ಬಿಎಸ್‌ವೈ ಪುತ್ರನ ಖಾತೆಗೂ ಹ್ಯಾಕರ್ಸ್ ಖನ್ನ: ರಾಘವೇಂದ್ರ ಖಾತೆಯಿಂದ 16 ಲಕ್ಷ ಗುಳುಂ!

ಸೈಬರ್ ಅಪರಾಧಿಗಳ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದ್ದು, ಬಡವರಿಂದ ಹಿಡಿದು ಶ್ರೀಮಂತ ಕುಳಗಳನ್ನು ತಮ್ಮ ಗುರಿಯಾಗಿಸಿಕೊಂಡಿದ್ದಾರೆ. ಈಗ ಬಿಜೆಪಿ ನಾಯಕ ಬಿ.ವೈ. ರಾಘವೇಂದ್ರ ಖಾತೆಗೂ ಹ್ಯಾಕರ್ಸ್ ಖನ್ನ ಹಾಕಿದ್ದು, ಸುಮಾರು 16 ಲಕ್ಷ ನಗದನ್ನು ಕುಳಿತಲ್ಲಿಂದಲೇ ಎಗರಿಸಿದ್ದಾರೆ.

BSYs son BJP MP B Y Ragavendra  account also hacked by hackers: hackers tranfered 16 lakhs from account akb

ವರದಿ ರಾಜೇಶ್ ಕಾಮತ್ ಏಷ್ಯಾ ನೆಟ್ ಸುವರ್ಣ ನ್ಯೂಸ್ ಶಿವಮೊಗ್ಗ

ಶಿವಮೊಗ್ಗ: ಸೈಬರ್ ಅಪರಾಧಿಗಳ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದ್ದು, ಬಡವರಿಂದ ಹಿಡಿದು ಶ್ರೀಮಂತ ಕುಳಗಳನ್ನು ತಮ್ಮ ಗುರಿಯಾಗಿಸಿಕೊಂಡಿದ್ದಾರೆ. ಈಗ ಬಿಜೆಪಿ ನಾಯಕ ಬಿ.ವೈ. ರಾಘವೇಂದ್ರ ಖಾತೆಗೂ ಹ್ಯಾಕರ್ಸ್ ಖನ್ನ ಹಾಕಿದ್ದು, ಸುಮಾರು 16 ಲಕ್ಷ ನಗದನ್ನು ಕುಳಿತಲ್ಲಿಂದಲೇ ಎಗರಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಅವರೇ ಈ ವಿಚಾರವನ್ನು ಸ್ವತಃ ಬಹಿರಂಗಪಡಿಸಿದ್ದಾರೆ. ಆದರೆ ಈ ಹ್ಯಾಕರ್‌ನನ್ನು ಶಿವಮೊಗ್ಗ ಪೊಲೀಸರು ಬಲೆಗೆ ಕೆಡವಿದ್ದು, ಹಣವನ್ನು ವಾಪಸ್ ರಾಘವೇಂದ್ರ ಖಾತೆಗೆ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಶಿಕಾರಿಪುರದ (Shikaripur) ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಮಾರ್ಗದರ್ಶಿ ಲೀಡ್ ಬ್ಯಾಂಕ್ (Margadarshi Lead Bank) ವತಿಯಿಂದ ನಡೆದ ಕಾರ್ಯಕ್ರಮವೊಂದರಲ್ಲಿ ತಮಗಾದ ಈ ಕಹಿ ಅನುಭವವನ್ನು ಸ್ವತಃ ಸಂಸದ ರಾಘವೇಂದ್ರ (MP Ragavendra) ಅವರು  ಹೇಳಿದ್ದಾರೆ. ಬ್ಯಾಂಕ್ ಡಿಜಟಲ್ ಪಾವತಿ ಮಾಹಿತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ತಮ್ಮ ಬ್ಯಾಂಕ್‌ ಖಾತೆಯಿಂದ ಸೈಬರ್ ಖದೀಮರು (Cyber crime) ಹಣ ಲಪಟಾಯಿಸಿದ ಘಟನೆಯನ್ನು ವಿವರಿಸಿದರು.

