ವರದಿ: ಕಾಗತಿ ನಾಗರಾಜಪ್ಪ

 ಚಿಕ್ಕಬಳ್ಳಾಪುರ (ಅ.20):  ಜಿಲ್ಲಾದ್ಯಂತ ಈ ಬಾರಿ ವರುಣನ ಕೃಪೆ ನಿರೀಕ್ಷೆಗೂ ಮೀರಿ ತೋರಿದ್ದರಿಂದ  ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಸೀತಾಫಲ ಬಂಪರ್ ಬೆಳೆ ಬಂದಿದ್ದು ಈಗ ಎಲ್ಲಿ ನೋಡಿದರೂ ಸೀತಾಫಲದ ಘಮಲು ಕಂಡು ಬರುತ್ತಿದೆ.

  ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಶುರುವಾಗುವ  ಜೂನ್, ಜುಲೈ ತಿಂಗಳಲ್ಲಿ ಫಸಲು ಬಿಡಲು ಆರಂಭಿಸುವ ಸೀತಾಫಲ ಗಿಡಗಳು  ಆಗಸ್‌ಟ್ ಕೊನೆ ಅಥವ ಸೆಪ್ಪೆಂಬರ್ ತಿಂಗಳ ಅಂತ್ಯಕ್ಕೆ ಕಾಯಿಗಳು ಮಾಗಿ ಗಿಡಗಳಲ್ಲಿಯೆ ಘಮಘಮಿಸುತ್ತವೆ. ರೈತರ ಹೊಲ ಗದ್ದೆ, ಬೆಟ್ಟು, ಗುಡ್ಡಗಳ ಪೊದೆಗಳಲ್ಲಿ ಈ ಸೀತಾಫಲ ಗಿಡಗಳು ಹೆಚ್ಚಾಗಿ ಬೆಳೆದು ಹಣ್ಣು ಕೊಡುತ್ತೇವೆ.

ನಂದಿ ಬೆಟ್ಟಕ್ಕೆ ವಿದೇಶಿ ಪ್ರವಾಸಿಗರ ಭೇಟಿ ಅತೀ ಕಡಿಮೆ ...
 ಸಾಮಾನ್ಯವಾಗಿ ಜಿಲ್ಲೆಯಲ್ಲಿ ರೈತರು ಪ್ರತ್ಯೇಕವಾಗಿ ಬೆಳೆಯದೇ ಇದ್ದರೂ ಕಾಡು ಪ್ರದೇಶದಲ್ಲಿ ಸೀತಾಫಲ ಗಿಡಗಳಿಗೆ ಲೆಕ್ಕವಿಲ್ಲ. ಸದ್ಯ ಜಿಲ್ಲೆಯಲ್ಲಿ ಸೀತಾಫಲದ  ಹಣ್ಣುಗಳ ಘಮಲು ಸಾರ್ವಜನಿಕರನ್ನು ಆಕರ್ಷಿಸುತ್ತಿವೆ. ಸಹಜವಾಗಿ ಗುಡ್ಡಗಾಡು ಪ್ರದೇಶದಲ್ಲಿ ಬೆಳೆಯುವ ಈ ಹಣ್ಣು ದನ, ಕುರಿ, ಮೇಕೆ ಮೇಯಿಸುವ ಜನರಿಗೆ ಹೆಚ್ಚು ಪ್ರಿಯವಾದ ಹಣ್ಣು. ಜೊತೆಗೆ ಹೊಲ, ಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ರೈತಾಪಿ ಕೃಷಿ ಕೂಲಿಕಾರರಿಗೆ ಈ ಹಣ್ಣು ಮಧ್ಯಾಹ್ನದ ವೇಳೆ ಹಸಿವು ನೀಗಿಸುತ್ತವೆ. ಅಷ್ಟರ ಮಟ್ಟಿಗೆ ಸೀತಾಫಲ ಗ್ರಾಮೀಣ ಜನರಿಗೆ ಪ್ರಿಯವಾದ ಪರಿಚಿತವಾದ ಹಣ್ಣಾಗಿದೆ.

