20 ವರ್ಷಗಳಿಂದ ರಸ್ತೆ ಕಾಣದ ಬಡಾವಣೆಗೆ 2 ಗಂಟೆಯಲ್ಲಿ ರಸ್ತೆ!

ಇದು ನಿಮ್ಮ ಬಿಗ್ 3 ಇಂಪ್ಯಾಕ್ಟ್! ಚಿಕ್ಕಮಗಳೂರಿನ ಇಂದಿರಾ ಗಾಂಧಿ ಬಡಾವಣೆ! 20 ವರ್ಷಗಳಿಂದ ರಸ್ತೆ ಕಾಣದ ಬಡಾವಣೆ! ಜನರೇ ಸ್ವತಃ ಜೆಲ್ಲಿ ಹಾಕಿ ರಸ್ತೆ ನಿರ್ಮಾಣ 

First Published Aug 10, 2018, 7:21 PM IST | Last Updated Sep 9, 2018, 8:36 PM IST

ಚಿಕ್ಕಮಗಳೂರು[ಆ.10]: 20 ವರ್ಷಗಳಿಂದ ರಸ್ತೆ ಯಾವುದು, ಗದ್ದೆ ಯಾವುದು ಅಂತಾ ಗೊತ್ತಿರದ ಈ ರಸ್ತೆಗೆ ಸಾರ್ವಜನಿಕರೇ ಜೆಲ್ಲಿ ಹಾಕಿ ರಸ್ತೆ ನಿರ್ಮಿಸಿದ್ದಾರೆ. ಇದು ಚಿಕ್ಕಮಗಳೂರಿನ ಇಂದಿರಾ ಗಾಂಧಿ ಬಡಾವಣೆಯ ಕತೆ.

ಕಳೆದ ೨೦ ವರ್ಷಗಳಿಂದ ಇಲ್ಲಿ ಸರಿಯಾದ ರಸ್ತೆಯೇ ಇರಲಿಲ್ಲ. ಆದರೆ ಸುವರ್ಣನ್ಯೂಸ್ ನ ಬಿಗ್3 ಯಲ್ಲಿ ಈ ಕುರಿತು ವರದಿ ಪ್ರಸಾರವಾದ ಮೇಲೆ ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದಾರೆ.

ಈ ಮಧ್ಯೆ ರಸ್ತೆ ನಿರ್ಮಿಸಲು ನಗರಸಭೆಯಿಂದ ಅನುಮತಿ ಬೇಕು ಅಂತೆಲ್ಲಾ ಹೇಳುತ್ತಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜನ, ಸ್ವತಃ ತಾವೇ ಮುಂದೆ ನಿಂತು ತಾತ್ಕಾಲಿಕ ರಸ್ತೆ ನಿರ್ಮಿಸಿದ್ದಾರೆ.

 

ಈ ಕುರಿತು ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ..