Asianet Suvarna News Asianet Suvarna News

ಊಬರ್ ಚಾಲಕನ ಉಪಟಳ, ಮಹಿಳಾ ಟೆಕ್ಕಿಗೆ ಕಿರುಕುಳ

ಬೆಂಗಳೂರಿನಲ್ಲಿ ಊಬರ್ ಚಾಲಕರು ಮತ್ತೆ ಬಾಲ ಬಿಚ್ಚಿದ್ದಾರೆ. ಮಹಿಳಾ ಟೆಕ್ಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದು ಟೆಕ್ಕಿಯ ಸಹೋದರಿ ಟ್ವಿಟರ್ ಮೂಲಕ ದೂರು ದಾಖಲಿಸಿದ್ದಾರೆ.

Bengaluru Uber taxi driver misbehaved with lady techie

ಬೆಂಗಳೂರು[ಜು.11]  ಮಹಿಳೆ ಆನ್ ಲೈನ್ ಸೇವೆ ಊಬರ್ ನಂಬಿಕೊಂಡು ಟ್ಯಾಕ್ಸಿ ಏರಿದ್ದರು. ಆದರೆ  ಟ್ರಾಫಿಕ್ ಎಂಬ ಕಾರಣ ನೀಡಿದ ಚಾಲಕ ಟ್ರಿಪ್ ಕ್ಯಾನ್ಸಲ್ ಮಾಡುತ್ತೇನೆ ಎಂದು ಹೇಳಿದ್ದಲ್ಲದೇ ಅರ್ಧ ದಾರಿಯಲ್ಲೇ ಟೆಕ್ಕಿಯನ್ನು ಇಳಿಸಿ ನಡೆದಿದ್ದಾನೆ

 ಮಾರ್ಗದಲ್ಲಿ ಹೆಚ್ಚಿನ ಟ್ರಾಫಿಕ್ ಇದೆ. ಹೋಗಲು ಸಾಧ್ಯವಿಲ್ಲ.. ಟ್ರಿಪ್ ಕ್ಯಾನ್ಸಲ್ ಮಾಡಿ ಎಂದು ಚಾಲಕ ಒತ್ತಡ ಹಾಕಿದ್ದಾನೆ. ಆದರೆ ಇದಕ್ಕೆ ಮಹಿಳೆ ಒಪ್ಪಿಲ್ಲ. ನಂತರ ಬೇರೆ ರಸ್ತೆಯೊಂದರಲ್ಲಿ ಕರೆದುಕೊಂಡು ಹೋಗಿ ಯಾರು ಇರದ ಜಾಗದಲ್ಲಿ ಮಹಿಳೆಯನ್ನು ಬಲವಂತವಾಗಿ ಇಳಿಸಿ ಹೋಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದಕ್ಕೂ ಮೊದಲು ಈ ಕ್ಷಣವೇ ಟ್ರಿಪ್ ರದ್ದು ಪಡಿಸುತ್ತೇನೆ. ಏನು ಬೇಕಾದರೂ ಮಾಡಿಕೊಳ್ಳಿ ಎಂದು ಚಾಲಕ ತನ್ನ ಮಹಿಳೆಗೆ ಬೆದರಿಕೆ ಕಾಕಿ  ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಊಬರ್ ಕ್ಯಾಬ್ ಕೆಎ 42, ಎ 4695 ಇಟಿಯೋಸ್ ಕಾರಿನ ಚಾಲಕನ ಮೆಲೆ ದೂರು ದಾಖಲಾಗಿದ್ದು  ಈ ಹಿಂದೆ ಜೀವನ್‍ಭೀಮಾನಗರ ಹಾಗೂ ಚಿಕ್ಕಜಾಲದಲ್ಲಿಯೂ ಇಂತದೇ ಎರಡು ಪ್ರಕರಣಗಳು  ನಡೆದಿದ್ದವು.

Bengaluru Uber taxi driver misbehaved with lady techie

Follow Us:
Download App:
  • android
  • ios