ಮಳೆಗೆ ಬಂಪರ್ ಬೆಳೆ:
 ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಬರದ ಕಾರ್ಮೋಡ ಇದ್ದ ಕಾರಣ ಸ್ವಾಭಾವಿಕವಾಗಿ ಸೀತಾಫಲ, ಗೇರು ಮತ್ತಿತರ ಗ್ರಾಮೀಣ ಸೊಗಡಿನ  ಹಣ್ಣುಗಳಿಗೆ ಬರ ಇತ್ತು. ಆದರೆ ಈ ವರ್ಷ ಮಳೆರಾಯ ಮುನಿಸಿಕೊಳ್ಳದೇ ಜಿಲ್ಲೆಯಲ್ಲಿ ವಾಡಿಕೆಗೂ ಮೀರಿ ಹೆಚ್ಚಿನ ಮಳೆ ಆಗಿದ್ದರಿಂದ ಕೃಷಿ ಚಟುವಟಿಕೆಗಳು ಉತ್ತಮವಾಗಿ ಬಂದಂತೆ ಸೀತಾಫಲ ಕೂಡ ಉತ್ತಮ ಬೆಳೆ ಬಂದಿದ್ದು ಗ್ರಾಮೀಣ ಪ್ರದೇಶದಲ್ಲಿ ಈ ಸೀತಾಫಲ ಈಗ ಸದ್ದು ಮಾಡುತ್ತಿದೆ. ನಿರ್ಧಿಷ್ಟವಾಗಿ ರೈತರು ಈ ಹಣ್ಣನ್ನು ಬೆಳೆಯುವುದು ಕಡಿಮೆ. ಆದರೆ ನೈಸರ್ಗಿಕ ಮಡಿಲ್ಲಲ್ಲಿ ಸಿಗುವ ಈ ಹಣ್ಣುಗಳಿಗೆ ಹೆಚ್ಚು ಬೇಡಿಕೆ ಇದೆ. ದನ, ಕುರಿ, ಮೇಕೆ ಮೇಯಿಸುವರು, ರೈತರು ತಮ್ಮ ಹೊಲ ಗದ್ದೆಗಳ ಕಡೆಗೆ ತೆರಳಿದಾಗ ಸೀತಾಫಲ ಹಣ್ಣಗಳಿಗೆ ಹುಡುಕಾಟ ನಡೆಸುತ್ತಾರೆ. ವಿಶೇಷ ಅಂದರೆ ಸೀತಾಫಲ ಹಣ್ಣುಗಳನ್ನು ಗಿಡಗಳಲ್ಲಿ ಹುಡುಕಾಟ ನಡೆಸುವುದು ಸವಾಲಿನ ಕೆಲಸ. ಸೀತಾಫಲ ಗಿಡಗಳು ಹಸಿರು ಆಗಿರುವುದರಿಂದ ಕಾಯಿಗಳು ಅದೇ ರೀತಿ ಹಸಿರು ಮಯವಾಗಿರುವುದರಿಂದ ಸೀತಾಫಲ ಹಣ್ಣುಗಳು ಅಷ್ಟು ಬೇಗ ಕಣ್ಣಿಗೆ ಕಾಣುವುದಿಲ್ಲ. ಗೊಚ್ಚಲು ಗೊಚ್ಚಲಾಗಿ ಕಾಯಿ ಬಿಡುವ ಸೀತಾಫಲ ಸವಿಯಲು ರುಚಿಕರವಾಗಿರುತ್ತದೆ. ಹೆಚ್ಚು ಸಿಹಿನಾಂಶ ಇರುವ ಈ ಹಣ್ಣು ಗ್ರಾಮೀಣರ ಪಾಲಿಗೆ ಸೇಬು,

ವೃದ್ದರ, ಮಹಿಳೆಯರ ಬದುಕಿಗೆ ಸೀತಾಫಲ ಆಸರೆ.

ಸೀತಾಫಲ ಹಣ್ಣುಗಳು ಸುಗ್ಗಿ ಜಿಲ್ಲೆಯ ವಯೋ ವೃದ್ದ ಮಹಿಳೆಯರ, ವಿಕಲಚೇತನರ ಹಾಗೂ ಗ್ರಾಮೀಣ ಮಹಿಳೆಯರ ಬದುಕಿಗೆ ಆಸರೆಯಾಗಿದೆ. ಸೀತಾಫಲ ಹಣ್ಣುಗಳನ್ನು ಕಿತ್ತು ಮಂಕರಿಗಳಲ್ಲಿ ತುಂಬಿಕೊಂಡು ಬಂದು ನಗರ ಪ್ರದೇಶದ ಬಸ್ ನಿಲ್ದಾಣ, ಸರ್ಕಾರಿ ಕಚೇರಿ, ಸಾರ್ವಜನಿಕರ ದಟ್ಟಣ ಇರುವ ಕಡೆಗಳಲ್ಲಿ ಇವುಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಒಂದು ಕಾಯಿ 5 ರಿಂದ 10 ರೂ,ಗೆ ಮಾರಾಟ ಮಾಡುತ್ತಾರೆ.