Asianet Suvarna News Asianet Suvarna News

ರಾಮನಗರ: 17 ವರ್ಷಗಳಿಂದ ನೆನೆಗುದಿಗೆ ಬಿದ್ದ ಬಿಡದಿ ಟೌನ್ ಶಿಪ್, ರೈತರ ಸ್ಥಿತಿ ಶೋಚನೀಯ

ಸರ್ಕಾರ ರಾಮನಗರ ತಾಲ್ಲೂಕಿನ ಬಿಡದಿ ಸಮೀಪ 9600 ಎಕರೆ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಟೌನ್‌ ಶಿಪ್ (ಉಪನಗರ) ನಿರ್ಮಾಣ ಯೋಜನೆ ಕಳೆದ 17 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಕೆಂಪುವಲಯ (ರೆಡ್ ಜೋನ್) ವೆಂಬ ಹಣೆಪಟ್ಟಿ ತೆರವುಗೊಳಿಸದ ಕಾರಣ ಅಕ್ಷರಸಹ ಅದು ರೈತರ ಕೊರಳಿಗೆ ಕುಣಿಕೆಯಾಗಿದೆ. 

Bidadi Township Not Yet Complete in Ramanagara grg
Author
First Published Sep 23, 2023, 10:15 PM IST

ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ

ರಾಮನಗರ(ಸೆ.23): ಆಳುವ ಸರ್ಕಾರಗಳ ದ್ವಂದ್ವ ನೀತಿಗಳು ಹಾಗೂ ನಿರ್ಲಕ್ಷ ಧೋರಣೆಯಿಂದ ಉದ್ದೇಶಿತ ಯೋಜನೆಯೊಂದು 17 ವರ್ಷಗಳಿಂದ ಮೂಲೆ ಗುಂಪಾಗಿದೆ. ಕೆಂಪುವಲಯದ ಆಡಕತ್ತರಿಗೆ ಸಿಲುಕಿರುವ ನೂರಾರು ರೈತರ ಸ್ಥಿತಿ ಶೋಚನೀಯವಾಗಿದೆ.

ಇನ್ನೂ ಸರ್ಕಾರ ರಾಮನಗರ ತಾಲ್ಲೂಕಿನ ಬಿಡದಿ ಸಮೀಪ 9600 ಎಕರೆ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಟೌನ್‌ ಶಿಪ್ (ಉಪನಗರ) ನಿರ್ಮಾಣ ಯೋಜನೆ ಕಳೆದ 17 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಕೆಂಪುವಲಯ (ರೆಡ್ ಜೋನ್) ವೆಂಬ ಹಣೆಪಟ್ಟಿ ತೆರವುಗೊಳಿಸದ ಕಾರಣ ಅಕ್ಷರಸಹ ಅದು ರೈತರ ಕೊರಳಿಗೆ ಕುಣಿಕೆಯಾಗಿದೆ. ಬೆಂಗಳೂರು ಮಹಾನಗರದ ಒತ್ತಡವನ್ನು ತಗ್ಗಿಸುವ ಸಲುವಾಗಿ 2006ರಲ್ಲಿ ಅಂದಿನ ಸಿಎಂ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌- ಬಿಜೆಪಿ ಸಮ್ಮಿಶ್ರ ಸರಕಾರವು ಬಿಡದಿ ಸಮೀಪ ಉಪನಗರವೊಂದನ್ನು ನಿರ್ಮಿಸಲು ಸುಮಾರು 9600 ಎಕರೆಗೂ ಹೆಚ್ಚು ಭೂಮಿಯನ್ನು ಗುರುತಿಸಿ ಈ ಭೂಪ್ರದೇಶವನ್ನು ಕೆಂಪುವಲಯ ವೆಂದು ಘೋಷಿಸಿತ್ತು. ಅಂದಿನ ಸಚಿವ ಸಂಪುಟ ದಲ್ಲಿ ಅನುಮೋದನೆಯಾಗಿ ಸರ್ಕಾರದ ಸುತ್ತೋಲೆ ಹೊರಡಿಸಲಾಗಿತ್ತು.

ದೇಶದ ಸಂವಿಧಾನ ಅತ್ಯಂತ ಪವಿತ್ರವಾದುದ್ದು; ಧಕ್ಕೆಯಾಗದಂತೆ ನೋಡಿಕೊಳ್ಳಬೇಕು: ಖಾದರ್

ಅಂದಹಾಗೆ ಕಂಪು ವಲಯಕ್ಕೆ ಭೈರಮಂಗಲ ಗ್ರಾಪಂನ 5 ಹಾಗೂ ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ 7 ಸೇರಿ ಒಟ್ಟು 12 ಕಂದಾಯ ಗ್ರಾಮಗಳ ಜೊತೆ ಗೆ ಇತರೆ 11 ಸಣ್ಣ ಗ್ರಾಮಗಳನ್ನು ಒಳಗೊಂಡ ಭೂಗ್ರದ ಈ ಸೇರ್ಪಡೆಯಾಗಿದೆ. ಈ ಮಹತ್ವಾ ಕಾಂಕ್ಷೆ ಯೋಜನೆಯನ್ನು ಡಿಎಲ್‌ ಎಫ್‌ ಎಂಬ ಖಾಸಗಿ ಕ೦ಪನಿಯ ಸಹಭಾಗಿತ್ವದಲ್ಲಿ ಅನುಷ್ಠಾನ ಗೊಳಿಸಲು ಅಂದಿನ ರಾಜ್ಯ ಸರಕಾರ ಒಪ್ಪಂದವನ್ನೂ ಮಾಡಿಕೊಂಡಿತ್ತು.