ಹಣಕ್ಕಿಂತ ಹೃದಯ ಶ್ರೀಮಂತಿಕೆ ಗಳಿಸುವುದು ಶ್ರೇಷ್ಠ: ಬಿ.ವೈ. ರಾಘವೇಂದ್ರ

ಬ್ಯಾಂಕಿಂಗ್‌ ವ್ಯವಸ್ಥೆ ಡಿಜಿಟಲಿಕರಣಗೊಂಡಿದೆ. ಈ ವೇಳೆ ಗ್ರಾಹಕರು (Customer) ಅತ್ಯಂತ ಎಚ್ಚರಿಕೆ ವಹಿಸಬೇಕಿದೆ. ಒಟಿಪಿ ನಂಬರ್ ಕುರಿತು ಮುತುವರ್ಜಿಯಿಂದ ಇರಬೇಕು. ವಾಟ್ಸಪ್ ಮೂಲಕ ಅಥವಾ ಮೆಸೇಜ್ ಮೂಲಕ ಒಟಿಪಿ ಕೇಳುತ್ತಾರೆ. ಬ್ಯಾಂಕುಗಳು ಹಾಗೆ ಒಟಿಪಿ (OTP) ನಂಬರ್ ಕೇಳುವುದಿಲ್ಲ. ಅನುಮಾನ ಬಂದರೆ ನೇರವಾಗಿ ಬ್ಯಾಂಕನ್ನು ಸಂಪರ್ಕಿಸಬೇಕು. ಶಿವಮೊಗ್ಗದ ಇಂಜಿನಿಯರಿಂಗ್‌ ಕಾಲೇಜಿಗೆ ಸಂಬಂಧಿಸಿದ ನನ್ನ ಬ್ಯಾಂಕ್ ಖಾತೆಯಿಂದ 16 ಲಕ್ಷ ರೂ. ಹಣ ದಿಢೀರ್ ವರ್ಗಾವಣೆಯಾಗಿತ್ತು. ಆದರೆ ಆ ಖಾತೆಯಿಂದ ನಾನು ಯಾವುದೇ ಹಣ ವರ್ಗಾವಣೆ ಮಾಡಿರಲಿಲ್ಲ. ಹಾಗಾಗಿ ಶಿವಮೊಗ್ಗ ಪೊಲೀಸರಿಗೆ ದೂರು ನೀಡಿದ್ದೆ. ಪೊಲೀಸರು ಮುಂಬೈನಲ್ಲಿ ಹ್ಯಾಕರ್‌ ನನ್ನು ಪತ್ತೆ ಮಾಡಿ ಬಂಧಿಸಿದರು.

Bengaluru: ಪ್ಯಾನ್‌ಕಾರ್ಡ್‌ ಅಪ್‌ಡೇಟ್‌ ಹೆಸರಲ್ಲಿ 4 ಲಕ್ಷ ಎಗರಿಸಿದ ವಂಚಕ

ನನ್ನ ಹಾಗೆ ಹಲವರಿಗೆ ಆ ಹ್ಯಾಕರ್ ವಂಚಿಸಿದ್ದ. ಕೊನೆಗೆ ನನ್ನ ಖಾತೆಗೆ ಹಣ ವಾಪಸ್ ಬಂತು ಎಂದು ಬಹಿರಂಗಪಡಿಸಿದರು. ಅಲ್ಲದೆ ಆಧುನಿಕ ತಂತ್ರಜ್ಞಾನ (Modern Technology) ಆವಿಷ್ಕಾರಗಳು ಹೆಚ್ಚಾದ ಹಾಗೆ ಈ ರೀತಿಯ ಕಳ್ಳ ಮಾರ್ಗವನ್ನು ಖದೀಮರು ಹುಡುಕುತ್ತಾರೆ. ಚಾಪೆ ಕೆಳಗೆ ನುಸುಳುವವರನ್ನು ಹಿಡಿದರೆ ರಂಗೋಲಿ ಕೆಲವು ನುಸುಳುವವರು ಇರುತ್ತಾರೆ ಎಂದು ಸಂಸದರು ಮಾರ್ಮಿಕವಾಗಿ ನುಡಿದರು.

Latest Videos
Follow Us:
Download App:
  • android
  • ios