ಬೆಂಗಳೂರು (ಜೂ.01):  ಬೆಂಗಳೂರಿನ ಖ್ಯಾತ ಉದ್ಯಮಿಗೆ ಪ್ರಿಯತಮೆಯೇ ದೋಖಾ ಮಾಡಿದ ಘಟನೆ  ನಡೆದಿದೆ. 

ಮದುವೆಯಾಗುವುದಾಗಿ ನಂಬಿಸಿ 36 ಲಕ್ಷ ರು. ವಂಚನೆ ಮಾಡಿದ್ದಾಗಿ ಉದ್ಯಮಿ  ಅನಂತ್ ಮಲ್ಯ ಪ್ರಿಯತಮೆ ವಿರುದ್ದ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಕ್ವಾನ್'ಟೇಕ್ ಕನ್ಸಲ್ಟೆನ್ಸಿ ಕಂಪನಿ ಸಿಇಓ ಆಗಿರುವ ಅನಂತ್ ಮಲ್ಯ  ನೀಡಿದ ದೂರಿನ ಅನ್ವಯ ಇದೀಗ ಎಫ್‌ಐಆರ್‌ ದಾಖಲಿಸಿದ್ದಾರೆ. 

25 ಉಂಗುರ ಕದ್ದು ಹೊಟ್ಟೆಯಲ್ಲಿ ಇಟ್ಕೊಂಡಿದ್ದ! ...

ಅನಂತ್ ಮಲ್ಯರಿಗೆ 2019 ರ ಜೂನ್ ನಲ್ಲಿ ಪರಿಚಿತಳಾಗಿದ್ದ ಬೆಂಗಳೂರಿನ ಯುವತಿ ನಂತರ  ಪ್ರೇಮ ನಿವೇದನೆ ಮಾಡಿದ್ದಳು.  ಯುವತಿಯ ಪ್ರಪೋಸಲ್ ಉದ್ಯಮಿ ಅನಂತ್ ಕೂಡ ಒಪ್ಪಿಗೆ ಸೂಚಿಸಿದ್ದರು. ಆದರೆ ಆಕೆ ಹಂತ ಹಂತವಾಗಿ ಉದ್ಯಮಿಯಿಂದ ಲಕ್ಷಾಂತರ ರು ಹಣವನ್ನು ದೋಚಿದ್ದಾಳೆ.  

ಚಿಟ್ ಫಂಡ್ ಹಾಗೂ ಸೈಟ್ ತೆಗೆದುಕೊಳ್ಳಬೇಕು ಎಂದು   ಉದ್ಯಮಿಯಿಂದ 36.22 ಲಕ್ಷ ಹಣ ಪಡೆದಿದ್ದು, ಅದರಲ್ಲಿ 6.90 ಲಕ್ಷ ಹಣ ವಾಪಸ್ ನೀಡಿದ್ದಳು.  ನಂತರ ಪಡೆದ ಹಣವನ್ನು ವಾಪಸ್ ಕೊಡದೇ, ಮದುವೆಯೂ ಆಗದೇ ಈಗ ಎಸ್ಕೇಪ್ ಆಗಿದ್ದಾಳೆ. 

ಸದ್ಯ ಯುವತಿಯಿಂದ ಮೋಸ ಹೋದ ಉದ್ಯಮಿ ಅನಂತ್ ಈಗ ಪೊಲೀಸರ ಮೊರೆ ಹೋಗಿದ್ದಾರೆ. 

ಐಪಿಸಿ 406 ಹಾಗೂ 420 ಅಡಿಯಲ್ಲಿ ವಂಚಿಸಿದ ಯುವತಿ ವಿರುದ್ಧ ಹೆಚ್ ಎ ಎಲ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ.