ಗುಬ್ಬಿಯಲ್ಲಿ ಬಿಜೆಪಿ ಸೋಲಿಗೆ ಬಿಜೆಪಿ ಮುಖಂಡರೇ ಕಾರಣ, ಕಾರ್ಯಕರ್ತರ ಆಕ್ರೋಶ
ಗುಬ್ಬಿಯಲ್ಲಿ ಬಿಜೆಪಿ ಸೋಲಿಸಲು ಬಿಜೆಪಿ ಕೆಲವು ಮುಖಂಡರೇ ಕಾರಣ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಸಾವಿರಾರು ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ವರದಿ : ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್
ತುಮಕೂರು (ಮೇ.24): ಜಿಲ್ಲೆ ಗುಬ್ಬಿಯಲ್ಲಿ ಬಿಜೆಪಿ ಸೋಲಿಸಲು ಬಿಜೆಪಿ ಕೆಲವು ಮುಖಂಡರೇ ಕಾರಣ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಸಾವಿರಾರು ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದರು. ಗುಬ್ಬಿ ಪಟ್ಟಣದ ಹೊರವಲಯ ಹೇರೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಈ ಆಕ್ರೋಶ ವ್ಯಕ್ತವಾಯ್ತು. ಬಿಜೆಪಿ ಟಿಕೆಟ್ ಆಕಾಂಕ್ಷಿತರಾಗಿದ್ದ ಚಂದ್ರಶೇಖರ್ ಬಾಬು ಹಾಗೂ ಪ್ರಕಾಶ್ ಅವರು ಬಿಜೆಪಿ ಜೊತೆಗಿದ್ದುಕೊಂಡು ಕೊನೆ ಕ್ಷಣದಲ್ಲಿ ಕಾಂಗ್ರೆಸ್ ನೊಂದಿಗೆ ಕೈ ಜೋಡಿಸಿದ್ದಾರೆ. ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ರು.
ಇದೇ ವೇಳೆ ರಾಜ್ಯ ಕಾರ್ಯದರ್ಶಿ ನಂದೀಶ್ ಮಾತನಾಡಿ, ನಿಮ್ಮ ಆಕ್ರೋಶದ ಕಟ್ಟೆ ಹೊಡೆದಿದೆ ಎಂದು ತಿಳಿದಿದೆ ಆದರೆ ನಿಮ್ಮ ಆಕ್ರೋಶ ಹೊಟ್ಟೆಯಲ್ಲಿರಬೇಕು ಹೊರತು ಬಾಯಲ್ಲಿ ಇರಬಾರದು ಅದನ್ನು ಮುಂದಿನ ಚುನಾವಣೆಯಲ್ಲಿ ಉತ್ತರಿಸಬೇಕು. ಇಂದಿನ ಸೋಲು ಮತ್ತು ಆಕ್ರೋಶ ಒಳಗಿಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಆ ಆಕ್ರೋಶ ಮತಗಳಾಗಿ ಪರಿವರ್ತನೆ ಮಾಡಿಕೊಳ್ಳಿ ಸೋಲಿಗೆ ನಾನಾ ಕಾರಣಗಳು ಸಿಗುತ್ತವೆ ಅವೆಲ್ಲವನ್ನು ಹುಡುಕಿ ಸರಿ ಪಡಿಸಬೇಕು ಎಂದು ತಿಳಿಸಿದರು.
ಬಿಜೆಪಿ ಪಕ್ಷದ ಪರಾಜೀತ ಅಭ್ಯರ್ಥಿ ಎಸ್ ಡಿ ದಿಲೀಪ್ ಕುಮಾರ್ ಮಾತನಾಡಿ ಎಲ್ಲಾ ಸಮುದಾಯದ ಕಾರ್ಯಕರ್ತರು ಎಲ್ಲಾ ಸಮಾಜ ಬಾಂಧವರು ನನಗೆ ಮತವನ್ನು ನೀಡಿದ್ದಾರೆ. ಆದರೆ ನಮ್ಮೊಳಗಿರುವ ಹಿತಶತ್ರುಗಳೇ ನನಗೆ ಕಾಟ ನೀಡಿದ್ದು ಅವರೇ ನನ್ನನ್ನು ತೋರಿಸಿದ್ದಾರೆ ಅದು ಎಲ್ಲರಿಗೂ ತಿಳಿದಿರುವ ವಿಚಾರವೇ ಮುಂದಿನ ದಿನದಲ್ಲಿ ಅದೆಲ್ಲವನ್ನು ಹೇಗೆ ಸರಿಪಡಿಸಬೇಕು ಎಂಬುದು ತಿಳಿದಿದೆ.
