ಬೆಂಗಳೂರು [ಅ.09]:  ಕಾನೂನು ಬಾಹಿರ ಚಟುವಟಿಕೆ ಹಿನ್ನೆಲೆಯಲ್ಲಿ ಎರಡು ಕ್ಲಬ್‌ಗಳ ಮೇಲೆ ಪ್ರತ್ಯೇಕವಾಗಿ ದಾಳಿ ನಡೆಸಿ ಕ್ಲಬ್‌ಗಳ ಮಾಲಿಕರು ಸೇರಿದಂತೆ 40 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬನಶಂಕರಿ 3ನೇ ಹಂತದ ಲಕ್ಷ್ಮೇ ವೆಂಕಟೇಶ್ವರ ರಿಕ್ರಿಯೇಷನ್‌ ಕ್ಲಬ್‌ ಹಾಗೂ ಜಾಲಹಳ್ಳಿ ಸಮೀಪದ ಗೋಕುಲ ರೈಲ್ವೆ ಗೇಟ್‌ ಹತ್ತಿರದ ಶ್ರೀ ವಿನಾಯಕ ರಿಕ್ರಿಯೇಷನ್ಸ್‌ ಅಸೋಸಿಯೇಷನ್‌ ಕ್ಲಬ್‌ ಮೇಲೆ ಸಿಸಿಬಿ ದಾಳಿ ನಡೆಸಿದ್ದು, ಈ ವೇಳೆ ಜೂಜಾಟದಲ್ಲಿ ತೊಡಗಿದ್ದ 40 ಬಂಧಿತರಾಗಿದ್ದಾರೆ. ಅಲ್ಲದೆ ಆರೋಪಿಗಳಿಂದ 80 ಸಾವಿರ ರು.  ಜಪ್ತಿಯಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಎರಡು ಕ್ಲಬ್‌ಗಳಲ್ಲಿ ಅಕ್ರಮವಾಗಿ ಇಸ್ಪೀಟ್‌ ದಂಧೆ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.