Haveri News: ಗಗನಕ್ಕೇರಿದ ಬೆಲೆ; ಗ್ರಾಹಕರ ಬಾಯಿ ಸುಡುತ್ತಿದೆ ವೀಳ್ಯದೆಲೆ!
ನವಾಬರ ಕಾಲದಿಂದಲೂ ಪ್ರಸಿದ್ಧಿ ಪಡೆದಿರುವ ಸವಣೂರಿನ ವೀಳ್ಯದೆಲೆಗೆ ಈಗ ಬಂಗಾರದ ಬೆಲೆ ಬಂದಿದೆ. ಬಾಯಿ ರುಚಿ ಹೆಚ್ಚಿಸುತ್ತಿದ್ದ ವೀಳ್ಯದೆಲೆ ಈಗ ತಲುಬಿನವರ ಬಾಯಿ ಸುಡುತ್ತಿದೆ. .70ರಿಂದ . 80 ಇದ್ದ ಒಂದು ಕಟ್ಟು (100) ವೀಳ್ಯದೆಲೆ ಬೆಲೆ ಈಗ . 180ರಿಂದ . 200ಕ್ಕೇರಿದೆ.
ನಾರಾಯಣ ಹೆಗಡೆ
ಹಾವೇರಿ (ಫೆ.23) : ನವಾಬರ ಕಾಲದಿಂದಲೂ ಪ್ರಸಿದ್ಧಿ ಪಡೆದಿರುವ ಸವಣೂರಿನ ವೀಳ್ಯದೆಲೆಗೆ ಈಗ ಬಂಗಾರದ ಬೆಲೆ ಬಂದಿದೆ. ಬಾಯಿ ರುಚಿ ಹೆಚ್ಚಿಸುತ್ತಿದ್ದ ವೀಳ್ಯದೆಲೆ ಈಗ ತಲುಬಿನವರ ಬಾಯಿ ಸುಡುತ್ತಿದೆ. .70ರಿಂದ . 80 ಇದ್ದ ಒಂದು ಕಟ್ಟು (100) ವೀಳ್ಯದೆಲೆ ಬೆಲೆ ಈಗ . 180ರಿಂದ . 200ಕ್ಕೇರಿದೆ.
ಪೂಜೆ, ಮದುವೆ ಸೇರಿದಂತೆ ಧಾರ್ಮಿಕ ಸಮಾರಂಭಗಳಲ್ಲಿ ವೀಳ್ಯದೆಲೆ(betel leaf) ಅಗ್ರಸ್ಥಾನ ಪಡೆದಿದೆ. ಅದರಲ್ಲಿಯೂ ಉತ್ತರ ಕರ್ನಾಟಕ(North Karnataka) ಭಾಗದಲ್ಲಿ ಎಲೆ-ಅಡಕೆ ಹಾಕುವ ಮಂದಿ ಹೆಚ್ಚು. ಚಟ ಮಾಡದವರೂ ನಿತ್ಯ ಊಟವಾದ ಮೇಲೆ ಎಲೆಯಡಿಕೆ ಮೆಲ್ಲುವುದು ರೂಢಿ. ಆದರೆ, ಈಗ ವೀಳ್ಯದೆಲೆಗೆ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಬಂದಿದ್ದು, ಗ್ರಾಹಕರ ಕೈ ಸುಡುತ್ತಿದೆ.
Chitradurga: ಬಾಯಿ ಸುಡುತ್ತಿದೆ ವೀಳ್ಯದೆಲೆ: ಬೆಲೆ ಕಂಡು ಶಾಕ್ ಆದ ಗ್ರಾಹಕರು!
