಪ್ರಕರಣವನ್ನು ಗ್ರಾಪಂ ಅಧ್ಯಕ್ಷೆ ಮಂಜುಳಾ ಆನಂದ್‌, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಗಮನಕ್ಕೆ ತಂದು ಸಮಸ್ಯೆಯನ್ನು ವಿವರಿಸಿದ್ದರು. ನಂತರ ಸ್ವತಃ ಜಿಲ್ಲಾಧಿಕಾರಿ ಕಳೆದ 15 ದಿನಗಳ ಹಿಂದೆ ಗ್ರಾಮಕ್ಕೆ ಭೇಟಿ ನೀಡಿದ್ದರು. ಸಾರ್ವಜನಿಕ ರಸ್ತೆ ನಿರ್ಮಿಸಿ ಕೊಡುವುದು ತಾಲೂಕು, ಜಿಲ್ಲಾಡಳಿತದ ಜವಾಬ್ದಾರಿ. ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದರು.

'BJPಯವ್ರಿಗೆ ಅಧಿಕಾರದ ಅಮಲು ತಲೆಗೇರಿದೆ'..!

ಮಂಗಳವಾರ ಈ ಕುರಿತಂತೆ ಉಪವಿಭಾಗಾಧಿಕಾರಿ ಆರ್‌.ವಿ.ಶೈಲಜಾ ಅವರ ಗಮನಕ್ಕೆ ತಂದು ಒಂದೇ ದಿನದಲ್ಲಿ ರಸ್ತೆ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಉಪವಿಭಾಗಾಧಿಕಾರಿ ಶೈಲಜಾ, ತಹಸೀಲ್ದಾರ್‌ ರೂಪಾ, ತಾಪಂ ಇಒ ನಾಗವೇಣಿ, ಡಿವೈಎಸ್‌ಪಿ ಅರುಣ್‌ಗೌಡ, ವೃತ್ತ ನಿರೀಕ್ಷಕ ಕೃಷ್ಣಪ್ಪ ಹಾಗೂ ಪಿಎಸ್‌ಐ ಗಿರೀಶ್‌ ನೇತೃತ್ವದಲ್ಲಿ ಪೊಲೀಸರನ್ನು ಬಳಕೆ ಮಾಡಿಕೊಂಡು ಬುಧವಾರ ಒಂದೇ ದಿನದಲ್ಲಿ ರಸ್ತೆ ಹದ್ದುಬಸ್ತು ಗುರುತು ಮಾಡಿ ನಂತರ ಸಿಮೆಂಟ್‌ ರಸ್ತೆಯನ್ನು ನಿರ್ಮಾಣ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳು ಮನಸ್ಸು ಮಾಡಿದರೆ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಮನಸು ಮಾಡಿದರೆ ಕಾನೂನು ವ್ಯಾಪ್ತಿಯಲ್ಲಿ ಯಾವುದೇ ಕೆಲಸಗಳನ್ನು ಮಾಡಲು ಸಾಧ್ಯ ಎಂಬುದನ್ನು ಈ ಕಾಮಗಾರಿ ಸಾಬೀತು ಪಡಿಸಿದೆ. ಉಪವಿಭಾಗಾಧಿಕಾರಿ ಶೈಲಜಾ ಅವರ ತ್ವರಿತ ಕಾರ್ಯ ಹಾಗೂ ಸಾಮಾಜಿಕ ಕಳಕಳಿ ಬಗ್ಗೆ ಗ್ರಾಮಸ್ಥರು ಮುಕ್ತ ಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರಸ್ತೆ ನಿರ್ಮಾಣದ ವೇಳೆ ಗ್ರಾಪಂ ಅಧ್ಯಕ್ಷೆ ಮಂಜುಳಾ ಆನಂದ್‌, ಶಕುಂತಲಾ, ಕಾರ್ಯದರ್ಶಿ ಸಿದ್ದರಾಜು ಇದ್ದರು.

Follow Us:
Download App:
  • android
  • ios