ಉರಿಗೌಡ-ನಂಜೇಗೌಡ ಕೇಸಲ್ಲಿ ನಮ್ಮ ವಿರುದ್ಧ ನಿಂತ್ರಿ, ಇನ್ನು ಅದೆಲ್ಲ ನಡೆಯಲ್ಲ: ಪೊಲೀಸರಿ
ನನ್ನನ್ನು ಸೋಲಿಸಿದವರನ್ನ ನನ್ನ ಸ್ವಪ್ನದಲ್ಲಿಯೂ ಬಿಡುವುದಿಲ್ಲ ಮುಂದಿನ ದಿನದಲ್ಲಿ ಅವರಿಗೆ ಯಾವ ಉತ್ತರವನ್ನು ನೀಡಬೇಕು ಆ ಉತ್ತರವನ್ನು ನೀಡುತ್ತೇನೆ ನಮ್ಮ ಯಾವುದೇ ಕಾರ್ಯಕರ್ತರು ಎದೆ ಗೊಂದುವುದು ಬೇಡ 52 ಸಾವಿರ ಮತಗಳನ್ನು ನೀಡಿರುವ ತಮ್ಮಗಳ ಪಾದಗಳಿಗೆ ನಮಸ್ಕರಿಸಿ ನಾಳೆಯಿಂದಲೇ ಮತ್ತೆ ಬೂತ್ ಮಟ್ಟದಲ್ಲಿ ಪಕ್ಷವನ್ನು ಕಟ್ಟಿ ಹೋರಾಟ ಮಾಡುತ್ತೇನೆ ಸೋತ ಭಾಗದಲ್ಲಿ ಗೆಲ್ಲುತ್ತೇನೆ. ನೀವೆಲ್ಲರೂ ನನ್ನ ಜೊತೆಯಲ್ಲಿರಬೇಕು.
ಪೊಲೀಸ್ ಇಲಾಖೆಯನ್ನೇ ಕೇಸರಿಕರಣ ಮಾಡಲು ಹೊರಟಿದ್ದೀರಾ... ಅಧಿಕಾರಿಗಳ
ನಿಮ್ಮ ಮನೆಯ ಮಗನಾಗಿ ಕೆಲಸ ಮಾಡುತ್ತೇನೆ ನನ್ನನ್ನು ಒಳಸಂಚಿನಿಂದ ಸೋಲಿಸಿದ ಮುಖಂಡರುಗಳಿಗೆ ಪಕ್ಷದಿಂದ ಉಚ್ಚಾಟನೆ ಮಾಡಿದಾಗ ಮಾತ್ರ ಪಕ್ಷ ಸರಿಯಾಗುತ್ತದೆ. ಈಗಾಗಲೇ ಇದರ ಬಗ್ಗೆ ರಾಜ್ಯ ಅಧ್ಯಕ್ಷರಿಗೂ ಕೂಡ ಮಾಹಿತಿ ನೀಡಿದ್ದು ಇಂದು ತಾವೆಲ್ಲರೂ ಹೊರಹಾಕಿರುವ ಆಕ್ರೋಶದ ಮೂಲಕ ಚುನಾವಣೆಯಲ್ಲಿ ಒಳ ಹೊಡೆತಗಳು ಏನೆಲ್ಲ ಕೆಲಸ ಮಾಡುವೆ ಎಂಬುದು ಇಲ್ಲಿರುವ ಎಲ್ಲರಿಗೂ ತಿಳಿದಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಪಂಚಾಕ್ಷರಿ,ಮುಖಂಡರಾದ ನಂಜೇಗೌಡ ಬೈರಪ್ಪ ಸಾಗರನಹಳ್ಳಿ ವಿಜಯಕುಮಾರ್, ಅಣ್ಣಪ್ಪ ಸ್ವಾಮಿ ಸೇರಿದಂತೆ ಇನ್ನಿತರರು ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.