ಕಳೆದ 15 ದಿನದಿಂದ ಜಿಲ್ಲೆಯ ಮಾರುಕಟ್ಟೆಯಲ್ಲಿ ವೀಳ್ಯೆದೆಲೆಯ ಬೆಲೆ ಬರೋಬ್ಬರಿ ಮೂರುಪಟ್ಟು ಹೆಚ್ಚಳ ಕಂಡು ಬಂದಿದೆ. ಒಂದು ಕಟ್ಟು (100 ಎಲೆ) ವೀಳ್ಯದೆಲೆ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ . 60ರಿಂದ . 70ಗೆ ಮಾರಾಟ ಆಗುತ್ತದೆ. ಬೇಸಿಗೆ ಸೀಸನ್‌ನಲ್ಲಿ ಗರಿಷ್ಠ ಎಂದರೂ . 70ರಿಂದ . 80ರೊಳಗೆ ಒಂದು ಕಟ್ಟು ಎಲೆ ಸಿಗುತ್ತಿತ್ತು. ಈ ಎಲ್ಲ ದಾಖಲೆಗಳನ್ನು ಮುರಿದು ದರದಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ.
ಗ್ರಾಹಕರು ಕಂಗಾಲು:
ಸಾಮಾನ್ಯವಾಗಿ ಬೇಸಿಗೆಯಲ್ಲಿ ಬೇಡಿಕೆ ಹೆಚ್ಚಿ, ಪೂರೈಕೆ ಕಡಿಮೆಯಾಗುವುದರಿಂದ ವೀಳ್ಯದೆಲೆ ದರ ಏರಿಕೆಯಾಗಿರುತ್ತದೆ. ಆಗೆಲ್ಲ ಬಂಗಾರದ ಬೆಲೆ ಕಾಣುತ್ತಿದ್ದ ಬೆಳೆಗಾರರು ಈ ಸಲ ಅದಕ್ಕಿಂತ ಹೆಚ್ಚಿನ ಬೆಲೆ ಕಂಡು ಸ್ವತಃ ಬೆಳೆಗಾರರೇ ಆಶ್ಚರ್ಯಗೊಂಡಿದ್ದಾರೆ.
ಗ್ರಾಹಕರಂತೂ ಬೆಲೆ ಏರಿಕೆಗೆ ಕಂಗಾಲಾಗಿದ್ದಾರೆ. ಔಷಧಿ ಗುಣವುಳ್ಳ ವೀಳ್ಯದೆಲೆ ಹೆಚ್ಚಾಗಿ ಬಳಕೆ ಮಾಡುವುದನ್ನು ನಾವು ನೋಡಿದ್ದೇವೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಕುಟುಂಬದ ಎಲ್ಲರೂ ಎಲೆಯಡಿಕೆ ಹಾಕುವುದು ಸಂಪ್ರದಾಯ. ಇನ್ನು ಎಲೆಯೊಂದಿಗೆ ತಂಬಾಕು, ಅಡಕೆ ಹಾಕಿ ದಿನವಿಡಿ ಮೆಲ್ಲುವ ಮಂದಿಯೂ ಸಾಕಷ್ಟಿದ್ದಾರೆ. ಧಾರ್ಮಿಕ ಕಾರ್ಯಕ್ರಮ, ಹಬ್ಬ ಹರಿದಿನ, ಮದುವೆ, ನಾಮಕರಣ, ಗೃಹಪ್ರವೇಶ ಸೇರಿದಂತೆ ಶುಭ ಸಮಾರಂಭಗಳಲ್ಲಿ ವೀಳ್ಯೆದೆಲೆ ಬೇಕೇಬೇಕು.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಮಾರುಕಟ್ಟೆಯಲ್ಲಿ ಗಗನಮುಖಿಯಾಗಿದೆ. ಇದರ ನಡುವೆ ಈಗ ಬೆಲೆ ಏರಿಕೆ ಸರದಿ ವೀಳ್ಯೆದೆಲೆಯದಾಗಿದ್ದು, ಎಲೆ-ಅಡಕೆ ಹಾಕಿಕೊಳ್ಳುವವರ ಬಾಯಿ ಸುಡುವಂತೆ ಬೆಲೆ ದುಪ್ಪಟ್ಟುಗೊಂಡಿದೆ.