ಟೌನ್‌ ಶಿಪ್‌ ಗೆ ಸೇರಿದ ಗ್ರಾಮಗಳು

ಭೈರಮಂಗಲ ಗ್ರಾಪಂ ಸರಹದ್ದಿನ ಕಂದಾಯ ಗ್ರಾಮಗಳಾದ ಭೈರಮಂಗಲ, ಕೋಡಿಹಳ್ಳಿ, ಬನ್ನಿಗಿರಿ, ಅಂಚೀಪುರ, ಮಂಡಲಹಳ್ಳಿ ಕಂಚುಗಾರನಹಳ್ಳಿ ಗ್ರಾಪಂನ ಕಂಚುಗಾರನಹಳ್ಳಿ, ಕಾವಲ್, ಹೊಸೂರು, ಅರಳಾಳುಸಂದ್ರ, ಕೆಂಪಯ್ಯನಪಾಳ್ಯ, ಕೆ.ಜಿ.ಹೊಸಹಳ್ಳಿ ಹಾಗೂ ತಾಯಪ್ಪನದೊಡ್ಡಿ ಜೊತೆಗೆ 11 ಸಣ್ಣ ಗ್ರಾಮಗಳು ಸೇರಿಸಲಾಗಿತ್ತು ಬಿಡದಿ ಮತ್ತು ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ನಡುವೆ ಕೇವಲ 1 9.ಮೀ ಅಂತರ ಹಾಗೂ ಬೆಂಗಳೂರು ದಕ್ಷಿಣ ತಾಲೂಕಿಗೆ ಹೊಂದಿಕೊಂಡಂತೆ 9600 ಎಕರೆ ಭೂಪ್ರದೇಶವನ್ನು ಉಪನಗರ ನಿರ್ಮಾಣಕ್ಕೆ ಗುರುತಿಸಲಾಗಿದೆ.

ಡಿ.ಕೆ.ಸಹೋದರರ ದಬ್ಬಾಳಿಕೆಗೆ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ: ಎಚ್‌ಡಿಕೆ

ಭೂಮಿ ಮಾರಾಟಕ್ಕೆ ಕುತ್ತು

ಇನ್ನೂ ಕೆಂಪುವಲಯ ವ್ಯಾಪ್ತಿಗೆ ಒಳಗೊಂಡಿರುವ ಭೂ ಪ್ರದೇಶದಲ್ಲಿ ಕೈಗಾರಿಕೆ ವಸಾಹತು, ಹೊಸ ಬಡಾ ವಣೆಗಳ ನಿರ್ಮಾಣ ಅಥವಾ ಸಂಘ ಸಂಸ್ಥೆಗಳ ವಿವಿದ್ದೋದ್ದೇಶಗಳಿಗೆ ಭೂಮಿಯನ್ನು ಬಳಕೆ ಮಾಡದಂತೆ ನಿರ್ಬಂಧ ಹೇರಲಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ನಿರಾಪೇಕ್ಷಣಾ(ಎನ್‌ ಒಸಿ) ಪತ್ರ ನೀಡದೆ.

ಒಟ್ಟಾರೆ ತುಂಡು ಭೂಮಿಯನ್ನೂ ಸಹ ಮಾರಾಟ ಮಾಡದಂತಹ ಕಟ್ಟುನಿಟ್ಟಿನ ಆದೇಶದಿಂದ ರೈತರು ತಮ್ಮ ಕಷ್ಟಸುಖಗಳಿಗೆ ಒಂದು ಗುಂಟೆ ಜಮೀನು ಮಾರಾಟ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿ ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಟೌನ್ ಶಿಪ್' ಎಂಬ ಬಿಳಿಯಾನೆಯನ್ನು ನಂಬಿಕೊಂಡ ರೈತರು ತಮ್ಮ ಮಕ್ಕಳ ವಿವಾಹ, ಬ್ಯಾಂಕ್‌ ಸಾಲ, ಇನ್ನಿತರ ಕೈಸಾಲ ತೀರಿಸಲಾಗದೆ 10 ಕ್ಕೂ ಹೆಚ್ಚು ಭೂ ಮಾಲಿಕರ ಆತ್ಮಹತ್ಯೆಗೆ ಶರಣಾದ ಉದಾಹರಣೆಗಳಿವೆ ಎಂದು ಸ್ಥಳೀಯರು ಹೇಳುತ್ತಾರೆ.

Follow Us:
Download App:
  • android
  • ios