ಹೊಳೆನರಸೀಪುರ (ಅ.14):  ತಾಲೂಕು ಬಿಜೆಪಿ ಯುವ ಮೋರ್ಚಾ ವತಿಯಿಂದ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಪಟ್ಟಣದಲ್ಲಿ  ಪ್ರತಿಭಟನೆ ನಡೆಸಲಾಯಿತು.

ತಾಲೂಕಿನ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕೀರ್ತನ್‌ ಗೌಡ ಮಾತನಾಡಿ, ನಮ್ಮ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಭ್ರಷ್ಟಾಚಾರ, ರಾಜಕೀಯ ಹತ್ಯೆ ಹಾಗೂ ಭಯೋತ್ಪಾದಕ ಚಟುವಟಿಕೆ ವಿರುದ್ಧ ನಭೋನ್ನ ರಾರ‍ಯಲಿಯನ್ನು ಅ. 8ರಂದು ಹಮ್ಮಿಕೊಳ್ಳಲಾಗಿತ್ತು. 

ತೇಜಸ್ವಿ ಸೂರ್ಯ ಮೇಲೆ ಹಲ್ಲೆ : ಬಿಜೆಪಿಗರ ಪ್ರತಿಭಟನೆ ...

ಶಾಂತಿಯುತವಾಗಿ ನಡೆಯುತ್ತಿದ್ದ ಸಂದರ್ಭ ಗೂಂಡಾಗಳು ನಾಡ ಬಾಂಬ್‌ ಎಸೆದು ಭಯದ ವಾತಾವರಣ ಸೃಷ್ಟಿಸಿ ತೇಜಸ್ವಿ ಸೂರ್ಯ ಅವರ ಹತ್ಯೆಗೆ ಯತ್ನಿಸಿದ್ದರು. ಇದಕ್ಕೆ ಪಶ್ಚಿಮ ಬಂಗಾಳದ ದೀದಿ ಸರ್ಕಾರ ಕಾರಣವಾಗಿದೆ. ಇಂತಹ ಭಯೋತ್ಪಾದಕ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಿರುವ ಸರ್ಕಾರವನ್ನು ಕೂಡಲೆ ಮಾನ್ಯ ರಾಷ್ಟ್ರಪತಿಗಳು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು. ತಾಲೂಕು ಎಸ್ಸಿ, ಎಸ್ಟಿಬಿಜೆಪಿ ಅಧ್ಯಕ್ಷ ನಾರಾಯಣ್‌, ತೀರ್ಥೇಶ್‌, ಯುವ ಮೋರ್ಚಾ ಪದಾ​ಕಾರಿಗಳು ಭಾಗವಹಿಸಿದ್ದರು.