ಅತಿವೃಷ್ಟಿಯಲ್ಲಿ ತೋಟ ಹಾನಿ:
ಅರೆಮಲೆನಾಡು ಪ್ರದೇಶವಾದ ಜಿಲ್ಲೆಯ ಸವಣೂರು ತಾಲೂಕು, ಹಾವೇರಿ ತಾಲೂಕಿನ ಗುತ್ತಲ, ನೆಗಳೂರು, ಹಾವನೂರ, ಕನವಳ್ಳಿ ಗ್ರಾಮ ಹಾಗೂ ಹಾನಗಲ್ಲ ಹಾಗೂ ಶಿಗ್ಗಾಂವಿ ತಾಲೂಕಿನ ವಿವಿಧೆಡೆ ವೀಳ್ಯೆದೆಲೆ ತೋಟ ವಿಸ್ತರಗೊಳ್ಳುತ್ತಿವೆ. ಕಳೆದ ವರ್ಷ ಸುರಿದ ಅತಿವೃಷ್ಟಿವೇಳೆ ಎಲೆಬಳ್ಳಿ ತೋಟಗಳು ಸಂಪೂರ್ಣವಾಗಿ ನಾಶಗೊಂಡಿದ್ದವು. ಕೆಲವು ಕಡೆ ಎಲೆಬಳ್ಳಿ ಕೊಳೆತು ಹೋಗಿದ್ದವು. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ವೀಳ್ಯೆದೆಲೆ ಮಾರುಕಟ್ಟೆಗೆ ಆಗಮಿಸದ ಪರಿಣಾಮ ಬೆಲೆ ಹೆಚ್ಚಳ ಕಂಡಿದೆ ಎನ್ನುವ ಮಾತುಗಳು ವ್ಯಾಪಾರಸ್ಥರಿಂದ ಕೇಳಿ ಬರುತ್ತಿದೆ. ಅಲ್ಲದೇ ಕಡಿಮೆ ಖಾರ ಇರುವ ಸವಣೂರು ವೀಳ್ಯದೆಲೆಗೆ ಎಲ್ಲೆಡೆ ಬೇಡಿಕೆ ಬಂದಿರುವುದರಿಂದ ವಿವಿಧೆಡೆ ಪೂರೈಕೆಯಾಗುತ್ತಿದೆ.
ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆ ತಿಂದ್ನೋಡಿ .. ಇದೆ ಇಷ್ಟೊಂದು ಲಾಭ
ಮಾರುಕಟ್ಟೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ವೀಳ್ಯೆದೆಲೆ ಪೂರೈಕೆಯಾಗುತ್ತಿಲ್ಲ. ಮಳೆಗಾಲದ ವೇಳೆ 10-12 ಬಂಡಲ್ ವೀಳ್ಯೆದೆಲೆ ಪೂರೈಕೆ ಆಗುತ್ತಿತ್ತು. ಆದರೆ ಈಗ 2-3 ಬಂಡಲ್ ಅಷ್ಟೇ ಪೂರೈಕೆಯಾಗುತ್ತಿದೆ. ಅಧಿಕ ತೇವಾಂಶದಿಂದಾಗಿ ಎಲೆಬಳ್ಳಿ ವಿವಿಧ ರೋಗಕ್ಕೆ ತುತ್ತಾಗಿ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬರುತ್ತಿಲ್ಲ. ಉತ್ತಮ ದರವಿದ್ದರೂ ಉತ್ಪಾದನೆ ಕುಸಿದಿದೆ.
ಶಫೀದ್‌ಅಹ್ಮದ್ ಮುಲ್ಲಾ ಎಲೆ ವ್ಯಾಪಾರಿ
ಕಳೆದ ವರ್ಷ ಸುರಿದ ಅತಿವೃಷ್ಟಿಯಿಂದ ಎಲೆ ತೋಟದಲ್ಲಿ ಬಳ್ಳಿ ಕೊಳೆತು ಹಾನಿಯಾಗಿದೆ. ಸದ್ಯ ಬೀಸುತ್ತಿರುವ ಮೂಡುಗಾಳಿಗೆ ಎಲೆಬಳ್ಳಿಗಳು ಒಣಗುತ್ತಿದೆ. ತೋಟ ಉಳಿಸಿಕೊಳ್ಳುವುದೇ ಸವಾಲಾಗಿದೆ. ಸದ್ಯ ಉತ್ತಮ ದರ ಸಿಕ್ಕಿರುವುದು ಖುಷಿಯಾಗಿದೆ.
ರಮೇಶ ಹಾವನೂರ ಬೆಳೆಗಾರ